ಕರೋನಾ ಪಾಸಿಟಿವ್ ಆದ ಮಹಿಳೆಯ ಎದೆಹಾಲಿನ ಬಣ್ಣದಲ್ಲಿ ಬದಲಾವಣೆ.!

ಮೆಕ್ಸಿಕೊದಲ್ಲಿ 4 ತಿಂಗಳ ಮಗುವಿನ ತಾಯಿ ಕರೋನಾ ಸೋಂಕಿಗೆ  ಒಳಗಾಗಿದ್ದಾರೆ.  ಕರೋನಾ ಸೋಂಕಿಗೆ ಗುರಿಯಾದ ನಂತರ ಮಹಿಳೆಯ ಎದೆಹಾಲಿನ ಬಣ್ಣ ಬದಲಾಗಿದೆ.

Written by - Ranjitha R K | Last Updated : Feb 14, 2021, 04:08 PM IST
  • ಕೋವಿಡ್ ಸೋಂಕಿಗೆ ಒಳಗಾದ ಮಹಿಳೆಯ ಎದೆಹಾಲಿನ ಬಣ್ಣದಲ್ಲಿ ಬದಲಾವಣೆ
  • ಆತಂಕಗೊಂಡು ವೈದ್ಯರನ್ನು ಸಂಪರ್ಕಿಸಿದ ಮಹಿಳೆ
  • ರೋಗ ನಿರೋಧಕ ಶಕ್ತಿ ಏರುಪೇರಿನಿಂದಾಗಿ ಕಾಣಿಸಿಕೊಂಡ ಸಮಸ್ಯೆ
ಕರೋನಾ ಪಾಸಿಟಿವ್ ಆದ ಮಹಿಳೆಯ ಎದೆಹಾಲಿನ ಬಣ್ಣದಲ್ಲಿ ಬದಲಾವಣೆ.! title=
ಕೋವಿಡ್ ಸೋಂಕಿಗೆ ಒಳಗಾದ ಮಹಿಳೆಯ ಎದೆಹಾಲಿನ ಬಣ್ಣದಲ್ಲಿ ಬದಲಾವಣೆ (photo ZEe News)

ಮೆಕ್ಸಿಕೊ : ಮೆಕ್ಸಿಕೊದಲ್ಲಿ 4 ತಿಂಗಳ ಮಗುವಿನ ತಾಯಿ ಕರೋನಾ ಸೋಂಕಿಗೆ (Coronavirus) ಒಳಗಾಗಿದ್ದಾರೆ.  ಕರೋನಾ ಸೋಂಕಿಗೆ ಗುರಿಯಾದ ನಂತರ ಮಹಿಳೆಯ ಎದೆಹಾಲಿನ ಬಣ್ಣ ಬದಲಾಗಿದೆ. ಬಿಳಿಯಿರುವ ಹಾಲು ಹಸಿರು ಬಣ್ಣಕ್ಕೆ ತಿರುಗಿದೆ. ಈ ಬಗ್ಗೆ ಕರೋನಾ ಸೋಂಕಿಗೆ (COVID_19) ಗುರಿಯಾಗಿರುವ ಮಹಿಳೆ ಬಹಿರಂಗಪಡಿಸಿದ್ದಾರೆ. ಮಹಿಳೆ ಮತ್ತು ಆಕೆಯ 4 ತಿಂಗಳ ಮಗುವಿನಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ಹಾಲಿನ ಬಣ್ಣದಲ್ಲಿ ಈ ಬದಲಾವಣೆ ಕಂಡು ಬಂದಿದೆ.  

ಮೆಕ್ಸಿಕೊದ ಮಾಂಟೆರಿಯಲ್ಲಿ ವಾಸಿಸುವ ಅನಾ ಕಾರ್ಟೆಜ್  ಎಂಬ ಮಹಿಳೆಯಲ್ಲಿ ಕರೋನಾ ವೈರಸ್ (Coronavirus) ಸೋಂಕು ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ, ಮಹಿಳೆಯ ಎದೆಹಾಲಿನ ಬಣ್ಣದಲ್ಲಿ ಬದಲಾವಣೆ ಕಂಡುಬಂದಿದೆ. ಕರೋನಾ ಸೊಂಕು (COVID-19) ಕಾಣಿಸಿಕೊಳ್ಳುವ ಮೊದಲು ಹಾಲಿನ ಬಣ್ಣದಲ್ಲಿ ಯಾವುದೇ ಬದಲಾವಣೆಯಿರಲಿಲ್ಲ. ಆದರೆ ಕರೋನಾ ಪಾಸಿಟಿವ್ ಬಂದಾಗಿನಿಂದ ಹಾಲಿನ ಬಣ್ಣ ಬದಲಾಗಿದೆ ಎಂದು, ಅನಾ ಕಾರ್ಟೆಜ್  ಹೇಳಿದ್ದಾರೆ. 

ಇದನ್ನೂ ಓದಿ : Rich Dog: ಇದು Reel Life Entertainment ಅಲ್ಲ, Real Life ಎಂಟರ್ಟೈನ್ಮೆಂಟ್

ಆದರೆ, ಕೆಲವೊಮ್ಮೆ ಈ ರೀತಿಯ ಬದಲಾವಣೆಗಳು ಆಗುತ್ತವೆ. ದೇಹದ ರೋಗನಿರೋಧಕ (Immunity) ಶಕ್ತಿಯಲ್ಲಿ ಬದಲಾವಣೆಯಾದಾಗ ಇಂಥಹ ಬದಲಾವಣೆಗಳಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಕರೋನಾ ಕಾಲದಲ್ಲಿ ಆಹಾರ (Food ) ಪದ್ದತಿಯಲ್ಲೂ ಬದಲಾವಣೆಗಳಾಗುತ್ತವೆ. ರೋಗ ನಿರೋಧಕ ಹೆಚ್ಚಿಸುವ ಸಲುವಾಗಿ ಸೇವಿಸುವ ಆಹಾರದಿಂದಾಗಿ ಎದೆಹಾಲಿನಲ್ಲಿಯೂ ಆಂಟಿ ಬಾಡೀಸ್ (Anti bodies)ಪ್ರಮಾಣ ಹೆಚ್ಚುತ್ತದೆ. ಈ ಕಾರಣದಿಂದಾಗಿ ಎದೆ ಹಾಲಿನ ಬಣ್ಣದಲ್ಲೂ ಬದಲಾವಣೆ ಕಂಡು ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. 

ಮಹಿಳೆ ಕರೋನಾದಿಂದ ಗುಣಮುಖರಾದ ನಂತರ ಮತ್ತೆ ಎದೆಹಾಲು ಸಾಮಾನ್ಯ ಬಣ್ಣಕ್ಕೆ ತಿರುಗಿದೆ. 

ಇದನ್ನೂ ಓದಿ :  Cheapest Homes On Sale - ಕೇವಲ 100 ರೂ.ಗಳಿಗೆ ಇಟಲಿಯಲ್ಲಿ ಮನೆ ಖರೀದಿಸುವ ಸುವರ್ಣಾವಕಾಶ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News