Yuvarathnaa Twitter Review: ಪವರ್ ಫುಲ್ ಸಂದೇಶ ಹೊತ್ತು ತಂದ ಯುವರತ್ನ

ದೇಶಾದ್ಯಂತ ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Last Updated : Apr 1, 2021, 05:05 PM IST
Yuvarathnaa Twitter Review: ಪವರ್ ಫುಲ್ ಸಂದೇಶ ಹೊತ್ತು ತಂದ ಯುವರತ್ನ  title=
Photo Courtesy: Twitter

ಬೆಂಗಳೂರು: ದೇಶಾದ್ಯಂತ ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: Sanjay Dutt: 'ಯುವರತ್ನ' ಟ್ರೈಲರ್ ನೋಡಿ ಹಾಡಿ ಹೊಗಳಿದ ಸಂಜಯ್ ದತ್..!

ಕೊರೊನಾದ ಲಾಕ್ ಡೌನ್ ನಂತರ ಬಿಡುಗಡೆಯಾದ ಪುನೀತ ರಾಜಕುಮಾರ್ (Puneeth Rajkumar) ಅಭಿನಯದ ಈ ಸಿನಿಮಾ ಬಹುಗಣ ತಾರಾಗಣವನ್ನು ಹೊಂದಿದೆ.ಬಿಡುಗಡೆಗೂ ಮುನ್ನವೇ ಅದ್ದೂರಿ ಪ್ರಚಾರದ ಮೂಲಕ ಹವಾ ಎಬ್ಬಿಸಿದ್ದ ಈ ಸಿನಿಮಾಗೆ ಪ್ರೇಕ್ಷಕ ಪ್ರಭು ಕೂಡ ಉಘೇ ಎಂದಿದ್ದಾನೆ. ಕೆಲವು ಕಡೆ ಬೆಳಗಿನ ಜಾವದಲ್ಲಿ ಶೂಗೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಕಮರ್ಸಿಯಲ್ ಅಂಶಗಳನ್ನು ಮಲೈಸಿದ ಈ ಚಿತ್ರ ಶಿಕ್ಷಣದ ವ್ಯಾಪಾರೀಕರಣದ ಕುರಿತಾಗಿ ಬೆಳಕು ಚೆಲ್ಲುವ ಮೂಲಕ ಈಗ ಸಾಮಾಜಿಕ ಸಂದೇಶವನ್ನು ಸಾರುವ ಪ್ರಯತ್ನವನ್ನು ಮಾಡಿದೆ.

ಇದನ್ನೂ ಓದಿ: ಯುವರತ್ನ ಚಿತ್ರದ ಅದ್ದೂರಿ ಪ್ರಚಾರ ; ಅಪ್ಪು ನೋಡಲು ಸೇರಿದ ಜನಸಾಗರ

ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಡಾಲಿ ಧನಂಜಯ್, ಸೋನು ಗೌಡ ಮತ್ತು ಸಯೇಶಾ ಮುಂತಾದವರು ನಟಿಸಿದ್ದಾರೆ.ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ತಮ್ಮ ಅಪ್ಪು ಚಿತ್ರದ ಖದರ್ ನ್ನು ನೆನಪಿಸುತ್ತಾರೆ.ಡ್ಯಾನ್ಸ್ ಫೈಟಿಂಗ್ ಹಾಗೂ ಉತ್ತಮ ಸಾಂಗ್ ಗಳನ್ನು ಹೊಂದಿರುವ ಈ ಸಿನಿಮಾ ಪಕ್ಕಾ ಪುನೀತ್ ರಾಜಕುಮಾರ್ ರವರ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರಗಳ ಸಾಲಿಗೆ ಸೇರುತ್ತದೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಚಿತ್ರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News