Lady Finger Benefits: ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು ಬೆಂಡೆಕಾಯಿ..!

ಬೆಂಡೆಕಾಯಿಯಲ್ಲಿ ಉತ್ತಮ ಕಾರ್ಬೋಹೈಡ್ರೇಟ್‌ಗಳಿವೆ, ಇದು ತೂಕ ನಿಯಂತ್ರಣದಲ್ಲಿಡಲು  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತ

Last Updated : Apr 11, 2021, 05:42 PM IST
  • ರೋಗನಿರೋಧಕ ಶಕ್ತಿ ಹೆಚ್ಚಿಸಲು ಬೆಂಡೆಕಾಯಿ
  • ಚರ್ಮಕ್ಕೂ ಒಳ್ಳೆಯದು ಬೆಂಡೆಕಾಯಿ
  • ಜೀರ್ಣಕ್ರಿಯೆ ಸರಿಯಾಗಲು ಸೇವಿಸಿ ಬೆಂಡೆಕಾಯಿ
Lady Finger Benefits: ಬೇಸಿಗೆಯಲ್ಲಿ ಆರೋಗ್ಯಕ್ಕೆ ಒಳ್ಳೆಯದು ಬೆಂಡೆಕಾಯಿ..! title=

ಬೇಸಿಗೆ ತರಕಾರಿ ತಿನ್ನುವುದು ಆರೋಗ್ಯಕ್ಕೆ ಬಹಳ ಮುಖ್ಯವಾದದ್ದು. ಅದ್ರಲ್ಲೂ ಬೆಂಡೆಕಾಯಿಯನ್ನು  ಜನರು ತುಂಬಾ ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಬೆಂಡೆಕಾಯಿ ಮರಿಕಟ್ಟೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಇದರ ರುಚಿಗೆ ಮರು ಹೋದವರೆ ಇಲ್ಲ. ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇಂದು ನಾವು ನಿಮಗೆ ಬೆಂಡೆಕಾಯಿ ಪ್ರಯೋಜನಗಳ ಬಗ್ಗೆ ವಿವರಿಸಲಿದ್ದೇವೆ. 

ರೋಗನಿರೋಧಕ ಶಕ್ತಿ ಹೆಚ್ಚಿಸಲು ಬೆಂಡೆಕಾಯಿ: 
ಬೇಸಿಗೆಯಲ್ಲಿ ಬೆಂಡೆಕಾಯಿ ಸೇವಿಸಿದರೆ ರೋಗನಿರೋಧಕ ಶಕ್ತಿ(Immunity) ಹೆಚ್ಚಾಗಿರುತ್ತದೆ. ಬೆಂಡೆಕಾಯಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ರೋಗಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ : Water-Ajwain Water Benefits: ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಮತ್ತು ಅಜೀವಾನದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ?

ತೂಕ ಇಳಿಸಿಕೊಳ್ಳಲು ಬೆಂಡೆಕಾಯಿ: 
ಬೆಂಡೆಕಾಯಿಯಲ್ಲಿ ಉತ್ತಮ ಕಾರ್ಬೋಹೈಡ್ರೇಟ್‌ಗಳಿವೆ, ಇದು ತೂಕ ನಿಯಂತ್ರಣದಲ್ಲಿಡಲು  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಬೆಂಡೆಕಾಯಿ(Lady Finger)ಯಲ್ಲಿ ಸ್ಥೂಲಕಾಯ ವಿರೋಧಿ ಗುಣಲಕ್ಷಣಗಳು ಸಹ ಕಂಡುಬರುತ್ತವೆ, ಇದು ದೇಹ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಆದ್ದರಿಂದ ನೀವು ತೂಕವನ್ನು ಹೆಚ್ಚಿಸುವ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಖಂಡಿತವಾಗಿಯೂ ಬೆಂಡೆಕಾಯಿಯನ್ನ ಆಹಾರದಲ್ಲಿ ಸೇವಿಸಿ.

ಇದನ್ನೂ ಓದಿ : Summer Food: ಪುರುಷರೇ ಬೇಸಿಗೆಯಲ್ಲಿ ತಪ್ಪದೆ ಸೇವಿಸಿ ಈ ಒಣ ಹಣ್ಣು; ಪಡೆಯಿರಿ ಅದ್ಭುತ ಪ್ರಯೋಜನ!

ಜೀರ್ಣಕ್ರಿಯೆ ಸರಿಯಾಗಲು ಸೇವಿಸಿ ಬೆಂಡೆಕಾಯಿ: 
ಹೆಚ್ಚಿನ ಜನರು ಬೇಸಿಗೆ(Summer)ಯಲ್ಲಿ ಹೊಟ್ಟೆಯ ಸಮಸ್ಯೆಗಳನ್ನ ಎದುರಿಸುತ್ತಾರೆ. ಈ ಸಂದರ್ಭದಲ್ಲಿ, ಬೆಂಡೆಕಾಯಿ ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಬೆಂಡೆಕಾಯಿಯಲ್ಲಿ ಹೆಚ್ಚಿನ  ಪ್ರಮಾಣದ ಫೈಬರ್ ಇದೆ. ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Home Remedies For Good Sleep: ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ನಿಮ್ಮ ಅಡುಗೆಮನೆಯಲ್ಲಿಯೇ ಇದೆ ಪರಿಹಾರ

ದೃಷ್ಟಿ ಸುಧಾರಿಸಲು ಬೆಂಡೆಕಾಯಿ: 
ಬೆಂಡೆಕಾಯಿ ತಿನ್ನುವುದು ಕಣ್ಣುಗಳ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಕಂಪ್ಯೂಟರ್(Computer)‌ ಮುಂದೆ ಕೂತು ಕೆಲಸ ಮಾಡುವ ಜನರು ತಮ್ಮ ಆಹಾರದಲ್ಲಿ ಲೇಡಿ ಫಿಂಗರ್ ಅನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ ಬೆಂಡೆಕಾಯಿ‌ಯಲ್ಲಿ ಬೀಟಾ ಕ್ಯಾರೋಟಿನ್ ಇದ್ದು, ಇದು ಐಸೈಟ್‌ಗೆ ಒಳ್ಳೆಯದು.

ಇದನ್ನೂ ಓದಿ : Food Storage Tips: ಬೇಸಿಗೆಯಲ್ಲಿ ಈ ವಸ್ತುಗಳನ್ನು ಫ್ರಿಜ್‌ನಲ್ಲಿ ದೀರ್ಘಕಾಲ ಇಡಬೇಡಿ

 ಚರ್ಮಕ್ಕೂ ಒಳ್ಳೆಯದು ಬೆಂಡೆಕಾಯಿ: 
ಬೇಸಿಗೆಯಲ್ಲಿ, ಚರ್ಮ(Skin)ವನ್ನು ಸ್ವಚ್ಛವಾಗಿಡಲು ಮತ್ತು ಉತ್ತಮವಾಗಿಡಲು ಬೆಂಡೆಕಾಯಿ ಬಹಳಷ್ಟು ಸಹಾಯ ಮಾಡುತ್ತದೆ. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಸಹ ಕೂಡ ಇದೆ. ಇದು ಚರ್ಮದ ಸತ್ತ ಜೀವಕೋಶಗಳನ್ನು ಸರಿಪಡಿಸುತ್ತದೆ. ಅಲ್ಲದೆ, ಬೆಂಡೆಕಾಯಿಯಲ್ಲಿ ವಿಟಮಿನ್-ಎ ಕೂಡ ಇದ್ದು, ಇದು ಚರ್ಮವನ್ನು ಸುರಕ್ಷಿತವಾಗಿಡುತ್ತದೆ.

ಇದನ್ನೂ ಓದಿ : Vinegar Onion Benefits: ಈರುಳ್ಳಿ ತಿನ್ನುವ ಮೊದಲು ಈ ಕೆಲಸ ಮಾಡಿ; ಈ 10 ಅದ್ಭುತ ಪ್ರಯೋಜನ ಪಡೆಯಿರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News