ಬೆಂಗಳೂರು : ಹೆಚ್ಚಾಗಿ ಜನರು ಊಟವಾದ ಮೇಲೆ ಸೋಂಪು (fennel) ತಿನ್ನುತ್ತಾರೆ. ಬಾಯಿ ವಾಸನೆ ಹೋಗಲಿ, ಜೀರ್ಣ ಕ್ರೀಯೆ ಚೆನ್ನಾಗಿ ಆಗಲಿ ಎನ್ನುವ ಉದ್ದೇಶದಿಂದ ಸೋಂಪು ತಿನ್ನುತ್ತಾರೆ. ಆದರೆ, ನಿಮಗೆ ಗೊತ್ತಿರಲಿ. ಸೋಂಪು ತಿಂದರೆ ಸಾಕಷ್ಟು ಆರೋಗ್ಯ ಲಾಭ (Health benefits) ಇದೆ. ಕೇವಲ ಬಾಯಿ ವಾಸನೆಗೆ ಅಥವಾ ಜೀರ್ಣಕ್ರಿಯೆ ಮಾತ್ರ ಅದರ ಲಾಭ ಅಲ್ಲ.
1. ಬೊಜ್ಜು ಕರಗಿಸುತ್ತೆ ಸೋಂಪು..!
ನಿಮ್ಮಲ್ಲಿ ಬೊಜ್ಜು (Fat) ಹೆಚ್ಚಾಗುತ್ತಿದ್ದರೆ ಸೋಂಪು ತಿಂದು ನೋಡಿ. ಸಾಮಾನ್ಯವಾಗಿ ಸೋಂಪು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಬಿಡುವುದಿಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ನಿಮ್ಮ ತೂಕ ಇಳಿಸಲು (weight loss) ಕೂಡಾ ಇದು ನೆರವಾಗುತ್ತದೆ.
ಇದನ್ನೂ ಓದಿ : Ivermectin 12mg In Corona Treatment - 'Corona ಮಹಾಮಾರಿಯ ಅಂತ್ಯ ಹಾಡಲಿದೆ ಈ ಔಷಧಿ' ಎಂದ ವಿಜ್ಞಾನಿಗಳು, ಗೋವಾ ಸರ್ಕಾರದ ಅನುಮತಿ
2. ದೇಹದ ಟಾಕ್ಸಿನ್ ಹೊರಗೆ ಹಾಕುತ್ತದೆ..!
ಬೇರೆ ಬೇರೆ ಕಾರಣಕ್ಕೆ ನಮ್ಮ ದೇಹದಲ್ಲಿ ಟಾಕ್ಸಿನ್ ಅಂಶ ಉಂಟಾಗುತ್ತದೆ. ಇದು ಆರೋಗ್ಯದ (Health) ಮೇಲೂ ಪರಿಣಾಮ ಬೀರುತ್ತದೆ. ಟಾಕ್ಸಿನ್ ಅಂಶ ದೇಹದಿಂದ ಹೊರಗೆ ಹೋದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಟಾಕ್ಸಿನ್ ದೇಹದಿಂದ ಹೊರ ತೆಗೆಯಲು ಸೋಂಪು (Fennel) ಕೂಡಾ ಬೆಸ್ಟ್ ಆಹಾರ ಕ್ರಮ. ಇದು ದೇಹದಲ್ಲಿ ವಿಷಯುಕ್ತ ಕೆಮಿಕಲ್ ಆಗಿರುವ ಟಾಕ್ಸಿನ್ ನನ್ನು ಹೊರತೆಗೆಯುತ್ತದೆ.
3. ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ :
ನಮ್ಮ ದೇಹದಲ್ಲಿ ಮೆಟಬಾಲಿಕ್ ರೇಟ್ ಕಡಿಮೆ ಆದಾಗ ಬೊಜ್ಜು ಉಂಟಾಗುತ್ತದೆ. ಆದರೆ, ಸೋಂಪು ದೇಹದ ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ. ಹಾಗಾಗಿ, ದೇಹದ ತೂಕ ಕಡಿಮೆ (Weight loss) ಆಗುತ್ತದೆ.
ಇದನ್ನೂ ಓದಿ : Right Way To Drink Water - ನೀವೂ ಕೂಡ ಬಾಟಲಿ ಮೂಲಕ ನೀರನ್ನು ಕುಡಿಯುತ್ತೀರಾ? ಹಾಗಾದ್ರೆ ಈ ಲೇಖನ ಓದಲು ಮರೆಯಬೇಡಿ
4. ಅನಗತ್ಯ ಹಸಿವನ್ನು ತಡೆಯುತ್ತದೆ :
ಕೆಲವೊಮ್ಮೆ ನಮಗೆ ಸಮಯ ಅಲ್ಲದ ಸಮಯದಲ್ಲಿ ಹಸಿವಾಗಿರುತ್ತದೆ. ಹಾಗಾಗಿ ಹೊತ್ತಲ್ಲದ ಹೊತ್ತಲ್ಲಿ ನಮಗೆ ಹಸಿವಾಗುತ್ತದೆ. ಸಿಕ್ಕಾಪಟ್ಟೆ ತಿನ್ನುತ್ತೇವೆ. ಸೋಂಪು ಇದನ್ನು ತಡೆಗಟ್ಟುತ್ತದೆ. ಊಟದ ಹೊತ್ತಿಗೆ ಹಸಿವನ್ನುಂಟು ಮಾಡುತ್ತದೆ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.
ಸೊಂಪು ಸೇವನೆ ಹೇಗೆ..?
1. ಒಂದು ಚಮಚ ಸೋಂಪನ್ನು ಒಂದು ಲೀಟರ್ ನೀರಿನಲ್ಲಿ (water) ನೆನೆ ಹಾಕಿ. ಬೆಳಿಗ್ಗೆ ಎದ್ದ ಕೂಡಲೇ ಈ ನೀರನ್ನು ಕುಡಿಯಿರಿ. ಪ್ರತಿ ದಿನ ಹೀಗೆ ಮಾಡುತ್ತಾ ಬಂದರೆ, ಕೆಲವೇ ದಿನಗಳಲ್ಲಿ ದೇಹ ತೂಕ ಇಳಿಸಬಹುದು.
ಇದನ್ನೂ ಓದಿ : Benefits Milk-jaggery : ಚೆನ್ನಾಗಿ ನಿದ್ರೆ ಬರಲು ಸೇವಿಸಿ ಹಾಲು-ಬೆಲ್ಲ! ಇಲ್ಲಿದೆ ಅದರ ಪ್ರಯೋಜನಗಳು!
2. ಸೋಂಪು ನೆನೆಸಿಟ್ಟ ನೀರು ಕುಡಿಯಲು ಸಾಧ್ಯವಾಗಿಲ್ಲ ಎಂದಾದರೆ, 2 ಚಮಚ ಸೋಂಪನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ತಣ್ಣಗಾಗಲು ಬಿಡಿ. ಹೀಗೆ ತಯಾರಿಸಿಟ್ಟ ಸೋಂಪಿನ ನೀರನ್ನು ಬೆಳಗ್ಗೆ ಎದ್ದ ಕೂಡಲೇ ರಾತ್ರಿ ಮಲಗುವ ಮುನ್ನ ಕುಡಿಯುತ್ತಾ ಬಂದರೆ, ಪ್ರಯೋಜನ ತಿಳಿಯುತ್ತದೆ.
ಸೋಂಪಿನಲ್ಲಿದೆ ಅನೇಕ ಪೋಷಕ ತತ್ವ :
ಸೋಂಪಿನಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಸೋಂಪು ತಂಪು ಗುಣವನ್ನು ಹೊಂದಿರುತ್ತದೆ. ಹಾಗಾಗಿ ಬಿಸಿಲ ಬೇಗೆಗೆ (Summer) ಇದನ್ನು ಸೇವಿಸಿದರೆ, ದೇಹ ತಂಪಾಗಿಡುತ್ತದೆ. ಅಲ್ಲದೆ, ಇದರಲ್ಲಿ ವಿಟಮಿನ್ ಸಿ, ಮಿನರಲ್, ಕ್ಯಾಲ್ಶಿಯಂ, ಸೋಡಿಯಂ, ಐರನ್, ಪೋಟಾಶಿಯಂ ಕೂಡಾ ಇರುತ್ತದೆ. ಹಾಗಾಘಿ ಇದರ ನೀರನ್ನು ಸೇವಿಸುವುದು ಆರೋಗ್ಯಕ್ಕೂ ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.