ನವದೆಹಲಿ: Mutual Funds Investment - ಒಂದು ವೇಳೆ ನೀವೂ ಕೂಡ ಹಣ ಉಳಿತಾಯಕ್ಕಾಗಿ SIPಯಲ್ಲಿ ಹೂಡಿಕೆ ಮಾಡಲು ಬಯಸುತಿದ್ದು, ಅದನ್ನು ಹೇಗೆ ಆರಂಭಿಸಬೇಕು ಎಂಬ ಕನ್ಫ್ಯೂಶನ್ ನಲ್ಲಿದ್ದರೆ. UTI Mutual Fund ನಿಮಗಾಗಿ WhatsApp Chat ಸೇವೆ ಆರಂಭಿಸಿದೆ. ಇದರ ಮೂಲಕ ಚಾಟ್ ನಡೆಸಿ ನೀವೂ ಕೂಡ ಈ ಕುರಿತು ಮಾಹಿತಿ ಪಡೆಯಬಹುದು ಹಾಗೂ ಸೇವೆಯ ಕುರಿತು ತಿಳಿದುಕೊಳ್ಳಬಹುದು. ಇದಲ್ಲದೆ ನೀವು ಮಾಡಿರುವ ಹೂಡಿಕೆಯ ಮೇಲೆ ನೀವು 24 ಗಂಟೆಗಳ ಕಾಲ ನಿಗಾವಹಿಸಬಹುದು.
ಈ WhatsApp ನಂಬರ್ ಮೂಲಕ ನಡೆಯಲಿದೆ SIP
UTI Mutual Fund ಒಂದು ಅಡ್ವಾನ್ಸ್ಡ್ WhatsApp ಚಾಟ್ ಸೇವೆಯನ್ನು ಬಿಡುಗಡೆ ಮಾಡಿದೆ. +91-7208081230 ಇದು ವಾಟ್ಸ್ ಆಪ್ ಸಂಖ್ಯೆಯಾಗಿರಲಿದೆ. ಹೂಡಿಕೆದಾರರ ಜೊತೆಗೆ ಉತ್ತಮ ಸಂಪರ್ಕ ಸಾಧಿಸಲು ಹಾಗೂ ಅವರಿಗೆ ಉತ್ತಮ ರೀತಿಯಲ್ಲಿ ಸೌಲಭ್ಯ ಒದಗಿಸಲು ಈ ಸೇವೆಯನ್ನು ಆರಂಭಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ UTI Mutual Fund ತನ್ನ ಈ ನೂತನ ವಿಶಿಷ್ಠ ಸೇವೆ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಹಾಗೂ ಹೊಸ ಗ್ರಾಹಕರಿಗೆ ಇಬ್ಬರಿಗೂ ಕೂಡ ಅನ್ವಯಿಸಲಿದೆ ಎಂದಿದೆ.
24x7 ಸಿಗಲಿದೆ WhatsApp ಚಾಟ್ ಸೌಲಭ್ಯ
WhatsApp ಮೆಸೇಜಿಂಗ್ ಆಪ್ ಹೂಡಿಕೆದಾರರಿಗೆ ಆಟೋಮೆಟೆಡ್ ಸಪೋರ್ಟ್ ಮೂಲಕ ತುಂಬಾ ಸುಲಭ ಹಾಗೂ ಸೌಕರ್ಯಗಳಿಂದ ಕೂಡಿದ 24x7 ಮಾಹಿತಿ ಒದಗಿಸಲಾಗುವುದು. ಇದರಿಂದ ಕಂಪನಿಯ ಮಾರ್ಕೆಟಿಂಗ್ ಹಾಗೂ ಇನ್ವೆಸ್ಟ್ಮೆಂಟ್ ಸಪೋರ್ಟ್ ಸರ್ವಿಸ್ ಗೂ ಕೂಡ ಬಲ ಸಿಗಲಿದೆ.
ಇದನ್ನೂ ಓದಿ- ಕೋಟ್ಯಾಧಿಪತಿಯಾಗಬೇಕೆ? ನಿತ್ಯ ಕೇವಲ ರೂ.30 ಉಳಿತಾಯ ಮಾಡಿ ಸಾಕು
ಚಿಟಿಕೆ ಹೊಡೆಯೋದ್ರಲ್ಲಿ 30ಕ್ಕೂ ಅಧಿಕ ಕೆಲಸಗಳನ್ನು ಮಾಡಬಹುದು
WhatsApp ಚಾಟ್ ಸೇವೆಯ ಹೂಡಿಕೆದಾರರಿಗೆ ಚಾಟ್ ಮೂಲಕ ಅಪ್ಡೇಟ್ ಮಾಡಲಾಗುವುದು ಹಾಗೂ ಅವರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಮಾಹಿತಿ ಗ್ರಾಫಿಕ್ಸ್ ಗಳನ್ನು ಸಹ ಬಿತ್ತರಿಸಲಾಗುವುದು. ಇದರಿಂದ ಕಂಪನಿಯ ಹೂಡಿಕೆದಾರರು ಕಂಪನಿಯ ಉತ್ಪನ್ನಗಳಲ್ಲಿ ಆಸಕ್ತಿ ತೋರಿಸಿ, ಯೋಜನೆಗಳ ವಿಸ್ತೃತ ಮಾಹಿತಿ ಕೇಳುವವರು. ಈ ಸೌಕರ್ಯ ಬಳಸಿ ಹೂಡಿಕೆದಾರರು 30ಕ್ಕೂ ಅಧಿಕ ಸೇವೆಗಳನ್ನು ಪಡೆಯಬಹುದು. ಈ ಸೇವೆಗಳಲ್ಲಿ SIP, SWP, STP, SIP Pause, ಮೊಬೈಲ್ ನಂಬರ್ ಹಾಗೂ ಇ-ಮೇಲ್ ವಿಳಾಸ ಅಪ್ಡೇಟ್ ಇತ್ಯಾದಿಗಳ ಸೇವೆ ಶಾಮೀಲಾಗಿವೆ.
ಇದನ್ನೂ ಓದಿ- 40ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುವುದೇಗೆ? ಈ ಸಲಹೆ ನಿಮಗೆ ಉಪಯೋಗವಾಗಬಹುದು!
WhatsAppನಲ್ಲಿ ಸಿಗಲಿವೆ ಈ ಸೇವೆಗಳು
1. ಶಾಖೆಗೆ ಭೇಟಿ ನೀಡದೆ ನಿಮಗೆ 24x7 ಲೈವ್ ಚಾಟ್ ಅಸಿಸ್ಟೆಂಟ್ ಲಭ್ಯವಿರುತ್ತದೆ
2. ನಿಮ್ಮ ಸಂಭಾಷಣೆಯನ್ನು ಸಂಪೂರ್ಣವಾಗಿ ಎನ್ಕ್ರಿಪ್ಟ್ ಮಾಡಲಾಗುತ್ತದೆ, ಅಂದರೆ ಡೇಟಾ ಸೋರಿಕೆಯ ಸಮಸ್ಯೆ ಇಲ್ಲ.
3. NAV, Portfolio ವಿವರಗಳು, ಖಾತೆ ಮತ್ತು ಬಂಡವಾಳ ಲಾಭದ ಸ್ಟೇಟ್ಮೆಂಟ್ ಗಳು ಯುಎಫ್ಎಸ್ ವಿಳಾಸ ಮುಂತಾದ ಸೇವೆಗಳು ಲಭ್ಯವಿರುತ್ತವೆ.
4. ಮ್ಯೂಚುಯಲ್ ಫಂಡ್ಗಳು, ಎಸ್ಐಪಿಗಳು ಮತ್ತು ಸೂಚ್ಯಂಕ ನಿಧಿಗಳ ಬಗ್ಗೆ ಮಾಹಿತಿ ಪಡೆಯಬಹುದು.
5. ತಜ್ಞರ ಲೇಖನಗಳು, ಮ್ಯೂಚುವಲ್ ಫಂಡ್ಗಳ ವೀಡಿಯೊಗಳು ಸಹ ನೀವು ನೋಡಬಹುದು.
6. ಹೂಡಿಕೆ ಗುರಿಗಳಿಗಾಗಿ ಕ್ಯಾಲ್ಕುಲೇಟರ್, ಅಪಾಯದ ಸಾಮರ್ಥ್ಯ ಕೂಡ ತಿಳಿಯಲು ಸಾಧ್ಯವಾಗಲಿದೆ.
ಇದನ್ನೂ ಓದಿ- ಕೇವಲ SIP ಕುರಿತು ಮಾಹಿತಿ ಸಾಲದು, ಹೂಡಿಕೆಯ ಮೊದಲು SWF, STP ಬಗ್ಗೆ ತಿಳಿಯುವುದು ಆವಶ್ಯಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.