South Africa: ಒಲಿಂಪಿಕ್ ಚಿನ್ನದ ಪದಕ ವಿಜೇತೆಗೆ ಶಿಕ್ಷೆ

ಕ್ಯಾಸ್ಟರ್ ಸೆಮೆನ್ಯಾ ಅವರನ್ನು ದಕ್ಷಿಣ ಆಫ್ರಿಕಾದ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 800 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು 2 ಬಾರಿ ಒಲಿಂಪಿಕ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.  

Written by - Zee Kannada News Desk | Last Updated : May 14, 2021, 01:40 PM IST
  • ದಕ್ಷಿಣ ಆಫ್ರಿಕಾದ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಕ್ಯಾಸ್ಟರ್ ಸೆಮೆನ್ಯಾ
  • ಅತಿ ವೇಗದ ಡ್ರೈವಿಂಗ್ ಹಿನ್ನಲೆಯಲ್ಲಿ ಮೇ 6 ರಂದು ಬಂಧನಕ್ಕೊಳಗಾಗಿದ್ದ ಕ್ಯಾಸ್ಟರ್ ಸೆಮೆನ್ಯಾ
  • ಕ್ಯಾಸ್ಟರ್ ಸೆಮೆನ್ಯಾಗೆ ಸಮುದಾಯ ಸೇವೆ ಮಾಡುವ ಶಿಕ್ಷೆ
South Africa: ಒಲಿಂಪಿಕ್ ಚಿನ್ನದ ಪದಕ ವಿಜೇತೆಗೆ ಶಿಕ್ಷೆ title=
Image courtesy: Reuters

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿರುವ ಕ್ಯಾಸ್ಟರ್ ಸೆಮೆನ್ಯಾ (Caster Semenya)ಅವರನ್ನು ಅತಿ ವೇಗದ ಡ್ರೈವಿಂಗ್ ಹಿನ್ನಲೆಯಲ್ಲಿ ಬಂದಿಸಲಾಗಿದ್ದು ಅವರಿಗೆ 50 ಗಂಟೆಗಳ ಸಮುದಾಯ ಸೇವೆಯ ಶಿಕ್ಷೆಗೆ ಗುರಿಯಾಗಿದ್ದಾರೆ.

ಮೇ 6 ರಂದು ಬಂಧನ:
ಒಲಿಂಪಿಕ್ (Olympic) ಚಿನ್ನದ ಪದಕ ವಿಜೇತೆ ಕ್ಯಾಸ್ಟರ್ ಸೆಮೆನ್ಯಾ (Caster Semenya) ಅವರನ್ನು ಅತಿ ವೇಗದ ಡ್ರೈವಿಂಗ್ ಹಿನ್ನಲೆಯಲ್ಲಿ  ಮೇ 6 ರಂದು ಬಂಧಿಸಲಾಯಿತು ಮತ್ತು $ 35 ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ವೇಳೆ ಅವರಿಗೆ 50 ಗಂಟೆಗಳ ಸಮುದಾಯ ಸೇವೆಯ ಶಿಕ್ಷೆ ವಿಧಿಸಲಾಗಿದೆ. ಆಗಸ್ಟ್‌ನಲ್ಲಿ ಎರಡನೇ ವಿಚಾರಣೆಗೆ ಕ್ಯಾಸ್ಟರ್ ಸೆಮೆನ್ಯಾ ನ್ಯಾಯಾಲಯಕ್ಕೆ ಹಾಜರಾಗಲಿದ್ದು, ನಂತರ ಅವರು ಸಮುದಾಯ ಸೇವೆಯನ್ನು ಪೂರ್ಣಗೊಳಿಸಿದ್ದಾರೆಯೇ ಅಥವಾ  ಇಲ್ಲವೋ ಎಂದು ಪ್ರಾಸಿಕ್ಯೂಷನ್ ಅಧಿಕಾರಿ ತಿಳಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ- Rishabh Pant ಟೀಂ ಇಂಡಿಯಾ ಕ್ಯಾಪ್ಟನ್!

ಒಲಿಂಪಿಕ್ಸ್‌ನಲ್ಲಿ 2 ಬಾರಿ ಚಿನ್ನ ಗೆದ್ದಿರುವ ಸೆಮೆನ್ಯಾ:
ಕ್ಯಾಸ್ಟರ್ ಸೆಮೆನ್ಯಾ ಅವರನ್ನು ದಕ್ಷಿಣ ಆಫ್ರಿಕಾದ (South Africa) ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 800 ಮೀಟರ್ ಓಟದ ಸ್ಪರ್ಧೆಯಲ್ಲಿ ಲಂಡನ್ ಒಲಿಂಪಿಕ್ಸ್ 2012 ಮತ್ತು ರಿಯೊ ಡಿ ಜನೈರೊ ಒಲಿಂಪಿಕ್ಸ್ 2016 ರಲ್ಲಿ ಇವರು ಚಿನ್ನದ ಪದಕ ಗೆದ್ದಿದ್ದಾರೆ.

ಇದನ್ನೂ ಓದಿ-  ICC Test Team rankings: ಟೆಸ್ಟ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಭಾರತ ತಂಡ

ಈ ಕಾರಣದಿಂದಾಗಿ ನಿಷೇಧ ಹೇರಲಾಯಿತು:
ಟೆಸ್ಟೋಸ್ಟೆರಾನ್ ಹಾರ್ಮೋನುಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಸೆಮೆನ್ಯಾ ಒಲಿಂಪಿಕ್ಸ್‌ನಲ್ಲಿ ತನ್ನ ನೆಚ್ಚಿನ 800 ಮೀಟರ್‌ ಓಟದಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಯಿತು. ಅವರ ದೇಹದಲ್ಲಿ ಹೆಚ್ಚಿನ ಪ್ರಮಾಣದ ಹಾರ್ಮೋನುಗಳಿವೆ ಎಂದು ಉಲ್ಲೇಖಿಸಿ ಸೆಮೆನ್ಯಾ ಈ ಮಹಿಳಾ ವಿಭಾಗದಲ್ಲಿ ಓಡುವುದನ್ನು ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್ (ಐಎಎ) ನಿಷೇಧಿಸಿತ್ತು. ಇದರ ವಿರುದ್ಧ ಸೆಮೆನ್ಯಾ ಕ್ರೀಡಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News