ನವದೆಹಲಿ: Dia Mirza Weds Vaibhav Rekhi - ಖ್ಯಾತ ಬಾಲಿವುಡ್ ನಟಿ ದಿಯಾ ಮಿರ್ಜಾ ಮನೆಯಲ್ಲಿ ಇಂದು ಮಂಗಳ ವಾದ್ಯ ಮೊಳಗಿದೆ. ಇಂದು ಅವರು ವೈಭವ್ ರೇಖಿ ಅವರೊಂದಿಗೆ ಹಸೆಮಣೆ ಏರಿದ್ದಾರೆ. ವಿವಾಹದ ಸಿದ್ಧತೆಗಳು ಮಾಧ್ಯಮಗಳಿಗೆ ಬಂದ ಬಳಿಕ ಇದೀಗ ಅವರ ವಿವಾಹದ ಫೋಟೋ ಹಾಗೂ ವಿಡಿಯೋಗಳು ಕೂಡ ಇದೀಗ ಬರಲಾರಂಭಿಸಿವೆ. ಖುದ್ದು ದಿಯಾ ಮಿರ್ಜಾ ಮಾಧ್ಯಮದ ಮುಂದೆ ಬಂದು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಹೀಗಿದೆ ದಿಯಾ ಬ್ರೈಡಲ್ ಲುಕ್
ಪ್ರಸ್ತುತ ಮಾಧ್ಯಮಗಳಲ್ಲಿ ದಿಯಾ ಬ್ರೈಡಲ್ ಲುಕ್ ಕಾಣಿಸಿಕೊಂಡಿದೆ. ಈ ಬ್ರೈಡಲ್ ಲುಕ್ ನಲ್ಲಿ ದಿಯಾ (Dia Mirza) ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಬ್ರೈಡಲ್ ಲುಕ್ ತುಂಬಾ ಪರ್ಫೆಕ್ಟ್ ಆಗಿದೆ. ಈ ಬ್ರೈಡಲ್ ಲುಕ್ ನಲ್ಲಿ ದಿಯಾ ಕೆಂಪು ಬಣ್ಣದ ಪಟ್ಟು ಸೀರೆಯುಟ್ಟಿದ್ದಾರೆ. ಇದಲ್ಲದೆ ಫೋಟೋದಲ್ಲಿ ದಿಯಾ ಕೆಂಪು ಬಣ್ಣದ ಚುನ್ನಿ ತಮ್ಮ ತಲೆಯ ಮೇಲೆ ಹಾಕಿಕೊಂಡಿದ್ದಾರೆ. ಅತ್ಯಲ್ಪ ಆಭರಣಗಳೊಂದಿಗೆ ದಿಯಾಳ ಸಂಪೂರ್ಣ ಔಟ್ ಫಿಟ್ ಒಂದು ಪರ್ಫೆಕ್ಟ್ ಬ್ರೈಡ್ ಅಟಾಯರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ದಿಯಾ ತುಂಬಾ ಸರಳ ಮೇಕಪ್ ಮಾಡಿಕೊಂಡಿದ್ದಾರೆ.
ತುಂಬಾ ಪರ್ಫೆಕ್ಟ್ ಆಗಿ ಕಾಣಿಸಿಕೊಂಡಿದ್ದಾರೆ ದಿಯಾ
ದಿಯಾ ತಮ್ಮ ಮದುವೆಯ ಫೋಟೋಗಳಲ್ಲಿ ಪತಿ ವೈಭವ್ ಅವರೊಂದಿಗೆ ತುಂಬಾ ಪರ್ಫೆಕ್ಟ್ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಪರಸ್ಪರ ಕಾಂಪ್ಲಿಮೆಂಟ್ ನೀಡುತ್ತಿದ್ದಾರೆ. ವೈಭವ್ ಬಿಳಿ ಬಣ್ಣದ ಶೇರ್ವಾನಿ ಜೊತೆಗೆ ಕ್ರೀಂ ಬಣ್ಣದ ಪಗತಿ ಧರಿಸಿದ್ದಾರೆ.
ಇದನ್ನು ಓದಿ-ಹೀಗಿತ್ತು ಡಿಕೆ ಶಿವಕುಮಾರ್ ಪುತ್ರಿ ವಿವಾಹದ ಸಂಭ್ರಮ
ಇದಕ್ಕೂ ಮೊದಲು ಅದಿತಿ ರಾವ್ ಹೈದರಿ ಫೋಟೋ ಪ್ರಕಟಗೊಂಡಿತ್ತು
ಇದಕ್ಕೂ ಮೊದಲು ಆದಿತಿ ರಾವ್ ಹೈದರಿ ಅವರ ಭಾವಚಿತ್ರ ವೈರಲ್ ಆಗಿತ್ತು. ಇದರಲ್ಲಿ ಅವರು ವೈಭವ್ ರೇಖಿ ಅವರ ಪಾದರಕ್ಷೆಗಳೊಂದಿಗೆ ಮುಂದೆ ಬಂದಿದ್ದರು. ಆದಿತಿ ವೈಭವ್ ರೇಖಿ ಅವರ ಕುಟುಂಬದ ಪರವಾಗಿ ಬಂದಿದ್ದರು. ವೈಭವ್ ಅವರ ಪಾದರಕ್ಷೆಗಳನ್ನು ಅದಿತಿ ಗರ್ಲ್ ಗ್ಯಾಂಗ್ ನಿಂದ ರಕ್ಷಿಸುತ್ತಿರುವಂತೆ ಕಂಡುಬಂದಿದ್ದರು.
ಇದನ್ನು ಓದಿ- ಹೀಗಿತ್ತು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅರಶಿನ ಶಾಸ್ತ್ರದ ಸಂಭ್ರಮ..!
ವೈಭವ್ ರೇಖಿ ಯಾರು?
ವರದಿಗಳ ಪ್ರಕಾರ ವೈಭವ್ ರೇಖಿ ಓರ್ವ ಯಶಸ್ವಿ ಉದ್ಯಮಿಯಗಿದ್ದಾರೆ. ಅವರು ಬಾಂದ್ರಾದ ಪಾಲಿ ಹಿಲ್ ನಲ್ಲಿ ವಾಸಿಸುತ್ತಾರೆ. ದಿಯಾ ರೀತಿಯೇ ಅವರೂ ಕೂಡ ವಿವಾಹ ವಿಚ್ಛೇದನೆ ಪಡೆದಿದ್ದಾರೆ. ಈ ಮೊದಲು ವೈಭವ್ ಅವರು ಯೋಗಾ ತರಬೇತಿ ನೀಡುವ ಸುನೈನಾ ರೇಖಿ ಅವರನ್ನು ವಿವಾಹವಾಗಿದ್ದರು.
ಇದನ್ನು ಓದಿ- Natasha Dalal ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ Varun Dhawan !
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.