ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಲಾಕ್ ಡೌನ್ ವಿಧಿಸಲಾಗುತ್ತದೆ ಎನ್ನುವ ಊಹಾಪೋಹಗಳ ನಡುವೆಯೇ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕೊರೊನಾ (Coronavirus) ಪ್ರಕರಣಗಳ ಸಂಖ್ಯೆ ಒಂದೇ 25 ಸಾವಿರ ಪ್ರಕರಣಗಳು ದಾಖಲಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸದ್ದಿಲ್ಲದೇ ಲಾಕ್ ಡೌನ್ ಗೆ ತಯಾರಿ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಳ: ಭಾರತೀಯ ಭಕ್ತರಿಗೆ ನೋ ಎಂಟ್ರಿ ಎಂದ ನಿತ್ಯಾನಂದನ ಕೈಲಾಸ
ಇದೇನು ಚುನಾಯಿತ ಸರ್ಕಾರವೋ?
ಹುಚ್ಚರ ಸಂತೆಯೋ?
ಕ್ಷಣ ಕ್ಷಣಕ್ಕೂ ಬದಲಾಗುವ ನಿರ್ಧಾರ- ಮಾರ್ಗಸೂಚಿಗಳು, ಅಘೋಷಿತ ಲಾಕ್ ಡೌನ್, ಅಮಾಯಕ ಜನತೆ ಮೇಲೆ ದೌರ್ಜನ್ಯ..ಏನಿದು @CMofKarnataka ಅವರೇ,
ಆಡಳಿತ
ನಡೆಸಲಾಗದಿದ್ದರೆ ಕುರ್ಚಿಬಿಟ್ಟು ತೊಲಗಿ, ಜನರನ್ನು ಯಾಕೆ ಗೋಳು ಹೊಯ್ಕೊಳ್ತೀರಿ?
1/3#KarnatakaLockdown— Siddaramaiah (@siddaramaiah) April 22, 2021
ಈಗ ಹಿನ್ನಲೆಯಲ್ಲಿ ಈಗ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹರಿಹಾಯ್ದಿರುವ ಸಿದ್ಧರಾಮಯ್ಯ "ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?ಕ್ಷಣ ಕ್ಷಣಕ್ಕೂ ಬದಲಾಗುವ ನಿರ್ಧಾರ- ಮಾರ್ಗಸೂಚಿಗಳು, ಅಘೋಷಿತ ಲಾಕ್ ಡೌನ್, ಅಮಾಯಕ ಜನತೆ ಮೇಲೆ ದೌರ್ಜನ್ಯ..ಏನಿದು ಮುಖ್ಯಮಂತ್ರಿಗಳೇ, ಆಡಳಿತ ನಡೆಸಲಾಗದಿದ್ದರೆ ಕುರ್ಚಿಬಿಟ್ಟು ತೊಲಗಿ, ಜನರನ್ನು ಯಾಕೆ ಗೋಳು ಹೊಯ್ಕೊಳ್ತೀರಿ? ಕೊರೊನಾ ಉಲ್ಭಣಗೊಂಡಿರುವುದು ಸರ್ಕಾರದ ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ದುರಾಡಳಿತದಿಂದ. ತಮ್ಮ ವೈಫಲ್ಯ ಮುಚ್ಚಿಹಾಕಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೊನಾ ಓಡಿಹೋಗುವುದೇ ಯಡಿಯೂರಪ್ಪ ಅವರೇ? ಲಾಕ್ ಡೌನ್, ಬಂದ್, ಕರ್ಪ್ಯೂ..... ಇನ್ನೇನೋ, ಯಾವ ನಿರ್ಧಾರ ಕೈಗೊಳ್ಳುವುದಿದ್ದರೂ ಜನರಿಗೆ ಮನವರಿಕೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವಸಿದ್ದತೆಯೊಡನೆ ಮಾಡಿ. ತಟ್ಟೆ ಬಡಿಯುವ, ಕ್ಯಾಂಡಲ್ ಹಚ್ಚುವ ಶೈಲಿಯ ಇಂತಹ ತುಘಲಕ್ ದರ್ಬಾರ್ ಪುನರಾವರ್ತನೆ ಮಾಡಬೇಡಿ ಎಂದು ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Mamata Banerjee: 'ಪ್ರಧಾನ ಮಂತ್ರಿ ಮೋದಿ ಬೆಳೆಸಿದ್ದು ಗಡ್ಡ ಮಾತ್ರ, ಸಾಧನೆ ಶೂನ್ಯ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.