Netflix Free: ಇಂದು ಮತ್ತು ನಾಳೆ ನೀವು ಉಚಿತವಾಗಿ Netflix ಬಳಸಬಹುದು, ಹೀಗೆ ಲಾಭ ಪಡೆಯಿರಿ

ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಸೇವೆ ಒದಗಿಸುವ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿರುವ (Netflix) ಈ ವಾರಾಂತ್ಯ ಅಂದರೆ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಎಲ್ಲಾ ಭಾರತೀಯರಿಗೆ ಉಚಿತ ಸೇವೆ ನೀಡಲಿದೆ.  

Last Updated : Dec 5, 2020, 12:03 PM IST
  • ಈ ವಾರಾಂತ್ಯದಲ್ಲಿ ನೀವು Netflix ಕಂಟೆಂಟ್ ಅನ್ನು ಉಚಿತವಾಗಿ ಆನಂದಿಸಬಹುದು.
  • ಡಿಸೆಂಬರ್ 5 ರಿಂದ 6ರವರೆಗೆ Netflix ಭಾರತೀಯರಿಗಾಗಿ StreamFest ಆಯೋಜಿಸಿದೆ.
  • ಇದರಲ್ಲಿ ಪಾಲ್ಗೊಳ್ಳಲು ನೀವು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ.
Netflix Free: ಇಂದು ಮತ್ತು ನಾಳೆ ನೀವು ಉಚಿತವಾಗಿ Netflix ಬಳಸಬಹುದು, ಹೀಗೆ ಲಾಭ ಪಡೆಯಿರಿ title=

ನವದೆಹಲಿ: How to access Netflix Free: ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಸೇವೆ ಒದಗಿಸುವ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿರುವ (Netflix) ಈ ವಾರಾಂತ್ಯ ಅಂದರೆ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಎಲ್ಲಾ ಭಾರತೀಯ ಗ್ರಾಹಕರಿಗೆ ಉಚಿತ ಸೇವೆ ನೀಡಲಿದೆ. ನೆಟ್‌ಫ್ಲಿಕ್ಸ್ ಡಿಸೆಂಬರ್ 5 ಮತ್ತು 6 ರಂದು ಸ್ಟ್ರೀಮ್‌ಫೆಸ್ಟ್ ಅನ್ನು ಆಯೋಜಿಸಿದೆ. ಈ ವಾರಾಂತ್ಯದಲ್ಲಿ, ಭಾರತದಲ್ಲಿ ಯಾರು ಬೇಕಾದರೂ ನೆಟ್‌ಫ್ಲಿಕ್ಸ್‌ಗೆ ಉಚಿತ ಪ್ರವೇಶ ಪಡೆಯಬಹುದು. ಸ್ಟ್ರೀಮ್‌ಫೆಸ್ಟ್‌ಗಾಗಿ ಸೈನ್ ಅಪ್ ಮಾಡುವಾಗ ನೀವು ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಹಂಚಿಕೊಳ್ಳುವ ಅಗತ್ಯವಿಲ್ಲ.

ಇದನ್ನು ಓದಿ- ಚಿತ್ರ ವೀಕ್ಷಣೆಗೆ ಈ OTT Platform ಗಳು ಹಣ ನೀಡುತ್ತವಂತೆ ! ಕೇವಲ ಈ ಕೆಲಸ ಮಾಡಿ

ಆದರೆ ಈ ಉಚಿತ ಆಕ್ಸರ್ ಸದಸ್ಯರಲ್ಲದವರಿಗೆ ಮಾತ್ರ ಎಂಬುದು ನೆನಪಿರಲಿ  ಮತ್ತು ಈಗಾಗಲೇ ಅವರು ಸೇವೆಗೆ ಸೈನ್ ಅಪ್ ಆಗಿರಬಾರದು . ನೆಟ್ಫ್ಲಿಕ್ಸ್ ಯೋಜನೆಗಳು ತಿಂಗಳಿಗೆ 199 ರೂ.ಗಳಿಂದ ಆರಂಭಗೊಳ್ಳುತ್ತವೆ. 199 ರೂ ಯೋಜನೆ ಮೊಬೈಲ್ ಫೋನ್‌ಗಳಿಗೆ ಮಾತ್ರ ಸೀಮಿತವಾಗಿದೆ. ಪ್ರೀಮಿಯಂ ಯೋಜನೆಗೆ ಗರಿಷ್ಠ ತಿಂಗಳಿಗೆ 799 ರೂ. ಇದೆ. ಈ ಉಚಿತ ಕೊಡುಗೆ ಡಿಸೆಂಬರ್ 6 ರಂದು ರಾತ್ರಿ 11.59 ರವರೆಗೆ ನಡೆಯಲಿದೆ. ಭಾರತದ ಯಾವುದೇ ವ್ಯಕ್ತಿ ನೆಟ್ ಫ್ಲಿಕ್ಸ್  ಸೇವೆಯನ್ನು ಪ್ರವೇಶಿಸಲು ಸಾಧ್ಯವಾಗಲಿದ್ದು ಮತ್ತು ಎಲ್ಲಾ ಕೆಂಟೆಂಟ್ ಲೈಬ್ರರಿ ಉಚಿತವಾಗಿ ನೋಡಬಹುದಾಗಿದೆ ಎಂದು ನೆಟ್ ಫ್ಲಿಕ್ ಇಂಡಿಯಾ ಅಧಿಕಾರಗಳು ಹೇಳಿದ್ದು, ಇದರಲ್ಲಿ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂದಿದ್ದಾರೆ.

ಇದನ್ನು ಓದಿ-ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ

Netflix StreamFest ಗೆ ಹೇಗೆ ಸೈನ್ ಅಪ್ ಆಗಬೇಕು?
- ಒಂದು ವೇಳೆ ನೀವೂ ಕೂಡ ಎರಡು ದಿನಗಳ ಕಾಲ ಉಚಿತ Netflix ಬಳಸಲು ಬಯಸುತ್ತಿದ್ದರೆ Netflix.com/StreamFest ಗೆ ಭೇಟಿ ನೀಡಿ.
- ನೀವು ಅಂಡ್ರಾಯಿಡ್ ಆಪ್ ಅನ್ನು ಸಹ ಡೌನ್ಲೋಡ್ ಮಾಡಬಹುದು.
- ಬಳಿಕ ನೀವು ನಿಮ್ಮ ಹೆಸರು, ಇ-ಮೇಲ್ ಹಾಗೂ ಫೋನ್ ನಂಬರ್ ಮತ್ತು ಪಾಸ್ವರ್ಡ್ ಬಳಸಿ ಸೈನ್ ಅಪ್ ಆಗಬಹುದು. ನೀವು ಇದಕ್ಕಾಗಿ ಯಾವುದೇ ರೀತಿಯ ಹಣ ಪಾವತಿಸಬೇಕಾಗಿಲ್ಲ.

ಇದನ್ನು ಓದಿ-Netflix-ಅಮೆಜಾನ್ ಪ್ರೈಮ್ನಲ್ಲಿ ಮೂವೀಸ್, ವೆಬ್ ಸರಣಿಗಳನ್ನು ಉಚಿತವಾಗಿ ವೀಕ್ಷಿಸಿ

Netflix ಉಚಿತವಾಗಿ ಬಳಸುವ ಇನ್ನೊಂದು ವಿಧಾನ
ವೊಡಾಫೋನ್ ಐಡಿಯಾದ ಪೋಸ್ಟ್‌ಪೇಯ್ಡ್ ಬಳಕೆದಾರರು ಒಂದು ವರ್ಷದವರೆಗೆ ಉಚಿತ ನೆಟ್‌ಫ್ಲಿಕ್ಸ್ ಪಡೆಯಬಹುದು. ಆದರೆ ಇದಕ್ಕಾಗಿ, ನೀವು ಮಾಸಿಕ 1099 ರೂ.ಗಳ ಯೋಜನೆ ತೆಗೆದುಕೊಳ್ಳಬೇಕಾಗಿದೆ, ಇದು ಆರು ತಿಂಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಈ ಪ್ಲಾನ್ ನಲ್ಲಿ ಒಂದು ವರ್ಷದ ನೆಟ್‌ಫ್ಲಿಕ್ಸ್ ಸೇವೆ  ಉಚಿತವಾಗಿ ಲಭ್ಯವಿದೆ ಮತ್ತು ನಿಮ್ಮ ಒಟ್ಟು ಲಾಭವು ವರ್ಷಕ್ಕೆ 5,988 ರೂ ಇರಲಿದೆ. ಇದರಲ್ಲಿ, ವೊಡಾಫೋನ್ ಪೋಸ್ಟ್‌ಪೇಯ್ಡ್‌ನೊಂದಿಗೆ 499 ರೂಪಾಯಿಗಳ ಪ್ಲಾನ್ ನಲ್ಲಿಯೂ ಕೂಡ ನೀವು ಉಚಿತ ಪ್ರವೇಶವನ್ನು ಪಡೆಯಬಹುದು.

Trending News