9 ವರ್ಷ ಪೂರೈಸಿದ ಡಾನ್ 2 : ಡಾನ್ 3 ಚಿತ್ರ ನಿರ್ಮಾಣಕ್ಕೆ ಅಭಿಮಾನಿಗಳ ಒತ್ತಾಯ

9 ವರ್ಷ ಪೂರೈಸಿದ ಡಾನ್ 2 ಸಿನೆಮಾ. ಸಂಭ್ರಮಾಚರಣೆ ವೇಳೆ ಡಾನ್ 3 ಚಿತ್ರ ನಿರ್ಮಾಣಕ್ಕೆ ಕೇಳಿಬಂತು ಒತ್ತಾಯ.  

Last Updated : Dec 24, 2020, 01:04 PM IST
  • ಡಾನ್ 2 ಚಿತ್ರ ತೆರೆಕಂಡು 9 ವರ್ಷ
  • 9 ವರ್ಷ ಪೂರೈಸಿದಕ್ಕೆ ಸಂಭ್ರಮಾಚರಿಸಿದ ನಿರ್ಮಾಪಕ
  • ಡಾನ್ 3 ನಿರ್ಮಾಣಕ್ಕೆ ಅಭಿಮಾನಿಗಳ ಒತ್ತಾಯ
9 ವರ್ಷ ಪೂರೈಸಿದ ಡಾನ್ 2 : ಡಾನ್ 3 ಚಿತ್ರ ನಿರ್ಮಾಣಕ್ಕೆ ಅಭಿಮಾನಿಗಳ ಒತ್ತಾಯ title=
ಡಾನ್ 3 ಚಿತ್ರ ನಿರ್ಮಿಸುವಂತೆ ಫರ್ಹಾನ್ ಗೆ ಅಭಿಮಾನಿಗಳ ಒತ್ತಾಯ(file photoe)

ನವದೆಹಲಿ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ಡಾನ್ 2 ಚಿತ್ರ ತೆರೆ ಕಂಡು 9ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಫರಾನ್ ಅಖ್ತಾರ್ ಬುಧವಾರ ಚಿತ್ರದ 9ನೇ ವರ್ಷಾಚರಣೆಯನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಡಾನ್ 3 ಚಿತ್ರ ನಿರ್ಮಿಸುವಂತೆ ಒತ್ತಾಯ ಕೇಳಿ ಬಂತು.

ಆಕ್ಷನ್ ಥ್ರಿಲ್ಲರ್ ಡಾನ್ 2 (Don 2) ಚಿತ್ರದಲ್ಲಿ ಶಾರುಖ್ ಖಾನ್ (Sharukh Khan) ಜೊತೆ ಪ್ರಿಯಾಂಕ ಜೋಪ್ಡಾ, ಬೊಮ್ಮನ್ ಇರಾನಿ, ಓಂಪುರಿ, ಲಾರಾ ದತ್ತಾ ಅಭಿನಯಿಸಿದ್ದರು.  ಡಾನ್ 2 1878ರಲ್ಲಿ ಬಿಡುಗಡೆಯಾದ ಡಾನ್ ಚಿತ್ರದ ರಿಮೇಕ್ ಆಗಿದೆ. ಡಾನ್ ಸಿನೆಮಾದಲ್ಲಿ (Cinema) ಅಮಿತಾಬ್ ಬಚ್ಚನ್ ಡಾನ್ ಪಾತ್ರದಲ್ಲಿ ಮಿಂಚಿದ್ದರು. ಸಂಪೂರ್ಣ ಚಿತ್ರ ಮಾಫಿಯಾ ಡಾನ್ ರೂಪದಲ್ಲಿ ಭೂಗತ ಜಗತ್ತಿಗೆ ಪ್ರವೇಶ ಮಾಡಿ ಅಲ್ಲಿನ ಗತಿವಿಧಿಗಳನ್ನು ತಿಳಿದುಕೊಳ್ಳುವ ರಹಸ್ಯ ಕಾರ್ಯಾಚರಣೆಯ ಕಥಾ ಹಂದರವನ್ನು ಹೆಣೆದುಕೊಂಡಿತ್ತು. ಚಿತ್ರ ನಿರ್ಮಾಪಕ ಫರಾನ್ ಅಖ್ತಾರ್ (Farhan Akthar) ಡಾನ್ 2 ಚಿತ್ರದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಚಿತ್ರ ತೆರೆಗೆ ಬಂದು 9 ವರ್ಷಗಳಾಯಿತು. ಚೇಸ್ ಇನ್ನೂ ಮುಂದುವರೆದಿದೆ ಎಂದು ಬರೆದುಕೊಂಡಿದ್ದಾರೆ.

ALSO READ: Sharukh Khan ನಲ್ಲಿ ನಿಮಗೇನು ಇಷ್ಟ? ಎಂದು ಕೇಳಿದವನಿಗೆ Kajol ನೀಡಿದ ಉತ್ತರ ಇದು

ಫರಾನ್ ಅಖ್ತಾರ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿ ಡಾನ್ 3 ಚಿತ್ರ ನಿರ್ಮಿಸುವಂತೆ ಒತ್ತಾಯ ಮಾಡಲು ಆರಂಭಿಸಿದ್ದಾರೆ. ಒಬ್ಬ ಅಭಿಮಾನಿ ದಯವಿಟ್ಟುಡಾನ್ 3 (Don 3) ನಿರ್ಮಿಸುವ ಬಗ್ಗೆ ಪ್ರಕಟಿಸಿ ಎಂದು ಕೇಳಿಕೊಂಡರೆ, ಮತ್ತೊಬ್ಬ ವಿ ವಾಂಟ್ ಡಾನ್ 3 ಎಂದು ಒತ್ತಾಯಿಸಿದ್ದಾರೆ. ಅಲ್ಲದೆ 2021ರ ವೇಳೆಗೆ ಡಾನ್ 3 ಚಿತ್ರವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News