ನವದೆಹಲಿ: 78 ವರ್ಷದ ಬಾಲಿವುಡ್ ನಟಅಮಿತಾಬ್ ಬಚ್ಚನ್ ಮರಗಟ್ಟುವ ಚಳಿಯಲ್ಲೂ ಲಡಾಖ್ ಗೆ ತೆರಳಿ ಚಿತ್ರೀಕರಣ ಮುಗಿಸಿ ಬಂದಿರುವ ವಿಚಾರ ಈಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಬಿಗ್ ಬಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅದರಲ್ಲಿ ಲಡಾಖ್ ಗೆ ಹೋಗಿ ಬಂದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.. ಅದರಲ್ಲಿ ಅವರ ಫೋಟೋ ಜೊತೆ ಒಂದಿಷ್ಟು ಬರಹವೂ ಇದೆ. ಅಮಿತಾಬ್ ಬರೆದುಕೊಂಡಿರುವ ಪ್ರಕಾರ, ‘’ದಿನ ಪೂರ್ತಿ ಕೆಲಸ ಮಾಡಿದ ನಂತರವೂ ಲಡಾಖ್ ಗೆ ಹೋಗಿ ವಾಪಾಸ್ ಬಂದಿದ್ದೇನೆ. ಅಲ್ಲಿ ಈಗಿನ ತಾಪಮಾನ ಮೈನಸ್ 33. ಹೆಪ್ಪುಗಟ್ಟಿಸುವ ರಕ್ಕಸ ಚಳಿ ನಿಮ್ಮನ್ನು ಹರಿದು ಮುಕ್ಕಲಿದೆ ಎಂದು ಅನ್ನಿಸುತಿತ್ತು ಎಂದಿದ್ದಾರೆ.
ಫೋಟೋದಲ್ಲಿ ಕಾಣಿಸಿಕೊಂಡಿರುವ ಬಿಗ್ ಬಿ (Amitabh Bachchan) ಕೊರೆಯುವ ಚಳಿಗೆ ಬೇಕಾದ ದಿರಿಸುಗಳನ್ನು ಹಾಕಿಕೊಂಡಿದ್ದಾರೆ. ದಪ್ಪನೆಯ ಜಾಕೆಟ್, ವಿಂಟರ್ ಗ್ಲಾಸ್, ವಿಂಟರ್ ಕ್ಯಾಪ್ ಹಾಕಿ ಕೊಂಡಿದ್ದಾರೆ. “ಇವೆಲ್ಲಾ ಇದ್ದರೂ ಮರಗಟ್ಟುವ ಚಳಿಯಿಂದ ಪಾರಾಗಲು ಸಾಧ್ಯವಿಲ್ಲ” ಎಂದಿದ್ದಾರೆ ಸೀನಿಯರ್ ಬಚ್ಚನ್ .
T 3774 - ... went to Ladakh and back .. minus 33 degrees .. even this could ot save me from the cold .. !! pic.twitter.com/I2BduanyYY
— Amitabh Bachchan (@SrBachchan) January 5, 2021
ಇದನ್ನೂ ಓದಿ : Sonu Sood : ಕಲಿಯುಗ ಕರ್ಣ ಮಾಡಿದ ತಪ್ಪಾದರೂ ಏನು? ಬಿಎಂಸಿ ಪೊಲೀಸ್ ಕೇಸ್ ಹಾಕಿದ್ದೇಕೆ..?
78 ವರ್ಷದ ಅಮಿತಾಬ್ ಮೈನಸ್ 33 ಡಿಗ್ರಿಯ ಮೈಕೊರೆಯುವ ಚಳಿಗೆ ಲಡಾಖ್ ಗೆ (Ladakh) ಹೋಗಿದ್ದೇಕೆ.? ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಒಂದು ಸಣ್ಣ ಶೂಟಿಂಗ್ ಗಾಗಿ ಅಮಿತಾಬ್ ಬಚ್ಚನ್ ಲಡಾಖ್ ಗೆ ತೆರಳಿದ್ದರು ಎನ್ನಲಾಗಿದೆ. ಲಡಾಖ್ ನಲ್ಲಿ ಶೂಟ್ ಮಾಡಲಾಗಿರುವ ಹೊಸ ವರ್ಷದ (New Year) ಒಂದು ವಿಡಿಯೋವನ್ನು ಕೂಡಾ ಅಮಿತಾಬ್ twitterನಲ್ಲಿ ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿರುವವರು ಹೊಸ ವರ್ಷದ ಹಾರೈಕೆಗಳನ್ನು ಹೇಳುತ್ತಿದ್ದಾರೆ. ಅದರಲ್ಲಿ ಸೋನಮ್ ವಾಂಗ್ಚುಕ್ (Sonam Wangchuk) ಕೂಡ ಕಾಣಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, (Plstic Ban) ಪರಿಸರವನ್ನು ರಕ್ಷಿಸಿ ಎಂದು ಆ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ ಸೋನಮ್ ವಾಂಗ್ಚುಕ್. ಚೀನಾ (China) ಸರಕುಗಳನ್ನು ಕಡಿಮೆ ಬಳಸಿ, ಸ್ವದೇಶಿ ವಸ್ತುಗಳನ್ನು ಹೆಚ್ಚಿಗೆ ಬಳಸಿ ಎಂದೂ ವಾಂಗ್ಚುಕ್ ಮನವಿ ಮಾಡಿದ್ದಾರೆ.
— Amitabh Bachchan (@SrBachchan) January 6, 2021
ಬಚ್ಚನ್ ಪೋಸ್ಟ್ ಗೆ ಅಭಿಮಾನಿಗಳ ಕಮೆಂಟ್ಸ್ ಹರಿದು ಬರುತ್ತಿದೆ. 78ರ ಹರೆಯದಲ್ಲೂ ನೀವು ಹೇಗೆ ಇಷ್ಟೊಂದು ಸಕ್ರಿಯರಾಗಿದ್ದೀರಿ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.