ನವದೆಹಲಿ: ಊಟದ ನಂತರ ವೀಳ್ಯದೆಲೆ ಹಾಕಿಕೊಳ್ಳುವುದು ಭಾರತೀಯರಲ್ಲಿ ಸಾಮಾನ್ಯ. ಆದ್ರೆ ಈ ಪಾನ್ ಮಸಾಲದಲ್ಲಿ ಬಹಳ ವೆರೈಟಿಗಳಿವೆ. ಸಧ್ಯ ಭಾರತದಲ್ಲಿ ಶುದ್ಧ ಚಿನ್ನದ ಪಾನ್ ಮಸಾಲ ಬಹಳ ಸದ್ದು ಮಾಡುತ್ತಿದೆ.
ಈ ಅಂಗಡಿಯಲ್ಲಿ ಶುದ್ಧ ಚಿನ್ನದ ಪಾನ್ ಮಸಾಲ ಲಭ್ಯ: ಈ ಅಂಗಡಿ ರಾಷ್ಟ್ರ ರಾಜಧಾನಿ ದೆಹಲಿಯ ಕೊನಾಟ್ ಪ್ಲೇಸ್ ನಲ್ಲಿದೆ. ಈ ಅಂಗಡಿಯ ಹೆಸರು 'ಯಮುಸ್ ಪಂಚಾಯತ್'(Yamus Panchayat), ಇದು ಈ ಪಾನ್ ಮಸಾಲ ಪಾರ್ಲರ್ ಆಗಿದ್ದು ಇಲ್ಲಿ ವಿವಿಧ ರೀತಿಯ ಪಾನ್ ಗಳು ಸಿಗುತ್ತವೆ. ಆದ್ರೆ ಇಲ್ಲಿಯೇ ಸಿಗುವ ಶುದ್ಧ ಚಿನ್ನದ ಪಾನ್ ಮಸಾಲ ಬಹಳ ಹೆಸರು ವಾಸಿಯಾಗಿದೆ.
ವರದಕ್ಷಿಣೆಗಾಗಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಸಂಬಂಧಿಕರು
ಈ ಕುರಿತು 'ಯಮುಸ್ ಪಂಚಾಯತ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವಂದನ್ನ ಪೋಸ್ಟ್ ಮಾಡಿದ್ದೂ. ಈ ವಿಡಿಯೋದಲ್ಲಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ 'ಗೋಲ್ಡ್ ಪಾನ್'(Gold Pan) ಅನ್ನು ಹೇಗೆ ತಯಾರಿಸಲಾಗುತ್ತದೆ, ಯಾಕೆ ಅದನ್ನ ಹಾಗೆ ಕರೆಯಲಾಗುತ್ತದೆ ಹೀಗೆ ಎಲ್ಲವನ್ನು ವಿವರಿಸಿದ್ದಾರೆ.
Anil Deshmukh: ಸಚಿವ ಸ್ಥಾನಕ್ಕೆ 'ಅನಿಲ್ ದೇಶ್ ಮುಖ್' ರಾಜೀನಾಮೆ!
ಒಂದು 'ಗೋಲ್ಡ್ ಪಾನ್' ಬೆಲೆ 600 ರೂಪಾಯಿ! ಈ ವೀಡಿಯೊದಲ್ಲಿ ಮಹಿಳೆಯೊಬ್ಬರು 'ಗೋಲ್ಡ್ ಪಾನ್' ಅನ್ನ ಹೇಗೆ ತಯಾರಿಸಲಾಗುತ್ತದೆ ಎಂಬುವುದನ್ನ ತೋರಿಸಿದರು. ಚಿನ್ನದ ಲೇಪನ ಹೊಂದಿರುವ ಈ ಪ್ಯಾನ್‌ನ ಬೆಲೆ 600 ರೂ. ಫೈರ್ ಪಾನ್(Fire Pan) ಪ್ರಸಿದ್ಧವಾದಂತೆಯೇ, ಈಗ ಅದೇ ರೀತಿಯಲ್ಲಿ ಈ ಗೋಲ್ಡನ್ ಪಾನ್ ಎಂದರೆ ಚಿನ್ನದ ಪಾನ್ ಸಾಕಷ್ಟು ಪ್ರಸಿದ್ಧವಾಗಿದೆ. ದುಬಾರಿಯಾದ ಕಾರಣ, ಈ ಪಾನ್ ಅನ್ನು ಆರ್ಡರ್ ಕೊಟ್ಟರೆ ಮಾತ್ರ ತಯಾರಿಸಲಾಗುತ್ತದೆ. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ ಎಂದು ವಿಡಿಯೋದಲ್ಲಿ ಮಹಿಳೆ ಹೇಳುವುದನ್ನ ಕೇಳಬಹುದು.
Hafta Vasooli Case: ಹಫ್ತಾ ವಸೂಲಿ ಪ್ರಕರಣ - ಅನೀಲ್ ದೇಶ್ಮುಖ್ ಗೆ ಭಾರಿ ಹಿನ್ನಡೆ, CBI ತನಿಖೆಗೆ HC ಆದೇಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.