International Women's Day: ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ Google, ಫೇಸ್‌ಬುಕ್‌

ಇಂದಿನ ಈ ವಿಶೇಷ ದಿನದಂದು, ಫೇಸ್‌ಬುಕ್ ವಿಶ್ವದಾದ್ಯಂತ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದೆ. ಫೇಸ್‌ಬುಕ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಜಿಐಎಫ್ ಲೋಗೊವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಹಿಳೆಯರನ್ನು ವಿಭಿನ್ನ ವೇಷಭೂಷಣಗಳಲ್ಲಿ ತೋರಿಸಲಾಗಿದೆ. ಇದನ್ನು ಮಹಿಳಾ ಐಕ್ಯತೆಯ ಸಂಕೇತವೆಂದು ಪರಿಗಣಿಸಲಾಗಿದೆ.

Written by - Yashaswini V | Last Updated : Mar 8, 2021, 09:00 AM IST
  • ಇಂದು ಅಂತರರಾಷ್ಟ್ರೀಯ ಮಹಿಳಾ ದಿನ
  • ಗೂಗಲ್ ಮತ್ತು ಫೇಸ್‌ಬುಕ್ ಲೋಗೋವನ್ನು ಅರ್ಪಿಸುತ್ತವೆ
  • ಇಂದಿನ ಥೀಮ್ ಏನೆಂದು ತಿಳಿಯಿರಿ
International Women's Day: ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ Google, ಫೇಸ್‌ಬುಕ್‌  title=
International womens day 2021

ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women's Day)  ವಿಶೇಷ ಸಂದರ್ಭದಲ್ಲಿ ಟೆಕ್ ದೈತ್ಯ ಕಂಪನಿಗಳಾದ ಗೂಗಲ್ (Google) ಮತ್ತು ಫೇಸ್‌ಬುಕ್ (Facebook) ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿವೆ. ಗೂಗಲ್ ಡೂಡಲ್ಸ್ ಮೂಲಕ ಇಂದು ಮಹಿಳಾ ಸಬಲೀಕರಣವನ್ನು ಬಿಂಬಿಸಿದೆ. ಫೇಸ್‌ಬುಕ್ ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ವಿಭಿನ್ನ ವೇಷಭೂಷಣಗಳಲ್ಲಿ ಮಹಿಳೆಯರ ಲೋಗೋವನ್ನು ಪ್ರದರ್ಶಿಸಿದೆ. 

ಗೂಗಲ್ ಡೂಡಲ್ಸ್ ಮಹಿಳಾ ಸಬಲೀಕರಣವನ್ನು ಪ್ರದರ್ಶಿಸಿದೆ: 
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (International Women's Day) ಅಂಗವಾಗಿ ಗೂಗಲ್ (Google) ತನ್ನ ಡೂಡಲ್ಸ್ ಅನ್ನು  ಅರ್ಪಿಸಿದೆ. ಗೂಗಲ್ ತನ್ನ ಮುಖ್ಯ ಪುಟದ ಮೂಲಕ ಶಿಕ್ಷಣ, ನಾಗರಿಕ ಹಕ್ಕುಗಳು ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಕಾಲಿಟ್ಟ ಮೊದಲ ಮಹಿಳೆಯರನ್ನು ಇದರಲ್ಲಿ ಬಿತ್ತರಿಸಿದೆ. ಇದಲ್ಲದೆ, ಅಕಾಡೆಮಿ ಮತ್ತು ವ್ಯವಹಾರದಂತಹ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗಾಗಿ ಕೂಡ ಇದನ್ನು ಸಮರ್ಪಿಸಲಾಗುತ್ತಿದೆ ಎಂದು ಗೂಗಲ್ ಹೇಳಿದೆ.

ಫೇಸ್‌ಬುಕ್ ಲೋಗೋವನ್ನು ಜಗತ್ತಿಗೆ ಅರ್ಪಿಸಿದೆ :
ಇಂದಿನ ಈ ವಿಶೇಷ ದಿನದಂದು ಫೇಸ್‌ಬುಕ್ (Facebook) ವಿಶ್ವದಾದ್ಯಂತ ಮಹಿಳೆಯರಿಗಾಗಿ ಜಿಐಎಫ್ ಸಮರ್ಪಿಸಿದೆ. ಫೇಸ್‌ಬುಕ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಜಿಐಎಫ್ ಲೋಗೊವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಹಿಳೆಯರನ್ನು ವಿಭಿನ್ನ ವೇಷಭೂಷಣಗಳಲ್ಲಿ ತೋರಿಸಲಾಗಿದೆ. ಇದನ್ನು ಮಹಿಳಾ ಐಕ್ಯತೆಯ ಸಂಕೇತವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ - International womens day 2021 : ಈ ಎಲ್ಲಾ ಸ್ಥಳಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ:
ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರಿಗಾಗಿ ಅರ್ಪಿಸಲಾಗಿದೆ.

ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಥೀಮ್:
ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯವೆಂದರೆ “ಸವಾಲು ಆಯ್ಕೆಮಾಡಿ” (#ChooseToChallenge). ಸವಾಲಿನ ಜಗತ್ತು ಎಚ್ಚರಿಕೆಯ ಜಗತ್ತು ಮತ್ತು ಸವಾಲಿನಿಂದ ಬದಲಾವಣೆ ಸಾಧ್ಯ.

ಇದನ್ನೂ ಓದಿ - Burqa Ban ಮಾಡಲು ಸಿದ್ಧತೆ ನಡೆಸಿದೆ ಈ ದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News