Eye twitching ಕಣ್ಣು ಹೊಡೆದುಕೊಳ್ಳುತ್ತಿದೆಯಾ..? ಖಂಡಿತ ಮೆಡಿಕಲ್ ಕಾರಣ ತಿಳಿದುಕೊಳ್ಳಿ, ಶಕುನ ಫಲವನ್ನಲ್ಲ..!

ಕೆಲವೊಮ್ಮೆ ನಮ್ಮ ಕಣ್ಣು ಹೊಡೆದು ಕೊಳ್ಳಲಾರಂಭಿಸುತ್ತದೆ. ಕೆಲವೊಮ್ಮೆ ಬಲ ಗಣ್ಣು ಅಥವಾ ಕೆಲವೊಮ್ಮೆ ಎಡಗಣ್ಣು ಹೊಡೆಯಲಾರಂಭಿಸುತ್ತದೆ. ಅದಕ್ಕೆ ಏನೇನೋ ಶಕುನ ಫಲವನ್ನು  ಹೇಳುತ್ತೇವೆ. ಖಂಡಿತ ಹಾಗೆ ಮಾಡಬೇಡಿ..

Written by - Ranjitha R K | Last Updated : Jan 28, 2021, 11:23 AM IST
  • ಒಮ್ಮೊಮ್ಮೆ ನಮ್ಮ ಕಣ್ಣು ಹೊಡೆದುಕೊಳ್ಳುವುದು ಸಾಮಾನ್ಯ ಸಂಗತಿ
  • ಯಾವ ಕಾರಣಕ್ಕೆ ಕಣ್ಣು ಹೊಡೆದುಕೊಳ್ಳುತ್ತದೆ ಎಂಬುದು ತಿಳಿದುಕೊಳ್ಳಲೇಬೇಕು.
  • ಕಣ್ಣು ಹೊಡೆದುಕೊಳ್ಳಲು ಕಾರಣಗಳೇನು.? ಅದಕ್ಕೆ ಪರಿಹಾರಗಳೇನು?
Eye twitching ಕಣ್ಣು ಹೊಡೆದುಕೊಳ್ಳುತ್ತಿದೆಯಾ..? ಖಂಡಿತ ಮೆಡಿಕಲ್ ಕಾರಣ ತಿಳಿದುಕೊಳ್ಳಿ, ಶಕುನ ಫಲವನ್ನಲ್ಲ..! title=
ಕಣ್ಣು ಹೊಡೆದುಕೊಳ್ಳಲು ಕಾರಣಗಳೇನು.? ಅದಕ್ಕೆ ಪರಿಹಾರಗಳೇನು? (file photo)

ಬೆಂಗಳೂರು : ಕೆಲವೊಮ್ಮೆ ನಮ್ಮ ಕಣ್ಣು ಹೊಡೆದು ಕೊಳ್ಳಲಾರಂಭಿಸುತ್ತದೆ (Eye twitching). ಕೆಲವೊಮ್ಮೆ ಬಲ ಗಣ್ಣು ಅಥವಾ ಕೆಲವೊಮ್ಮೆ ಎಡಗಣ್ಣು ಹೊಡೆಯಲಾರಂಭಿಸುತ್ತದೆ. ಅದಕ್ಕೆ ಏನೇನೋ ಶಕುನ ಫಲವನ್ನು  ಹೇಳುತ್ತೇವೆ. ಖಂಡಿತ ಹಾಗೆ ಮಾಡಬೇಡಿ. ಕಣ್ಣು ಹೊಡೆದುಕೊಳ್ಳುವುದಕ್ಕೂ ಶಕುನಕ್ಕೂ  ಲಿಂಕ್ ಇದೆಯಾ ಇಲ್ವಾ ಗೊತ್ತಿಲ್ಲ. ಆದರೆ, ನಿಮ್ಮ ಆರೋಗ್ಯ (Health)ಕ್ಕೂ ಕಣ್ಣು ಹೊಡೆದುಕೊಳ್ಳುವುದಕ್ಕೂ ಖಂಡಿತಾ ಲಿಂಕ್ ಇದೆ. ಆದೇನು..? ಮುಂದೆ ಓದಿ. 

ನಮ್ಮ ಕಣ್ಣು ಸಣ್ಣ ಸಣ್ಣ ಸ್ನಾಯುಗಳಿಂದ ಮಾಡಲ್ಪಟ್ಟಿದೆ. ಕಣ್ಣಿನ (eye) ಈ ಸಣ್ಣ ಸ್ನಾಯು ಸಂಕೋಚನದಿಂದ ಕಣ್ಣು ಹೊಡೆದುಕೊಳ್ಳುತ್ತದೆ. ಈ ಸ್ನಾಯುಗಳನ್ನು ವಾಸ್ತವವಾಗಿ ನರಗಳು ನಿಯಂತ್ರಿಸುತ್ತವೆ. ರಕ್ತನಾಳಗಳಲ್ಲಿ ಪ್ರಚೋದನೆ ಉಂಟಾದಾಗ ಕಣ್ಣು ಹೊಡೆದುಕೊಳ್ಳಲಾರಂಭಿಸುತ್ತದೆ. ಇದು ಮೆಡಿಕಲ್ ಕಾರಣ..
ಯಾವ ಕಾರಣಕ್ಕೆ ಕಣ್ಣು ಹೊಡೆದುಕೊಳ್ಳುತ್ತದೆ, ಗೊತ್ತಾ..?

ಇದನ್ನೂ ಓದಿ Benefits of Ghee: ತುಪ್ಪದ ತಪ್ಪು ಕಲ್ಪನೆ ಬಿಟ್ಟು ಬಿಡಿ..! ತುಪ್ಪ ತಿಂದರೆ ಏನು ಲಾಭ.? ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು..ತಿಳಿಯಿರಿ

ಕಣ್ಣು (eye) ಹೊಡೆದುಕೊಳ್ಳುವುದಕ್ಕೆ ಹಲವು ಕಾರಣಗಳಿರುತ್ತವೆ. ನಿಮ್ಮ ಲೈಫ್ ಸ್ಟಲ್ (Lifestyle)ಕೂಡಾ ಇದಕ್ಕೆ ಕಾರಣವಾಗಿರಬಹುದು. ಆ ಹತ್ತು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. 
1. ಕಣ್ಣಿನ ಮೇಲೆ ಅಧಿಕ ಒತ್ತಡ
2. ಆಯಾಸ ಅಥವಾ ಒತ್ತಡ (Stress)
3. ನಿದ್ರಾ ಹೀನತೆ
4. ಅಧಿಕ ಪ್ರಕಾಶದ ಬೆಳಕು ಹೊಡೆಯುವುದು (Bright light)
5. ಕಾಫಿ, ಆಲ್ಕೋಹಾಲ್ ಅಧಿಕ (Alcohol) ಸೇವನೆ
6. ವಾಯು ಮಾಲಿನ್ಯ
7. ಪೋಷಕಾಂಶಗಳ ಕೊರತೆ
8. ಡ್ರಗ್ಸ್ ಅಡ್ಡ ಪರಿಣಾಮ
9. ಮೆಟಾಬಾಲಿಕ್ ಡಿಸಾರ್ಡರ್
10. ಶರೀರದಲ್ಲಿ ಪೊಟ್ಯಾಶಿಯಂ ಕೊರತೆ

ವಾಸ್ತವವಾಗಿ, ಸ್ನಾಯುಗಳು ನಿಮ್ಮ ನರಗಳನ್ನು ನಿಯಂತ್ರಿಸುವ ಈ ನಾರುಗಳಿಂದ ಮಾಡಲ್ಪಟ್ಟಿದೆ. ರಕ್ತನಾಳದಲ್ಲಿ ಪ್ರಚೋದನೆ ಅಥವಾ ಹಾನಿ ಸೆಳೆತಕ್ಕೆ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ : Red Banana Health Benefits: ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ?

ಡಾಕ್ಟರ್ ಸಲಹೆ ಯಾವಾಗ ಪಡೆಯಬೇಕು..?
ಕಣ್ಣು ಹೊಡೆದುಕೊಳ್ಳುವುದು ಗಂಭೀರ ಸಮಸ್ಯೆ ಏನಲ್ಲ. ಆದರೆ, ಅದನ್ನು ಕಡೆಗಣಿಸುವುದು ಕೂಡಾ ಸರಿಯಲ್ಲ.ಕಣ್ಣಿಗೆ ಸ್ವಲ್ಪ ಆರಾಮ ಕೊಟ್ಟರೆ ಕಣ್ಣು ಹೊಡೆದುಕೊಳ್ಳುವುದು ಕಡಿಮೆಯಾಗುತ್ತದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ವೈದ್ಯರನ್ನು(Doctor) ಕಾಣಲೇ ಬೇಕು. ಯಾವ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯಬೇಕು..ಮುಂದೆ ಓದಿ. 
1. ಹದಿನೈದು  ದಿನ ನಿರಂತರ ಕಣ್ಣು ಹೊಡೆದುಕೊಳ್ಳುತ್ತಿದ್ದರೆ
2. ಕಣ್ಣು ತೆರೆಯಲು ಕಷ್ಟವಾಗುತ್ತಿದ್ದರೆ
3. ಕಣ್ಣಷ್ಟೇ ಅಲ್ಲ, ಮುಖದ ಯಾವುದಾದರೂ ಒಂದು ಭಾಗ ಹೊಡೆದುಕೊಳ್ಳುತ್ತಿದ್ದರೆ.
4. ಕಣ್ಣು ಕೆಂಪಾಗುತ್ತಿದ್ದರೆ, ಬಾತುಕೊಂಡರೆ
5. ಎರಡೂ ಕಣ್ಣುಗಳು ಒಂದೇ ಸವನೆ ಹೊಡೆದುಕೊಳ್ಳುತ್ತಿದ್ದರೆ.
ಈ ಎಲ್ಲಾ ಸಮಯದಲ್ಲಿ ನೀವು ವೈದ್ಯರನ್ನು ಭೇಟಿ ಮಾಡಲೇಬೇಕು.

ಇದನ್ನೂ ಓದಿ : Smartphone Side Effects ಎಚ್ಚರ..! ನಿಮ್ಮ ಮಗು ಸ್ಮಾರ್ಟ್ ಫೋನಿಗೆ ಅಡಿಕ್ಟ್ ಆಗಿದೆಯಾ.ಕಾದಿದೆ ಅಪಾಯ..!

ಇದಕ್ಕೆ ಪರಿಹಾರ ಏನು..?
1. ಇದಕ್ಕೆ ಮೊದಲ ಪರಿಹಾರ  (Remedy), ಕಣ್ಣಿಗೆ ರೆಸ್ಟ್ ನೀಡುವುದು ಅಂದರೆ ನಿದ್ರೆ (Sleep). ಅಥವಾ ಧ್ಯಾನಕ್ಕೆ ಹೊರಳುವುದು.
2. ಕಾಫಿ (coffee), ಟೀ (Tea) ಅಥವಾ ಅಲ್ಕೋಹಾಲ್ ಕಡಿಮೆ ಮಾಡಲೇಬೇಕು.
3. ಕಂಪ್ಯೂಟರ್ (Computer), ಮೊಬೈಲ್ (Mobile) ಸ್ಕ್ರೀನ್ ನೋಡುವುದನ್ನು ಬಹಳಷ್ಟು ಕಡಿಮೆ ಮಾಡಿ. 
4. ಕಣ್ಣು ಡ್ರೈ (Dryness) ಆಗಿದ್ದರೆ ಅದಕ್ಕೆ ಡ್ರಾಪ್ಸ್ ತೆಗೆದುಕೊಳ್ಳಿ
5. ಮೆಗ್ನೇಶಿಯಂ ಅಂಶ ಹೆಚ್ಚಿಗೆ ಇರುವ ಆಹಾರ ಸೇವಿಸಿ
6. ಹಸಿರು ಸೊಪ್ಪು (Green Veg), ದಾಲ್ ಮತ್ತು ಬಾದಾಮಿ, ಗೋಡಂಬಿ ತರಹದ ಡ್ರೈಫುಟ್ಸ್ ತಿನ್ನಿರಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News