ನವದೆಹಲಿ: ಕೋವಿಡ್-ಪ್ರೇರಿತ ಬೇಡಿಕೆ ನಿಗ್ರಹ ಮತ್ತು ಜಾಗತಿಕ ತೈಲ ಬೆಲೆಗಳು ಅಧೀನವಾಗಿದ್ದು, ಇಂಧನ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ದಿಕ್ಕಿನಲ್ಲಿ ವೇಗವಾಗಿ ಸಾಗಲು ಕೇಂದ್ರ ಸರ್ಕಾರಕ್ಕೆ ಸಹಾಯ ಮಾಡಿದೆ. ಸದ್ದಿಲ್ಲದೆ ಗ್ರಾಹಕರ ಖಾತೆಗೆ ಬರುತ್ತದ್ದ ಅಡುಗೆ ಅನಿಲ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ಇದರ ಬೆನ್ನಲ್ಲೇ ಗ್ರಾಹಕರಿಗೆ ಇನ್ನೊಂದು ಶಾಕ್ ನೀಡಲು ಮುಂದಾಗಿರುವ ಸರ್ಕಾರ ಸೀಮೆಎಣ್ಣೆ ಸಬ್ಸಿಡಿಯನ್ನೂ ಕೂಡ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.
ಹೌದು, ಯಾವುದೇ ಅಧಿಕೃತ ಘೋಷಣೆ ಮಾಡದೆಯೇ ಕೇಂದ್ರ ಸರ್ಕಾರ ಎಲ್ಪಿಜಿ ಸಬ್ಸಿಡಿ (LPG subsidy) ಯನ್ನು ನಿಲ್ಲಿಸಿದೆ. ಹೀಗಾಗಿ ಗ್ರಾಹಕರ ಖಾತೆಗೆ ಬರುತ್ತಿದ್ದ ಗ್ಯಾಸ್ ಸಬ್ಸಿಡಿ ಸ್ಥಗಿತಗೊಂಡಿದೆ. ಈ ವೇಳೆ ಸೀಮೆಎಣ್ಣೆ ಸಬ್ಸಿಡಿಯನ್ನು ಕೂಡ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದ್ದು ಗ್ರಾಹಕರು ಇನ್ನು ಮುಂದೆ ಮಾರುಕಟ್ಟೆ ದರದಲ್ಲೇ ಸೀಮೆಎಣ್ಣೆ ಖರೀದಸಬೇಕಿದೆ.
ಸೀಮೆಎಣ್ಣೆಗೆ (Kerosene) ಸಂಬಂಧಿಸಿದಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಬ್ಸಿಡಿ ಬೆಂಬಲವು ನಗಣ್ಯ ಮಟ್ಟಕ್ಕೆ ಇಳಿದಿದ್ದು, ಬಜೆಟ್ನಲ್ಲಿ ಸರ್ಕಾರ ಸೀಮೆಎಣ್ಣೆ ಸಬ್ಸಿಡಿಗೆ ಯಾವುದೇ ಹಣವನ್ನು ಮೀಸಲಿಡದಿರುವುದು ಹಲವು ವರ್ಷಗಳಲ್ಲಿ ಇದೇ ಮೊದಲು. ಉಜ್ವಾಲಾ ಯೋಜನೆ (Ujjwala Yojana)ಯಡಿ ಬಡ ಮನೆಗಳಿಗೆ ಸರ್ಕಾರ ಎಲ್ಪಿಜಿ ಸಂಪರ್ಕವನ್ನು ಒದಗಿಸುತ್ತಿರುವುದರಿಂದ ಮತ್ತು ರಾಜ್ಯಗಳಿಗೆ ಸೀಮೆಎಣ್ಣೆ ಹಂಚಿಕೆಯನ್ನು ಕಡಿಮೆ ಮಾಡುವುದರೊಂದಿಗೆ, ಈ ಮಾಲಿನ್ಯಕಾರಕ ಇಂಧನ ಸಬ್ಸಿಡಿಯಿಂದ ಹೊರಬಂದಿದೆ.
ಇದನ್ನೂ ಓದಿ - ಉಚಿತವಾಗಿ LPG cylinder ಪಡೆಯಲು ಇಲ್ಲಿದೆ ಸುಲಭ ಮಾರ್ಗ
ಇದಕ್ಕೂ ಮೊದಲು ಸೀಮೆಎಣ್ಣೆಯ ಬೆಲೆಯನ್ನು ಸಹ ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಲಾಯಿತು, ಇದರಿಂದಾಗಿ ಅದರ ಬೆಲೆಗಳನ್ನು ಮಾರುಕಟ್ಟೆ ದರಗಳಿಗೆ ಹತ್ತಿರ ತರಲಾಯಿತು. ಸಬ್ಸಿಡಿಯನ್ನು ಈಗ ಕೆಲವು ರಾಜ್ಯಗಳು ಮಾತ್ರ ವಿಸ್ತರಿಸಿದೆ. ವಾಸ್ತವವಾಗಿ, ದೆಹಲಿ ಸೀಮೆಎಣ್ಣೆ ಮುಕ್ತ ರಾಜ್ಯವಾಗಿ ಮಾರ್ಪಟ್ಟಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಮಾರುಕಟ್ಟೆ ದರದಲ್ಲಿ ಸೀಮೆಎಣ್ಣೆ ಖರೀದಿ:
ಕಳೆದ ವರ್ಷ ಫೆಬ್ರವರಿಯಲ್ಲಿ ಸಬ್ಸಿಡಿ ಮತ್ತು ಮಾರುಕಟ್ಟೆ ದರ ಎರಡೂ ಕೂಡ ಸಮನವಾಗಿತ್ತು. ಆದರೆ ಈ ಹಣಕಾಸು ವರ್ಷದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharam) ಅವರು ಬಜೆಟ್ ನಲ್ಲಿ ಯಾವುದೇ ಅನುದಾನ ನೀಡದ ಹಿನ್ನೆಲೆಯಲ್ಲಿ ಸೀಮೆಎಣ್ಣೆ ಖರೀದಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಸಂಪೂರ್ಣ ನಿಂತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ - LPG: ಹೀಗೆ ಮಾಡಿದ್ರೆ FREE ಆಗಿ ಸಿಗಬಹುದು LPG ಸಿಲಿಂಡರ್..!
ಹೀಗಾಗಿ ಗ್ರಾಹಕರು ಬೇರೆ ದಾರಿಯಿಲ್ಲದೆ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರುಕಟ್ಟೆ ದರದಲ್ಲಿ ಸೀಮೆಎಣ್ಣೆಯನ್ನು ಖರೀದಿಸಬೇಕಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕರೋನವೈರಸ್ (Coronavirus) ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದ್ದ ಲಾಕ್ಡೌನ್ ನಿಂದ ಆರ್ಥಿಕವಾಗಿ ಕುಸಿದಿರುವ ಜನತೆಗೆ ಎಲ್ಪಿಜಿ, ಸೀಮೆಎಣ್ಣೆ ಮೇಲಿನ ಸಬ್ಸಿಡಿ ಕಡಿತ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.