ಬೀಜಿಂಗ್: ಶತ್ರು ರಾಷ್ಟ್ರಗಳ ವಿರುದ್ಧ ರಕ್ತಸಿಕ್ತ ಯುದ್ಧಕ್ಕೆ ಸಿದ್ಧವಾಗಿದ್ದು, ಚೀನಾ ತನ್ನ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಅಧ್ಯಕ್ಷ ಕ್ಸಿ ಜಿಂಪಿಂಗ್ ಮಂಗಳವಾರ ಹೇಳಿದ್ದಾರೆ.
"ಚೀನಾ ತನ್ನದೇ ಆದ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯುವಲ್ಲಿ ದೃಢನಿಶ್ಚಯವನ್ನು ಹೊಂದಿದೆ ಮತ್ತು ತನ್ನ ಭೂಪ್ರದೇಶದಲ್ಲಿ ಒಂದಿಂಚನ್ನೂ ಬಿಟ್ಟುಕೊಡುವುದಿಲ್ಲ. ಹಾಗೆಯೇ ಇತರರ ಭೂಪ್ರದೇಶವನ್ನು ಆಕ್ರಮಿಸುವುದಿಲ್ಲ" ಎಂದು ನ್ಯಾಷನಲ್ ಪೋಪಲ್ಸ್ ಕಾಂಗ್ರೆಸ್ ಅಂತಿಮ ಅಧಿವೇಶನದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಸಿ ಹೇಳಿದ್ದಾರೆ.
ಸ್ವತಂತ್ರ ಆಡಳಿತವಿರುವ ತೈವಾನ್ ದ್ವೀಪ ತನ್ನದೆಂದು ಚೀನಾ ಹೇಳಿಕೊಳ್ಳುತ್ತಿದೆ. ಮುಂದೊಂದು ದಿನ ತೈವಾನ್ ಚೀನಾ ಆಡಳಿತದೊಳಗೆ ಬರಲಿದೆ ಎಂದು ಅದು ಭರವಸೆ ಇರಿಸಿಕೊಂಡಿದೆ. ಇನ್ನು ಹಿಂದೆ ಬ್ರಿಟೀಷ್ ವಸಾಹತುವಾಗಿದ್ದ ಹಾಂಗ್ ಕಾಂಗ್ ನ ಜನರು ಇತ್ತೀಚೆಗೆ ಬೆಳೆಯುತ್ತಿರುವ ಚೀನಾ, ಬೀಜಿಂಗ್ ಹಸ್ತಕ್ಷೇಪಕ್ಕೆ ಅಸಮಾಧಾನಗೊಂಡಿದ್ದಾರೆ. ಹಾಂಗ್ ಕಾಂಗ್ ಪ್ರಸ್ತುತ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ.