ಮಧ್ಯಪ್ರದೇಶ: ವೈದ್ಯರಿಲ್ಲದೆ ಆಸ್ಪತ್ರೆ ಗೇಟ್ ಬಳಿಯೇ ಜನ್ಮ ನೀಡಿದ ಮಹಿಳೆ!

    

Last Updated : Mar 11, 2018, 01:54 PM IST
ಮಧ್ಯಪ್ರದೇಶ: ವೈದ್ಯರಿಲ್ಲದೆ ಆಸ್ಪತ್ರೆ ಗೇಟ್ ಬಳಿಯೇ ಜನ್ಮ ನೀಡಿದ ಮಹಿಳೆ! title=

ಭೂಪಾಲ್: ಮಧ್ಯಪ್ರದೇಶದ ಕಟ್ನಿ ಗ್ರಾಮದ ಮಹಿಳೆಗೆ  ಆಸ್ಪತ್ರೆಯ ಸಿಬ್ಬಂದಿ ಯಾವುದೇ ಸಹಾಯ ನೀಡದಿರುವುದರಿಂದಾಗಿ ಸರ್ಕಾರಿ ಆಸ್ಪತ್ರೆಯ ಗೆಟ್ ಬಳಿಯೇ  ಮಗುವಿಗೆ ಹೆರಿಗೆ ಜನ್ಮ ನೀಡಿದ ವಿಚಿತ್ರ ಘಟನೆ ನಡೆದಿದೆ.   

ಈ ಸಂಗತಿ ಬೆಳಕಿಗೆ ಬಂದ ನಂತರ ಮಹಿಳೆಗೆ ಎಲ್ಲಾ ಸೌಕರ್ಯಗಳನ್ನು ನೀಡಿದೆ. ಆದರೆ, ನರ್ಸ್ ಸಿಬ್ಬಂಧಿ  ಬೇರೆ ಆಸ್ಪತ್ರೆಗೆ ಕ್ಕೆ ಹೋದಾಗ ಮಹಿಳೆಗೆ ಹೆರಿಗೆ ಆಗಿದೆ ಎಂದು  ಮುಖ್ಯ ವೈಧ್ಯಾದಿಕಾರಿ ಅಶೋಕ್ ಅವ್ಧಿಯವರು ತಿಳಿಸಿದ್ದಾರೆ.ನರ್ಸ್ ಗಳು ಮಹಿಳೆಗೆ ಸಂಪೂರ್ಣ ನೆರವು ನೀಡಿದ್ದರು.ಆದರೆ ಗರ್ಭಿಣಿ ಮಹಿಳೆ ಆರೋಗ್ಯ ಕೇಂದ್ರಕ್ಕೆ ಬಂದಾಗ  ನರ್ಸ್ ಹತ್ತಿರದ ಉಪ ಆರೋಗ್ಯ ಕೇಂದ್ರದಲ್ಲಿದ್ದರು ಎಂದು ಅವಿಡಿಯಾ ತಿಳಿಸಿದರು.

ಕಟ್ನಿಯಲ್ಲಿ 2017 ರಂದು ಇದೇ ರೀತಿಯ ಘಟನೆಯಲ್ಲಿ, ಆಂಬುಲೆನ್ಸ್ನ ಅಲಭ್ಯತೆಯ ಕಾರಣದಿಂದ ಮಗುವಿಗೆ ಜನ್ಮ ನೀಡುವ ಮೊದಲು ಗರ್ಭಿಣಿ ಮಹಿಳೆ ಸುಮಾರು 20 ಕಿ.ಮೀ ರಸ್ತೆಯಲ್ಲಿ ನಡೆದಿದ್ದಳು ಆದರೆ ನಂತರ ನವಜಾತ ಹೆಣ್ಣು ಮಗು ತಕ್ಷಣ ಮೃತಪಟ್ಟಿತ್ತು  ಎಂದು ಹೇಳಲಾಗಿದೆ. 

Trending News