Farmers Protest: ರೈತರ ಜೊತೆ ಸಭೆ ವಿಫಲವಾಗಿದ್ದೇಕೆ? ಕೇಂದ್ರ ಕೃಷಿ ಸಚಿವರು ನೀಡಿರುವ ಕಾರಣ ಇದು!

ಮುಂದಿನ ಮಾತುಕತೆಯಲ್ಲಿ ರೈತ ಸಂಘಟನೆಯ ಪ್ರತಿನಿಧಿಗಳು  ಪರ್ಯಾಯ ಮಾರ್ಗ ಹುಡುಕಬಹುದು, ಅದರಿಂದ ಪರಿಹಾರ ಸಿಗಬಹುದು ಎಂಬ ಭಾವನೆ ಇದೆ ಎಂದು ನರೇಂದ್ರ ಸಿಂಗ್ ಥೋಮರ್ ಹೇಳಿದರು. ಈ ಮುಖಾಂತರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಹಠಮಾರಿತನ ಮುಂದುವರೆಸುತ್ತದೆ ಎಂಬುದನ್ನು ಒಪ್ಪಿಕೊಂಡರು.

Written by - Yashaswini V | Last Updated : Jan 9, 2021, 07:55 AM IST
  • ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಜನವರಿ 15 ರಂದು ಮತ್ತೊಂದು ಸಭೆ
  • ರೈತರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆ ಬಿಟ್ಟು ಆಯ್ಕೆಗಳನ್ನು ಕೊಡಲಿ: ಕೇಂದ್ರ ಸರ್ಕಾರ
  • ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ: ರೈತರು
Farmers Protest: ರೈತರ ಜೊತೆ ಸಭೆ ವಿಫಲವಾಗಿದ್ದೇಕೆ? ಕೇಂದ್ರ ಕೃಷಿ ಸಚಿವರು ನೀಡಿರುವ ಕಾರಣ ಇದು! title=

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಒಂದು ತಿಂಗಳಿನಿಂದ 8 ಬಾರಿ ಮಾತುಕತೆ ನಡೆದಿದ್ದರೂ ಮಾತುಕತೆ ಫಲಪ್ರದವಾಗಿಲ್ಲ. ಇದರಿಂದಾಗಿ ಜನವರಿ 15 ರಂದು ಮತ್ತೊಂದು ಸಭೆ ಕರೆಯಲಾಗಿದೆ.

8ನೇ ಸುತ್ತಿನ‌ ಸಭೆ ವಿಫಲವಾಗಿರುವ ಬಗ್ಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Sing Tomar), ರೈತರ ಸಂಘಟನೆಗಳ ಪ್ರತಿನಿಧಿಗಳು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆ ಹೊರತುಪಡಿಸುವುದನ್ನು ಬಿಟ್ಟು ಆಯ್ಕೆಗಳನ್ನು ಮಂಡಿಸದ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಮುಂದಿನ ಮಾತುಕತೆಯಲ್ಲಿ ರೈತ ಸಂಘಟನೆಯ ಪ್ರತಿನಿಧಿಗಳು  ಪರ್ಯಾಯ ಮಾರ್ಗ ಹುಡುಕಬಹುದು, ಅದರಿಂದ ಪರಿಹಾರ ಸಿಗಬಹುದು ಎಂಬ ಭಾವನೆ ಇದೆ ಎಂದು ನರೇಂದ್ರ ಸಿಂಗ್ ಥೋಮರ್ ಹೇಳಿದರು. ಈ ಮುಖಾಂತರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಹಠಮಾರಿತನ ಮುಂದುವರೆಸುತ್ತದೆ ಎಂಬುದನ್ನು ಒಪ್ಪಿಕೊಂಡರು.

ಇದನ್ನೂ ಓದಿ : B.C.Patil: ರೈತರಲ್ಲಿ ಮನವಿ ಮಾಡಿಕೊಂಡ ಸಚಿವ ಬಿ.ಸಿ.ಪಾಟೀಲ್!

ದೇಶಾದ್ಯಂತದ ಇತರ ರೈತರ (Farmers) ಅನೇಕ ಗುಂಪುಗಳು ಈ ಕೃಷಿ ಸುಧಾರಣೆಗಳನ್ನು ಬೆಂಬಲಿಸಿವೆ. ಕೃಷಿ ಕಾನೂನುಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ಬಗ್ಗೆ ಸರ್ಕಾರ ರೈತರ ಮುಂದೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ಸುಪ್ರೀಂ ಕೋರ್ಟ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಸರ್ಕಾರ ಅದನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರು.

ಜನವರಿ 11ಕ್ಕೆ ವಿಚಾರಣೆ :
ಕೃಷಿ ಕಾಯಿದೆಗಳನ್ನು ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಜನವರಿ 11 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ರೈತರ ಆಂದೋಲನಕ್ಕೆ (Farmers Protest) ಸಂಬಂಧಿಸಿದ ಇತರ ವಿಷಯಗಳ ನಡುವೆ ಮೂರು ಕಾನೂನುಗಳ ಸಿಂಧುತ್ವವನ್ನು ಸಹ ಸುಪ್ರೀಂ ಕೋರ್ಟ್ ಪರಿಗಣಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ರಾಜ್ಯಗಳ ಮೇಲೆ ಈ ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಬಿಡುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತದೆಯೇ ಎಂದು ಕೇಳಿದಾಗ, ಈ ವಿಷಯದಲ್ಲಿ ರೈತ ಮುಖಂಡರಿಂದ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ತೋಮರ್ ಹೇಳಿದರು. ಅಂತಹ ಯಾವುದೇ ಪ್ರಸ್ತಾಪ ಬಂದರೆ ಆ ಸಮಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ : Farmers Protest: ಹೋರಾಟನಿರತ ರೈತರಿಗೆ ಕೇಂದ್ರದಿಂದ 'ಬಿಗ್ ಶಾಕ್'..!

ಮೂರು ಕೃಷಿ ಕಾನೂನುಗಳನ್ನು (Agriculture laws) ರದ್ದುಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಕಾನೂನುಗಳನ್ನು ರದ್ದುಪಡಿಸುವುದನ್ನು ಹೊರತುಪಡಿಸಿ ರೈತ ಸಂಘಟನೆಗಳು ಬೇರೆ ಯಾವುದೇ ಆಯ್ಕೆಯನ್ನು ನೀಡಿದರೆ, ಸರ್ಕಾರ ಅದನ್ನು ಪರಿಗಣಿಸುತ್ತದೆ. ಇದನ್ನು ಸರ್ಕಾರದ ನಿರಂತರವಾಗಿ ಹೇಳುತ್ತಾ ಬಂದಿದೆ. ಆದರೆ ಸುದೀರ್ಘ ಚರ್ಚೆಯ ನಂತರವೂ ರೈತರು ಬೇರಾವುದೇ ಆಯ್ಕೆಗಳನ್ನು ಪ್ರಸ್ತುತಪಡಿಸಿಲ್ಲ. ಆದ್ದರಿಂದ 8ನೇ ಸುತ್ತಿನ ಚರ್ಚೆಯನ್ನು ಇಲ್ಲಿ ಮುಂದೂಡಲಾಯಿತು ಎಂದರು.

"ರೈತ ಸಂಘಟನೆಗಳು ಮತ್ತು ಸರ್ಕಾರದ ನಡುವಿನ ಮುಂದಿನ ಸುತ್ತಿನ ಮಾತುಕತೆಯನ್ನು ಜನವರಿ 15 ರಂದು ಪರಸ್ಪರ ಒಪ್ಪಂದದ ಮೂಲಕ ನಿರ್ಧರಿಸಲಾಯಿತು ಎಂದು ಅವರು ಹೇಳಿದರು. ಸಭೆಯ ನಂತರ, ರೈತ ಮುಖಂಡ ಜೋಗಿಂದರ್ ಸಿಂಗ್ ಉಗ್ರಾಹನ್ ಅವರು ಸಭೆ ಅನಿರ್ದಿಷ್ಟವಾಗಿದೆ ಮತ್ತು ಮುಂದಿನ ಸಂವಾದದಲ್ಲಿ ಯಾವುದೇ ಫಲಿತಾಂಶ ಬರುವ ಸಾಧ್ಯತೆಯಿಲ್ಲ ಎಂದು ಹೇಳಿದರು.

ಇದನ್ನೂ ಓದಿ : Budget 2021: ಶೀಘ್ರದಲ್ಲಿಯೇ ರೈತರಿಗೆ ಸಿಗಲಿದೆಯೇ ಈ ಸಂತಸದ ಸುದ್ದಿ ?

ನಾವು ತಲೆಬಾಗುವುದಿಲ್ಲ: ರೈತ ಮುಖಂಡರು
"ಮೂರು ಕಾನೂನುಗಳನ್ನು ರದ್ದುಪಡಿಸುವುದಕ್ಕಿಂತ ಹೆಚ್ಚೇನೂ ನಮಗೆ ಬೇಡ, ಸರ್ಕಾರ ನಮ್ಮ ಶಕ್ತಿಯನ್ನು ಪರೀಕ್ಷಿಸುತ್ತಿದೆ ಆದರೆ ನಾವು ತಲೆಬಾಗುವುದಿಲ್ಲ. ಪ್ರತಿಭಟನಾ ಸ್ಥಳಗಳಲ್ಲಿ ನಾವು ಲೋಹ್ರಿ ಮತ್ತು ಬೈಸಾಖಿ ಹಬ್ಬಗಳನ್ನು ಆಚರಿಸಬೇಕಾದರೆ ಅದಕ್ಕೂ ನಾವು ಸಿದ್ದ ಎಂದು ರೈತ ಮುಖಂಡರು ಹೇಳಿದ್ದಾರೆ.

ರೈತ ಮುಖಂಡ ಹನ್ನನ್ ಮೊಲ್ಲಾ ಮಾತನಾಡಿ, ರೈತ ಜೀವನದ ಕೊನೆಯ ಕ್ಷಣದವರೆಗೂ ಹೋರಾಡಲು ಸಿದ್ಧ. ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಜನವರಿ 11 ರಂದು ರೈತರ ಸಂಘಟನೆಗಳು ಸಭೆ ಸೇರಲಿವೆ. ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಪಷ್ಟವಾಗಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News