Share Market Updates: 52052 ಅಂಕಗಳೊಂದಿಗೆ ಹೊಸ ಎತ್ತರಕ್ಕೆ ತಲುಪಿದ Sensex

Share Market Updates - ಭಾರತೀಯ ಷೇರು ಮಾರುಕಟ್ಟೆ ಇಂದು ತೆರೆದುಕೊಲ್ಲುತ್ತಿದ್ದಂತೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ, ಸೆನ್ಸೆಕ್ಸ್ ಇಂದು ಮೊದಲ ಬಾರಿಗೆ 52,000 ಅಂಕಗಳ ಗಡಿ ದಾಟಿದೆ. ಸೆನ್ಸೆಕ್ಸ್ ಇಂದು ಇಂಟ್ರಾಡೇನಲ್ಲಿ 52052 ರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದೆ.

Written by - Nitin Tabib | Last Updated : Feb 15, 2021, 10:40 AM IST
  • ಮುಂಬೈ ಷೇರು ಮಾರುಕಟ್ಟೆ ಇಂದು ಆರಂಭಿಕ ವಹಿವಾಟಿನಲ್ಲಿ 52000 ಗಡಿ ದಾಟಿದೆ.
  • ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ಕೂಡ 15,300 ಗಡಿ ದಾಟಿದೆ.
  • ನಿಫ್ಟಿ ಬ್ಯಾಂಕ್ ಕೂಡ 36723 ಅಂಕಗಳ ನೂತನ ದಾಖಲೆಯ ಮಟ್ಟಕ್ಕೆ ತಲುಪಿದೆ.
Share Market Updates: 52052 ಅಂಕಗಳೊಂದಿಗೆ ಹೊಸ ಎತ್ತರಕ್ಕೆ ತಲುಪಿದ Sensex title=
Share Market Updates(File Photo)

ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ (Share Market Updates) ಇಂದು ತೆರೆದುಕೊಲ್ಲುತ್ತಿದ್ದಂತೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ, ಸೆನ್ಸೆಕ್ಸ್ ಇಂದು ಮೊದಲ ಬಾರಿಗೆ 52,000 ಅಂಕಗಳ ಗಡಿ ದಾಟಿದೆ. ಸೆನ್ಸೆಕ್ಸ್ ಇಂದು ಇಂಟ್ರಾಡೇನಲ್ಲಿ 52052 ರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ 485 ಅಂಕಗಳ ಏರಿಕೆಯೊಂದಿಗೆ 52110 ಅಂಕಗಳ ಮೇಲೆ ತನ್ನ ವ್ಯವಹಾರ ಮುಂದುವರೆಸಿದೆ.

ಇದನ್ನು ಓದಿ- Jandhan ಖಾತೆದಾರರಿಗೆ ಸಿಗುತ್ತಿರುವ ಈ ಲಾಭ ನಿಮ್ಮದಾಗಿಸಲು ಈ ಕೆಲಸ ತಪ್ಪದೆ ಮಾಡಿ

ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ (NSE) ನಿಫ್ಟಿಯಲ್ಲಿಯೂ (Nifty) ಕೂಡ ವೇಗ ಕಂಡುಬಂದಿದೆ. ವಾರದ ಮೊದಲ ದಿನವಾದ ಇಂದು ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 136 ಅಂಕಗಳ ಏರಿಕೆಯೊಂದಿಗೆ 15314 ರಲ್ಲಿ ತನ್ನ ವಹಿವಾಟು ಮುಂದುವರೆಸಿದೆ. ನಿಫ್ಟಿ ಬ್ಯಾಂಕ್ ಕೂಡ   36723 ಅಂಕಗಳ ನೂತನ ದಾಖಲೆಯ ಮಟ್ಟಕ್ಕೆ ತಲುಪಿದೆ.

ಇದನ್ನು ಓದಿ- ನಾಳೆಯೊಳಗೆ Fastag ಹಾಕಿಸಲೇ ಬೇಕು, ಇಲ್ಲಾಂದ್ರೆ ಬೀಳುತ್ತೆ ಡಬಲ್ ಟೋಲ್ ಟ್ಯಾಕ್ಸ್

7 ಸೆಷನ್ಸ್ ಗಳಲ್ಲಿ  ಒಟ್ಟು 1000 ಅಂಕಗಳಿಂದ ಏರಿಕೆ ಕಂಡ ಸೆನ್ಸೆಕ್ಸ್ 
ಇದಕ್ಕೂ ಮೊದಲು ಫೆಬ್ರವರಿ 5, 2021ರಂದು ಸೆನ್ಸೆಕ್ಸ್ (Sensex) 51000  ಅಂಕಗಳ ಗರಿಷ್ಠ ಮಟ್ಟ ದಾಟಿತ್ತು. ಅಂದರೆ ಕೇವಲ 10 ದಿನಗಳು ಹಾಗೂ 7 ಟ್ರೇಡಿಂಗ್ ಸೆಷನ್ಸ್ ಗಳಲ್ಲಿ ಸೆನ್ಸೆಕ್ಸ್ (BSE) 1000 ಅಂಕಗಳ ಏರಿಕೆ ಕಂಡಿದೆ. ಜನವರಿ 21ರಂದು ಸೆನ್ಸೆಕ್ಸ್ 50,000 ಮೈಲುಗಲ್ಲು ಸಾಧಿಸಿತ್ತು. 50 ಸಾವಿರ ಅಂಕಗಳಿಂದ 51 ಅಂಕಗಳಿಗೆ ತಲುಪಲು ಒತ್ತು 11 ಟ್ರೇಡಿಂಗ್ ಸೆಷನ್ಸ್ ಗಳು ತಗುಲಿದ್ದವು.

ಇದನ್ನು ಓದಿ- Petrol, Diesel rate ದುಬಾರಿ ದುನಿಯಾ..! ಶತಕ ಸಿಡಿಸಲಿದೆ ಪೆಟ್ರೋಲ್, ರಾಜಸ್ತಾನದ ಗಂಗಾನಗರದಲ್ಲಿ 99.22 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News