MP Sumalatha : ನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಸಂಸದೆ ಸುಮಲತಾ

ಸಂಸದೆ ಸುಮಲತಾ ಅಂಬರೀಷ್​ ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು.

Last Updated : May 8, 2021, 10:54 AM IST
  • ಈ ಕೊರೋನಾ ಸಮಯದಲ್ಲಿ ಪ್ರತಿಯೊಂದಕ್ಕೂ ರಾಜಕಾರಣ ಮಾಡಿದರೆ ನನ್ನ ರಕ್ತ ಕುದಿಯುತ್ತದೆ
  • ಸಂಸದೆ ಸುಮಲತಾ ಅಂಬರೀಷ್​ ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು.
  • ನಾನು ಒಬ್ಬಳು ಸಂಸದೆಯಾಗಿ ಆಕ್ಸಿಜನ್ ಸಿಲಿಂಡರ್ ಅನ್ನು ತಂದಿದ್ದೇನೆ
MP Sumalatha : ನನ್ನ ರಕ್ತ ಕುದಿಯುತ್ತಿದೆ, ಇಂತಹ ರಾಜಕಾರಣ ಬೇಕಿಲ್ಲ: ಸಂಸದೆ ಸುಮಲತಾ title=

ಮಂಡ್ಯ : ಈ ಕೊರೋನಾ ಸಮಯದಲ್ಲಿ ಪ್ರತಿಯೊಂದಕ್ಕೂ ರಾಜಕಾರಣ ಮಾಡಿದರೆ ನನ್ನ ರಕ್ತ ಕುದಿಯುತ್ತದೆ ಎಂದ ಸಂಸದೆ ಸುಮಲತಾ ಅಂಬರೀಷ್​ ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ(KC Narayana Gowda)ರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಸುಮಲತಾ, ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಸಭೆಯ ಅರ್ಧದಲ್ಲೇ ಎದ್ದು ಹೊರನಡೆದರು. ಅಲ್ಲದೆ ಜೆಡಿಎಸ್ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಇದನ್ನೂ ಓದಿ : ಮೇ 10 ರಿಂದ 25 ರವರೆಗೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್

ಎಷ್ಟೋ ಚುನಾವಣೆಗಳನ್ನು ಗೆದ್ದು ಬಂದಿದ್ದಾರೆ. ಕೋವಿಡ್(Covid-19) ಸಮಯದಲ್ಲಿ ಸಲಹೆ ಕೊಡುವುದನ್ನು ಬಿಟ್ಟು ಕಿರುಚಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇಲ್ಲೇನು ಡ್ರಾಮ ನಡೆಯುತ್ತಿದೆಯೇ?ಎಂದು ಸುಮಲತಾ ಪ್ರಶ್ನಿಸಿದರು.

ಇದನ್ನೂ ಓದಿ : "ಸುಪ್ರೀಂ ಕೋರ್ಟ್ ತಪರಾಕಿಯಿಂದ ಪ್ರಧಾನಿಗಳು ಈಗಲಾದರೂ ಬುದ್ದಿ ಕಲಿಯಲಿ"

ರಾಜಕಾರಣ(Political) ಇಷ್ಟವಿಲ್ಲ, ಇಂತಹ ರಾಜಕಾರಣ ಬೇಕಿಲ್ಲ. ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸಲು ನನ್ನ ಕೈಲಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಿದ್ದೇನೆ. ಬೇರೆಯವರ ರೀತಿ ಸಭೆ, ಸಮಾರಂಭಗಳಿಗೆ ಹೋಗಿ ಫೋಟೋಗೆ ಫೋಸ್ ಕೊಡಲ್ಲ, ಕೆಲಸ ಮಾಡುತ್ತೇನೆ, ಕೆಲಸ ಮಾಡಲು ಮಾನವೀಯತೆ ಬೇಕು ಎಂದರು.

ಇದನ್ನೂ ಓದಿ : Remdesivir ಕದಿಯಲು ಬಂದು ಪೊಲೀಯೋ ಲಸಿಕೆ ಲಪಟಾಯಿಸಿದ ಖದೀಮರು..!

ನಾನು ಒಬ್ಬಳು ಸಂಸದೆಯಾಗಿ ಆಕ್ಸಿಜನ್ ಸಿಲಿಂಡರ್(Oxygen Cylinder) ಅನ್ನು ತಂದಿದ್ದೇನೆ. ಈ ಬಗ್ಗೆ ಅವರ ಕ್ಷೇತ್ರದ ಜನತೆ ಕೇಳಿರಬೇಕು. ಅದಕ್ಕಾಗಿ ಒಬ್ಬೊಬ್ಬರೂ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣ ಮಾಡಿಕೊಳ್ಳಲಿ, ಮುಂದೆಯೂ ಮಾಡಲಿ. ನನಗೇನು ಬೇಜಾರಿಲ್ಲ. ಕೋವಿಡ್ ಸಮಯದಲ್ಲಿ ಮಾನವೀಯತೆ ತೋರುವುದನ್ನು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ : Complete Lock Down : ಮೇ 10 ರಿಂದ 25 ರವರೆಗೆ ರಾಜ್ಯದಲ್ಲಿ ಸಂಪೂರ್ಣ 'ಲಾಕ್ ಡೌನ್'!

ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ನನಗೆ ಜನತೆ ಆಶೀರ್ವಾದ ಮಾಡಿರುವುದರಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ಕೇವಲ ಅವರ ನಾಯಕರ, ಪಕ್ಷ(Party)ದ ಬಗ್ಗೆ ಮಾತನಾಡುತ್ತಾರೆ. ಮಾತನಾಡೋರೆ ಬೇರೆ, ಕೆಲಸ ಮಾಡೋರೆ ಬೇರೆ. ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾತನಾಡಲು ಬಿಡುತ್ತಿಲ್ಲ ಎಂದು ಟೀಕಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News