ನವದೆಹಲಿ: ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ರಿಂದ ಟೆಸ್ಟ್ ಸರಣಿ ಗೆದ್ದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕುರಿತು ಮೆಚ್ಚುಗೆಯ ಸುರಿಮಳೆಗಳೇ ಹರಿದು ಬಂದಿವೆ.
In an office at the NCA in Bangalore, Rahul Dravid must be watching and feeling proud of the India A and India U19 programs he's developed, which gave India their depth.
Then, he'll quietly get back to work planning the next series.
— Snehal Pradhan (@SnehalPradhan) January 19, 2021
ಇದನ್ನೂ ಓದಿ: Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ
ಹೌದು, ಭಾರತ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ 36 ರನ್ ಗಳಿಗೆ ಕುಸಿದ ನಂತರ ಇನ್ನೊಳಿದ ಟೆಸ್ಟ್ ಪಂದ್ಯಗಳಲ್ಲಿ ಅದು ಸಿಡಿದು ಬಂದ ರೀತಿ ನಿಜಕ್ಕೂ ಎಲ್ಲರನ್ನೂ ಅಚ್ಚರಿಗೊಳಿಸಿದೆ.ಭಾರತ ತಂಡದ ಬಹುತೇಕ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದಿರುವ ರೀತಿಗೆ ಇಡೀ ಕ್ರಿಕೆಟ್ ವಲಯದಲ್ಲಿಯೇ ಪ್ರಶಂಸೆಯ ಸುರಿಮಳೆಗಳೆ ಹರಿದು ಬಂದಿವೆ.
He is NOT on Twitter but #RahulDravid is the man behind the rise of all these players at National Cricket Academy and India `A' : Gill, Shardul, Sundar, Siraj, Saini, Pant...Let us hail Dravid the astute cricket mind even as we celebrate the feat Down Under🙏🙏🙏🙏
— Vijay Lokapally (@vijaylokapally) January 19, 2021
ಅದರಲ್ಲೂ ಭಾರತ ಅಂಡರ್ 19 ತಂಡಕ್ಕೆ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಪಾತ್ರದ ಕುರಿತಾಗಿ ಬಹುತೇಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸರಣಿ ಗೆಲುವಿನಲ್ಲಿ ಅವರ ಪಾತ್ರ ದೊಡ್ಡದು ಎಂದು ಅವರು ಕೊಂಡಾಡಿದ್ದಾರೆ.ಶುಬ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್ ಮತ್ತು ಟಿ ನಟರಾಜನ್ ರಂತಹ ಆಟಗಾರರು ಭಾರತ ಎ ಮತ್ತು ಯು 19 ತಂಡಗಳ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಆಟಗಾರರಾಗಿದ್ದಾರೆ.
ಇದನ್ನೂ ಓದಿ: Ind vs Aus: ಟೆಸ್ಟ್ ಗೆದ್ದ 'ಟೀಮ್ ಇಂಡಿಯಾಗೆ' ಬಿಸಿಸಿಐನಿಂದ ಭರ್ಜರಿ ಗಿಫ್ಟ್..!
ಕ್ರೀಡಾ ಬರಹಗಾರರಾದ ವಿಜಯ್ ಲೋಕಪಲ್ಲಿ " ದ್ರಾವಿಡ್ ಅವರು ಟ್ವಿಟ್ಟರ್ ನಲ್ಲಿ ಇಲ್ಲದೆ ಇರಬಹುದು ಆದರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಹಾಗೂ ಭಾರತ ಎ ತಂಡದ ಕೋಚ್ ಆಗಿ ನಿರ್ವಹಿಸಿದ್ದ ದ್ರಾವಿಡ್ ಮಾರ್ಗದರ್ಶನದಲ್ಲಿ ಈಗ ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಸಿರಾಜ್, ಸೈನಿ,ಪಂತ್, ಗಿಲ್ ಈ ಎಲ್ಲ ಆಟಗಾರರು ಬೆಳೆದಿದ್ದಾರೆ' ಎಂದು ಕೊಂಡಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.