ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಹುಟ್ಟಿರುವ ಸಂಗತಿ ಎಲ್ಲರಿಗೂ ಗೊತ್ತಿರುವಂತದ್ದು. ಆದ್ರೆ ಇಬ್ಬರ ಅಭಿಮಾನಿಗಳು ಪುತ್ರಿ ವಮಿಕಾಳ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲರಾಗಿದ್ದಾರೆ. ಏಕೆಂದರೆ ಸ್ಟಾರ್ ದಂಪತಿಗಳ ಮಗುವಿನ ಮುಖವನ್ನು ಇನ್ನು ರಿವೀಲ್ ಮಾಡಿಲ್ಲ.
ಇತ್ತೀಚೆಗೆ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ(Virat Kohli) ದಾನಿಶ್ ಸೇಟ್ ಗೆ ನೀಡಿದ ಸಂದರ್ಶನದಲ್ಲಿ ಪುತ್ರಿ ವಮಿಕಾಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ- IPL 2021: ಕೊನೆಯ ಓವರ್ನಲ್ಲಿ ಹೀರೋ ಆದ ಪಂಜಾಬ್ ಕಿಂಗ್ಸ್ನ ಬೌಲರ್
ಮಗಳು ವಮಿಕಾ(Vamika) ಜನಿಸಿದ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ತಮ್ಮ ದಿನಚರಿಯಲ್ಲಿ "ತೀವ್ರವಾದ" ಬದಲಾವಣೆಗಳ ಕುರಿತು ಮಾತನಾಡಿದ ಕೊಹ್ಲಿ, ಈಗ ಲೈಫ್ ಸಾಕಷ್ಟು ಬದಲಾಗುತ್ತಿದೆ. ವಮಿಕಾ ಹುಟ್ಟಿದ ಮೇಲೆ ನನ್ನ ಲೈಫ್ ಪೂರ್ಣವಾಗಿ ಬದಲಾಗಿದೆ. ಸಧ್ಯ ಅವಳು ಸಂಪೂರ್ಣವಾಗಿ ತಾಯಿಯ ಮೇಲೆ ಅವಲಂಬಿತವಾಗಿದ್ದಾಳೆ. ನಾನು ತಂದೆಯಾಗಿ ಮಾಡಬೇಕಾದ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ವಿಭಿನ್ನ ವಾತಾವರಣದಲ್ಲಿ ಇಬ್ಬರೂ ಒಟ್ಟಿಗೆ ಮಗುವನ್ನು ನೋಡಿಕೊಳ್ಳುವುದು ಮತ್ತು ಅವಳ ನಗು ಮುಖ ನೋಡಿದಾಗ ನನಗೆ ಎಲ್ಲ ಖುಷಿ ಉಕ್ಕಿ ಬರುತ್ತದೆ. ಅವಳು ಬಂಡ ಮೇಲೆ ಜೀವನ ತುಂಬಾ ಬದಲಾಗಿದೆ. ಅವಳ ಮುಖದಲ್ಲಿ ಸ್ಮೈಲ್ ನೋಡಿದಾಗ ನಾವಿಬ್ಬರು ಪಡುವ ಸಂತೋಷವನ್ನ ನಿಮಗೆ ಪದಗಳಲ್ಲಿ ಹೇಳಲಾಗುವುದಿಲ್ಲ. ಅದನ್ನ ಅನುಭವಿಸಬೇಕು ಆಗ ಮಾತ್ರ ಗೊತ್ತಾಗುತ್ತದೆ.
Bold Diaries: Virat Kohli Interview Part 1
Captain Kohli talks about the beautiful feeling of becoming a dad, the hardships of bio bubble life, stellar growth of some of the RCB youngsters, and much more on @myntra presents Bold Diaries.#PlayBold #WeAreChallengers #IPL2021 pic.twitter.com/zWCcZAqG9A
— Royal Challengers Bangalore (@RCBTweets) April 8, 2021
ಇದನ್ನೂ ಓದಿ- Rajasthan vs PBKS, 4th Match: ಕೊನೆವರೆಗೂ ಹೋರಾಡಿ ಸೋತ ರಾಜಸ್ಥಾನ ರಾಯಲ್ಸ್
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ(Anushka Sharma) ದಂಪತಿಗೆ 2021 ರ ಜನವರಿ 11 ರಂದು ವಮಿಕಾ ಜನಿಸಿದ್ದಾಳೆ. ಅವಳನ್ನ ನೋಡಲು ಅಭಿಮಾನಿಗಳು ಭಾರಿ ಕುತೊಹಲದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ- Rajasthan vs PBKS, 4th Match: ಕೆ.ಎಲ್.ರಾಹುಲ್, ಹೂಡಾ ಅಬ್ಬರ, ಪಂಜಾಬ್ 221/5
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.