ಉತ್ತರ ಪ್ರದೇಶದ ಸಿಎಂ ಆಗುತ್ತಾರೆಯೇ ಪ್ರಿಯಾಂಕಾ ಗಾಂಧಿ?

ರೈತರ ಪ್ರತಿಭಟನಾ ಸಭೆಗಾಗಿ ಇಂದು ಉತ್ತರಪ್ರದೇಶದಲ್ಲಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಸರ್ಕಾರಕ್ಕೆ ಪ್ರತಿರೋಧ ಎದುರಾದಾಗಲೆಲ್ಲಾ ತಮ್ಮ ಪಕ್ಷವನ್ನು ದೂರುತ್ತಾರೆ ಎಂದು ಆರೋಪಿಸಿದರು.

Last Updated : Feb 23, 2021, 08:35 PM IST
ಉತ್ತರ ಪ್ರದೇಶದ ಸಿಎಂ ಆಗುತ್ತಾರೆಯೇ ಪ್ರಿಯಾಂಕಾ ಗಾಂಧಿ? title=

ನವದೆಹಲಿ: ರೈತರ ಪ್ರತಿಭಟನಾ ಸಭೆಗಾಗಿ ಇಂದು ಉತ್ತರಪ್ರದೇಶದಲ್ಲಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.ತಮ್ಮ ಸರ್ಕಾರಕ್ಕೆ ಪ್ರತಿರೋಧ ಎದುರಾದಾಗಲೆಲ್ಲಾ ತಮ್ಮ ಪಕ್ಷವನ್ನು ದೂರುತ್ತಾರೆ ಎಂದು ಆರೋಪಿಸಿದರು.

ಇದೇ ವೇಳೆ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಅವರು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಪ್ರಿಯಾಂಕಾ ಗಾಂಧಿ ಉತ್ತರಿಸಿ "ನನ್ನ ಜವಾಬ್ದಾರಿ ಜನರೊಂದಿಗೆ ಇರುವುದು ಮತ್ತು ಅವರ ಸಮಸ್ಯೆಗಳನ್ನು ಎತ್ತುವುದು.ಜನರಿಗಾಗಿ ಧ್ವನಿ ಎತ್ತುವುದು ನನ್ನ ಕರ್ತವ್ಯ. ನಾನು ಹಿಂದೆ ನಿಲ್ಲುವುದಿಲ್ಲ, ನಾನು ಹೋರಾಟ ಮಾಡುತ್ತೇನೆ. ಮತ್ತು ನಾನು ಎಂದಿಗೂ ಜನರಿಗೆ ದ್ರೋಹ ಮಾಡುವುದಿಲ್ಲ" ಎಂದು ಪ್ರಿಯಾಂಕಾ ಗಾಂಧಿ (Priyanka Gandhi Vadra) ಹೇಳಿದರು.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ, 15 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

ಪಿಎಂ ಮೋದಿಯವರನ್ನು 'ಅಹಂಕಾರಿ ಎಂದು ಕರೆದದ್ದು ಏಕೆ ಎಂದು ಕೇಳಿದಾಗ "ಅವರು ಲಕ್ಷಾಂತರ ರೈತರೊಂದಿಗೆ ಮಾತನಾಡಲಿಲ್ಲ. ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಅದು ಅವರನ್ನು ಅಹಂಕಾರಿಯಾಗುತ್ತಾರೆ ಅಲ್ಲವೇ ? 215 ರೈತರು ಸಾವನ್ನಪ್ಪಿದ್ದಾರೆ (ಪ್ರತಿಭಟನೆಯ ಸಮಯದಲ್ಲಿ) ಮತ್ತು ಪ್ರಧಾನಿ ಸಹ ಸಂತಾಪ ವ್ಯಕ್ತಪಡಿಸಲಿಲ್ಲ" ಎಂದು ಅವರು ಹೇಳಿದರು.

ಕಾನೂನುಗಳ ಬಗ್ಗೆ ಕಾಂಗ್ರೆಸ್ ಬೂಟಾಟಿಕೆ ಮಾಡಿದೆ ಎಂದು ಸರ್ಕಾರ ಆರೋಪಿಸಿದೆ, ಇದು ಈ ವಲಯದಲ್ಲಿ ದೀರ್ಘಾವಧಿಯ ಸುಧಾರಣೆಗಳನ್ನು ತರಲು ಮತ್ತು ರೈತರಿಗೆ ಮಾರುಕಟ್ಟೆಗಳಿಗೆ ನೇರ ಪ್ರವೇಶವನ್ನು ನೀಡುತ್ತದೆ ಎಂದು ಹೇಳುತ್ತದೆ.

ಇದನ್ನೂ ಓದಿ: ಹಥ್ರಾಸ್ ಪ್ರತಿಭಟನೆ ವಿಚಾರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು

'ಈ ಜನರು (ಬಿಜೆಪಿ) ಅವರು ಏನನ್ನೂ ಹೇಳಬಹುದು ಎಂದು ನಂಬುತ್ತಾರೆ ಆದರೆ ಯಾರೂ ಅವರನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಅವರು ಮೂಲೆಗುಂಪಾದಾಗ ಮತ್ತು ಜನರು ತಮ್ಮ ನೀತಿಗಳನ್ನು ತಿರಸ್ಕರಿಸಿದಾಗ ಅವರು ಕಾಂಗ್ರೆಸ್ ಅನ್ನು ದೂಷಿಸುತ್ತಾರೆ. ಅವರು ತಮ್ಮ ಸ್ವಂತ ಜವಾಬ್ದಾರಿಯಿಂದ ಓಡಿಹೋಗುತ್ತಾರೆ ಮತ್ತು ಅವರು ನಮ್ಮ ಮೇಲೆ ರಾಜಕೀಯ ಆರೋಪ ಮಾಡುತ್ತಾರೆ ಎಂದು ಕಿಡಿ ಕಾರಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News