ನವದೆಹಲಿ: ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ಕನಿಷ್ಠ ರಾಜಕೀಯ ಆಟಗಾರರು ಎಂದು ಬಣ್ಣಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರು ಬಹಳ ಜನಪ್ರಿಯ ಚಲನಚಿತ್ರ ತಾರೆಯರಾಗಿ ಉಳಿದಿದ್ದಾರೆ, ಆದರೆ ರಾಜಕೀಯ ದೃಷ್ಟಿಯಿಂದ ತಮ್ಮ ಅಭಿಪ್ರಾಯಕ್ಕೆ ಸಾರ್ವಜನಿಕ ಅಭಿಪ್ರಾಯವನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡು ಚುನಾವಣೆಗೆ ಕಾಂಗ್ರೆಸ್ ಸ್ಥಾಪಿಸಿರುವ ಮೂರು ಪ್ರಮುಖ ಸಮಿತಿಗಳಲ್ಲಿ ಹೆಸರಿಸಲಾಗಿರುವ ಮಣಿಶಂಕರ್ ಅಯ್ಯರ್ (Mani Shankar Aiyar) ಈಗಾಗಲೇ ವಿಧಾನಸಭೆ ಚುನಾವಣೆಗೆ ರಾಜ್ಯವು ಸಿದ್ದವಾಗುತ್ತಿರುವುದರಿಂದ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬ ಸೂಪರ್ಸ್ಟಾರ್ ರಜನಿಕಾಂತ್ ಅವರ ನಿರ್ಧಾರವು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲವೆಂದು ಪ್ರತಿಪಾದಿಸಿದರು.
ಇದನ್ನೂ ಓದಿ: ಭಾಗವತ್ ಭಾಷಣ ಮೋದಿ ಸರ್ಕಾರದ ಬಗೆಗಿರುವ ಕಳವಳವಷ್ಟೇ-ಮಣಿಶಂಕರ್ ಅಯ್ಯರ್
"ರಜನಿಕಾಂತ್ (Rajinikanth) ಅವರು ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದಾಗ, ಅವರು ಅಷ್ಟು ವ್ಯತ್ಯಾಸವನ್ನುಂಟುಮಾಡುವುದಿಲ್ಲ ಎಂದು ನಾನು ಹೇಳಿದೆ, ಈಗ ಅವರು ರಾಜಕೀಯಕ್ಕೆ ಬರಬಾರದೆಂದು ನಿರ್ಧರಿಸಿದ್ದಾರೆ, ನಾನು ಈ ಹಿಂದೆ ಹೇಳಿದ್ದನ್ನು ಪುನರಾವರ್ತಿಸುತ್ತೇನೆ, ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ' ಎಂದು ಅಯ್ಯರ್ ಪಿಟಿಐಗೆ ಸಂದರ್ಶನವೊಂದರಲ್ಲಿ ಹೇಳಿದರು.
ಇದನ್ನೂ ಓದಿ: ತಮಿಳುನಾಡಿನಲ್ಲಿ ರಜನಿಕಾಂತ್ ಜೊತೆ ಕೈ ಜೋಡಿಸುತ್ತಾರಾ ಕಮಲ್ ಹಾಸನ್..?
'ಕಮಲ್ ಹಾಸನ್ (Kamal Haasan) ಮತ್ತು ರಜನಿಕಾಂತ್ ಕನಿಷ್ಠ ರಾಜಕೀಯ ಆಟಗಾರರರು, ಎಂ ಜಿ ರಾಮಚಂದ್ರನ್ (ಎಂಜಿಆರ್), ಶಿವಾಜಿ ಗಣೇಶನ್ ಮತ್ತು ಜಯಲಲಿತಾ ಅವರಂತಹ ಜನರು ಕ್ರಾಂತಿಕಾರಿ ಸಾಮಾಜಿಕ ಸಂದೇಶವನ್ನು ನೀಡುವ ಚಿತ್ರಗಳಲ್ಲಿ ಭಾಗಿಯಾಗಿದ್ದ ಹಳೆ ಕಾಲ ವಿಭಿನ್ನವಾಗಿತ್ತು ಎಂದರು.
"ಈ ಇಬ್ಬರು (ರಜನಿಕಾಂತ್ ಮತ್ತು ಹಾಸನ್) ರಾಜಕೀಯ ಸಂದೇಶಕ್ಕಾಗಿ ಸಿನೆಮಾವನ್ನು ಎಂದಿಗೂ ಮಾಧ್ಯಮವಾಗಿ ಬಳಸದ ಕಾರಣ, ಅವರು ಹಾಗೇ ಉಳಿದಿದ್ದಾರೆ - ಬಹಳ ಜನಪ್ರಿಯ ಚಲನಚಿತ್ರ ತಾರೆಯರು, ಆದರೆ ರಾಜಕೀಯ ದೃಷ್ಟಿಯಿಂದ ತಮ್ಮ ಅಭಿಪ್ರಾಯಕ್ಕೆ ಸಾರ್ವಜನಿಕ ಅಭಿಪ್ರಾಯವನ್ನು ಸೆಳೆಯುವ ಜನರು ಅಲ್ಲ,' ಎಂದು ಅಯ್ಯರ್ ಹೇಳಿದರು.
ಇದನ್ನೂ ಓದಿ: #RajinikanthPoliticalEntry : ಪ್ರವೇಶಕ್ಕೂ ಮುನ್ನವೇ ರಾಜಕೀಯಕ್ಕೆ ವಿದಾಯ ಘೋಷಿಸಿದ Rajinikanth
ಅಮಿತಾಬ್ ಬಚ್ಚನ್ ಮತ್ತು ರಾಜೇಶ್ ಖನ್ನಾ ಅವರಿಗಿಂತ ಹಿಂದಿ ಬೆಳ್ಳಿ ಪರದೆಯಲ್ಲಿ ಹೆಚ್ಚು ಜನಪ್ರಿಯ ನಟರು ಯಾರೂ ಇರಲಿಲ್ಲ ಆದರೆ ಅವರು ರಾಜಕೀಯದಲ್ಲಿ ಪ್ಲಾಪ್ ಆಗಿದ್ದರು, ದಕ್ಷಿಣ ಭಾರತದ ವಿಚಾರದಲ್ಲೂ ಇದೇ ವಿಷಯ ಅನ್ವಯಿಸುತ್ತದೆ ಎಂದರು.
ಕಮಲ್ ಹಾಸನ್ ಅವರು ಫೆಬ್ರವರಿ 2018 ರಲ್ಲಿ ಮಕ್ಕಲ್ ನೀಧಿ ಮಾಯಂ (ಎಂಎನ್ಎಂ) ಅನ್ನು ಪ್ರಾರಂಭಿಸಿದ್ದರು ಮತ್ತು ಪಕ್ಷವು 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು, ಆದರೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.