New Corona Variant - ಕೊರೊನಾವೈರಸ್ (Coronavirus) ಬಗ್ಗೆ ಪ್ರತಿದಿನ ಹೊಸ ಆತಂಕ ಹುಟ್ಟಿಸುವ ಸಂಗತಿಗಳು ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗೆ, ಒರೆಗಾನ್ (Oregon) ನಲ್ಲಿ ಬ್ರಿಟನ್ ನಲ್ಲಿ ಪತ್ತೆಯಾದ ಕೊರೊನಾ ರೂಪಾಂತರಿಯ ಅಪಾಯಕಾರಿ ರೂಪ ಪತ್ತೆಯಾಗಿದೆ (Corona Oregon Variant). ಈ ವೈರಸ್ ನ ವಿಶೇಷತೆ ಎಂದರೆ ಇದು ಹೊಸ ಪ್ರಕಾರದ ಮ್ಯೂಟೆಶನ್ ನೊಂದಿಗೆ ಪತ್ತೆಯಾಗಿದೆ. ಈ ಕಾರಣದಿಂದ ಇದರ ಮೇಲೆ ವ್ಯಾಕ್ಸಿನ್ ಪ್ರಭಾವ ಬೀಳದಿರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಆದರೆ ಈ ಕುರಿತು ಬಲ್ಲ ತಜ್ಞರು ಇನ್ನಷ್ಟು ಹೆಚ್ಚು ಎಚ್ಚರಿಕೆವಹಿಸಲು ಹಾಗೂ ಕೊರೊನಾ ವೈರಸ್ ಗೆ ಸಂಬಂಧಿಸಿದ ಮೂಲಭೂತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಸಲಹೆ ನೀಡುತ್ತಿದ್ದಾರೆ.
ಸಂಶೋಧಕರಿಗೆ ಇದುವರೆಗೆ ಈ ಕಾಂಬಿನೇಶನ್ ನ ಒಂದೇ ಕೇಸ್ ದೊರೆತಿದೆ. ಆದರೆ ಜೆನೆಟಿಕ್ ಅನಲಿಸ್ಟ್ ಗಳು ಹೇಳುವ ಪ್ರಕಾರ ಈ ವೇರಿಯಂಟ್ ಸಮುದಾಯಗಳಲ್ಲಿ ವೇಗವಾಗಿ ಹರಡುತ್ತಿದೆ ಮತ್ತು ಯಾವುದೇ ಒಬ್ಬ ವ್ಯಕ್ತಿಯಲ್ಲಿ ಇದು ತಯಾರಾಗಿಲ್ಲ ಎನ್ನುತ್ತಾರೆ. ಈ ಕುರಿತು ಹೇಳಿಕೆ ನೀಡುವ ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯುನಿವರ್ಸಿಟಿಯ ಬ್ರಾಯನ್ ಓ ರಾಕ್, 'ಇದನ್ನು ನಾವು ವಿಶ್ವದ ಎರಡನೇ ಭಾಗದಿಂದ ತಂದಿಲ್ಲ ಮತ್ತು ಇದು ಆಕಸ್ಮಿಕವಾಗಿ ಪ್ರಕಟಗೊಂಡಿದೆ' ಎಂದಿದ್ದಾರೆ. ರಾಕ್ ಹಾಗೂ ಅವರ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆಂಶನ್ ತಂಡ ಈ ವೇರಿಯಂಟ್ ಅನ್ನು ಟ್ರ್ಯಾಕ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿರುವ ಅವರು, ಡೇಟಾಬೇಸ್ ಅನ್ನು ವಿಜ್ಞಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
ಬ್ರಿಟನ್‌ನಲ್ಲಿ (Birtain) ಕಂಡುಬಂದ B.1.1.1.7 ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ. ಈ ರೀತಿಯ ವೈರಸ್ ವಾಸ್ತವವಾಗಿ ಹೆಚ್ಚು ಸಾಂಕ್ರಾಮಿಕವಾಗಿದೆ. ಮುಂಬರುವ ವಾರಗಳಲ್ಲಿ, ಈ ಹೊಸ ರೂಪಾಂತರದಿಂದಾಗಿ, ಅಮೆರಿಕದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಒರೆಗಾನ್ ನಲ್ಲಿ ದೊರೆತ ಒಂದು ನಮೂನೆಯಲ್ಲಿ ಈ ರೀತಿಯ ವೈರಸ್ ಜೊತೆಗೆ ಒಂದು ಮ್ಯುಟೆಶನ್ ಕೂಡ (E484K ಅಥವಾ Eek) ಕೂಡ ಶಾಮೀಲಾಗಿದೆ. ಈ ಮ್ಯೂಟೆಶನ್ (Corona Worrying Mutation) ದಕ್ಷಿಣ ಆಫ್ರಿಕಾ, ಬ್ರೆಜಿಲ್ ಹಾಗೂ ನ್ಯೂಯಾರ್ಕ್ ನಲ್ಲಿ ಹರಡುತ್ತಿರುವ ವೈರಸ್ (Coronavirus) ಗಳಲ್ಲಿಯೂ ಕೂಡ ಕಂಡುಬಂದಿದೆ ಎಂದು ತಜ್ಞರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿರುವ ಕ್ಲಿನಿಕಲ್ ಟ್ರಯಲ್ ಗಳಲ್ಲಿ Eek ಮ್ಯೂಟೆಶನ್ ರೋಗ ಪ್ರತಿರೋಧಕ ಪ್ರಕ್ರಿಯೆಗೆ ಹಾನಿ ತಲುಪಿಸಿ, ಅಸ್ತಿತ್ವದಲ್ಲಿರುವ ವ್ಯಾಕ್ಸಿನ್ ಪ್ರಭಾವ ಕಡಿಮೆ ಮಾಡುತ್ತದೆ. ಬ್ರಿಟನ್ ನಲ್ಲಿ ಪತ್ತೆಯಾದ Eek ಜೊತೆಗೆ B.1.1.7 ವೇರಿಯಂಟ್ ವಿಜ್ಞಾನಿಗಳ ಚಿಂತೆಯನ್ನು ಹೆಚ್ಚಿಸಿದೆ. ಒರೆಗಾನ್ ನಲ್ಲಿ ಪತ್ತೆಯಾಗಿರುವ ರೂಪಾಂತರಿ ಸ್ವತಂತ್ರವಾಗಿ ಅಭಿವೃದ್ಧಿಗೊಂಡಿದೆ ಎಂದು ಡಾ. ರಾಕ್ ಹೇಳಿದ್ದಾರೆ.
ಇದನ್ನೂ ಓದಿ-Corona vaccination : ನಾಳೆಯಿಂದ ಸಿಗಲಿದೆ ಕರೋನಾ ಲಸಿಕೆ; ನಿಮ್ಮ ಬಳಿಯಿರಲಿ ಈ ಅಗತ್ಯ ದಾಖಲೆಗಳು
ಆದರೆ ಈ ಕುರಿತು ಹೇಳಿಕೆ ನೀಡುವ ತಜ್ಞರು ಈ ಸಂಶೋಧನೆ ಬೆಚ್ಚಿಬೀಳಿಸುವಂತಿಲ್ಲ, ಏಕೆಂದರೆ Eek ಮ್ಯೂಟೆಶನ್ ಅನ್ನು ವಿಶ್ವದ ಎಲ್ಲಾ ರೀತಿಯ ವೈರಸ್ ಗಳಲ್ಲಿ ಗುರುತಿಸಲಾಗಿದೆ. ಆದರೆ, B.1.1.7 ಜೊತೆಗೆ ಸೇರಿಕೊಂಡಿರುವ ಮ್ಯೂಟೆಶನ್ ಕುತೂಹಲಕಾರಿಯಾಗಿದೆ. ಬ್ರಿಟನ್ ವೈರಸ್ ನ ಈ ಹೊಸ ರೂಪಾಂತರಿಯ ಕಡಿಮೆ ಪ್ರಕರಣಗಳು ಬೆಳೆಕಿಗೆ ಬಂದಿದ್ದವು. ಆದರೆ, ಈ ಕಾಂಬಿನೇಶನ್ ಸಿದ್ಧಗೊಂಡಾಗ B.1.1.7 ಇಡೀ ದೇಶಾದ್ಯಂತ ಹರಡಿತ್ತು. ಹೀಗಾಗಿ ಜನರು ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ-Corona Vaccination : ಲಸಿಕೆ ಹಾಕಿಸಿಕೊಳ್ಳಲು ನಿಮ್ಮ ನಂಬರ್ ಬಂದಿದೆ, ಉಪಯುಕ್ತ ಮಾಹಿತಿ ಇಲ್ಲಿದೆ.