Melon Fruit Benefits : 'ಕರಬೂಜ ಹಣ್ಣಿ'ನಲ್ಲಿದೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು!

ನಿಮ್ಮ ಚರ್ಮದಲ್ಲಿರುವ ಮೇಲಿನಿನ್ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ

Last Updated : Apr 26, 2021, 04:01 PM IST
  • ನರಮಂಡಲವೂ ಆರೋಗ್ಯವಾಗಿರಲು ಕರಬೂಜ
  • ಚರ್ಮಕ್ಕೆ ಪ್ರಯೋಜನಕಾರಿ ಕರಬೂಜ
  • ರಕ್ತದೊತ್ತಡವನ್ನು ನಿಯಂತ್ರಿಸಲು ಕರಬೂಜ
Melon Fruit Benefits : 'ಕರಬೂಜ ಹಣ್ಣಿ'ನಲ್ಲಿದೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು! title=

'ಕರಬೂಜ ಹಣ್ಣಿ'ನಲ್ಲಿ ಶೇ. 95 ರಷ್ಟು ನೀರು ಇದ್ದು, ಇದು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಸುವುದರ ಜೊತೆಗೆ ದೇಹದಲ್ಲಿನ ನೀರಿನ ಪ್ರಮಾಣವನ್ನು ಕಾಪಾಡಿಕೊಳ್ಳುತ್ತದೆ. ಅದರ ಪ್ರಯೋಜನಗಳನ್ನು ತಿಳಿಯಿರಿ ...

1. ಚರ್ಮಕ್ಕೆ ಪ್ರಯೋಜನಕಾರಿ ಕರಬೂಜ :

ನಿಮ್ಮ ಚರ್ಮದಲ್ಲಿರುವ ಮೇಲಿನಿನ್ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಚರ್ಮದ ಮೇಲಾಗುವ ಹಾನಿಯನ್ನು ಸಹ ಸುಧಾರಿಸುತ್ತದೆ. ಅಲ್ಲದೆ, ನಿಮಗೆ ವಯಸ್ಸಾದರೂ ನಿಮ್ಮ ಚರ್ಮ(Skin) ಸುಕ್ಕು ಗಟ್ಟದಂತೆ ತಡೆಯಲು ಕರಬೂಜ ತುಂಬಾ ಸಹಾಯ ಮಾಡುತ್ತದೆ. ಮುಖಕ್ಕೆ ಅದರ ಸಿಪ್ಪೆಯನ್ನ  ಫೇಸ್ ಪ್ಯಾಕ್ ಆಗಿ ಬಳಸಿಕೊಳ್ಳಬಹುದು.

ಇದನ್ನೂ ಓದಿ : Covid 19 Vaccine: ಮಹಿಳೆಯರು ಈ ಸಮಯದಲ್ಲಿ ಲಸಿಕೆ ಪಡೆಯಬಾರದೇ? ಇಲ್ಲಿದೆ ವೈರಲ್ ಮೆಸೇಜ್ ಹಿಂದಿನ ಸತ್ಯಾಸತ್ಯತೆ

2. ಕಣ್ಣುಗಳು ಸದೃಢವಾಗಲು ಕರಬೂಜ :

ಕರಬೂಜ (Melon Fruit)ನಿಯಮಿತವಾಗಿ ತಿನ್ನುತ್ತಿದ್ದರೆ ನಿಮ್ಮ ಕಣ್ಣುಗಳು ಯಾವಾಗಲೂ ಆರೋಗ್ಯ(Health)ವಾಗಿರುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲ, ಕಣ್ಣಿನ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಏಕೆಂದರೆ ಕರಬೂಜ ಸೋನಿಕ್ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ, ಇದು ಕಣ್ಣಿನ ಪೊರೆಗೆ ಶೇ. 40 ರಷ್ಟು ಸುರಕ್ಷತೆಯನ್ನು ನೀಡುತ್ತದೆ.

ಇದನ್ನೂ ಓದಿ : ಕರೋನಾ ಕಾಲದಲ್ಲಿ ಶುಗರ್ ಲೆವೆಲ್ ಕಾಪಾಡಲು ತಿನ್ನಿ ಈ ಸೂಪರ್ ಫುಡ್.!

3. ಈ ರೋಗಗಳನ್ನು ಸಹ ತಡೆಯುತ್ತದೆ :

ಕರಬೂಜ ಮೂತ್ರವರ್ಧಕ ಸಾಮರ್ಥ್ಯವನ್ನು ಹೊಂದಿವೆ, ಇದು ಯಾವುದೇ ಮೂತ್ರಪಿಂಡ(Kidney)ದ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಎಸ್ಜಿಮಾವನ್ನು ಕಡಿಮೆ ಮಾಡಲು ಕರಬೂಜ ಸಹ ಪರಿಣಾಮಕಾರಿಯಾಗಿದೆ. ಕರಬೂಜದಲ್ಲಿ ನಿಂಬೆ ರಸ ಬೆರೆಸಿ ತಿಂದರೆ ಸಂಧಿವಾತಗಳಿಗೆ  ಪರಿಹಾರ ಸಿಗುತ್ತದೆ.

ಇದನ್ನೂ ಓದಿ : ಜೇನುತುಪ್ಪದ ಜೊತೆ ಈ ವಿಶೇಷ ಮಸಾಲೆ ಸೇವಿಸುವುದರಿಂದ ಕೆಮ್ಮು ದೂರ, ರೋಗ ನಿರೋಧಕಶಕ್ತಿ ಹೆಚ್ಚಳ!

4. ರಕ್ತದೊತ್ತಡವನ್ನು ನಿಯಂತ್ರಿಸಲು ಕರಬೂಜ :

ಕರಬೂಜ ಒಳಗೆ ಪೊಟ್ಯಾಸಿಯಮ್ ಎಲೆಕ್ಟ್ರಾಲಿಟಿಸ್ ಬ್ಯಾಲೆನ್ಸ್ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದು ರಕ್ತದೊತ್ತಡ(Blood Pressure)ವನ್ನು ನಿಯಂತ್ರಿಸುತ್ತದೆ ಮತ್ತು ಹೃದ್ರೋಗಗಳು ಅಥವಾ ಪಾರ್ಶ್ವವಾಯು ಅನ್ನು ಕೂಡ  ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Corona Second Wave ಶ್ವಾಸಕೋಶಗಳನ್ನು ಆರೋಗ್ಯಕರವಾಗಿರಿಸುವುದು ಹೇಗೆ? ಇಲ್ಲಿದೆ ನೋಡಿ

5. ನರಮಂಡಲವೂ ಆರೋಗ್ಯವಾಗಿರಲು ಕರಬೂಜ :

ಕರಬೂಜದಲ್ಲಿರುವ ಅಂಶಗಳು ನಮ್ಮ ನರಮಂಡಲವನ್ನು ಆರೋಗ್ಯವಾಗಿಡಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ದೇಹದ ಒತ್ತಡ ಸಮಸ್ಯೆಗಳನ್ನು ನಿಯಂತ್ರಿಸಲು ಕರಬೂಜ  ಸಹ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News