ರಾಷ್ಟ್ರ ರಾಜಧಾನಿಯಲ್ಲಿ ಮೇ 24ರವರೆಗೆ ಲಾಕ್ ಡೌನ್ ವಿಸ್ತರಣೆ

ದೆಹಲಿಯಲ್ಲಿ ಕರೋನಾ  ಪ್ರಕರಣಗಳು ಕಡಿಮೆಯಾಗುತ್ತಿದೆ. ಕರೋನಾ ಸೋಂಕಿತರು ಕೂಡಾ, ಶೀಘ್ರ ಗುಣಮುಖರಾಗುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.  ಇನ್ನೂ ಉತ್ತಮ ಫಲಿತಾಂಶಕ್ಕಾಗಿ, ಲಾಕ್ ಡೌನ್  ಅನ್ನು ಒಂದು ವಾರಗಳವರೆಗೆ ವಿಸ್ತರಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

Written by - Ranjitha R K | Last Updated : May 16, 2021, 01:49 PM IST
  • ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ
  • ಮುಂದಿನ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಜಾರಿ
  • ಒಬ್ಬರಿಗೊಬ್ಬರು ಸಹಾಯ ಮಾಡುವಂತೆ ಕೇಜ್ರಿವಾಲ್ ಮನವಿ
ರಾಷ್ಟ್ರ ರಾಜಧಾನಿಯಲ್ಲಿ ಮೇ 24ರವರೆಗೆ ಲಾಕ್ ಡೌನ್ ವಿಸ್ತರಣೆ  title=
ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ (file photo)

ನವದೆಹಲಿ : ಕರೋನಾ ವೈರಸ್ (Coronavirus) ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶದ ರಾಜಧಾನಿಯಾದ ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ (Lockdown) ವಿಸ್ತರಿಸಲಾಗಿದೆ. ದೆಹಲಿಯಲ್ಲಿ ಮೇ 24 ರವರೆಗೆ ಲಾಕ್ ಡೌನ್ ಮುಂದುವರೆಸಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Aravind Kejriwal) ಆದೇಶ ಹೊರಡಿಸಿದ್ದಾರೆ.  ಮುಂದಿನ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. 

ದೆಹಲಿಯಲ್ಲಿ ಕರೋನಾ (COVID-19) ಪ್ರಕರಣಗಳು ಕಡಿಮೆಯಾಗುತ್ತಿದೆ. ಕರೋನಾ ಸೋಂಕಿತರು ಕೂಡಾ, ಶೀಘ್ರ ಗುಣಮುಖರಾಗುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ (Aravind Kejriwal) ಹೇಳಿದ್ದಾರೆ.  ಇನ್ನೂ ಉತ್ತಮ ಫಲಿತಾಂಶಕ್ಕಾಗಿ, ಲಾಕ್ ಡೌನ್ (Lockown) ಅನ್ನು ಒಂದು ವಾರಗಳವರೆಗೆ ವಿಸ್ತರಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. 

 

ಇದನ್ನೂ ಓದಿ : Rajeev Satav : ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಂಸದ ರಾಜೀವ್ ಸತಾವ್ ನಿಧನ..!

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕರೋನಾದಿಂದ (Coronavirus) ದೇಶ ಕಂಗಾಲಾಗಿದೆ. ಜನರು ಬಹಳ ದುಃಖಿತರಾಗಿದ್ದಾರೆ. ಇದು ಒಬ್ಬರಿಗೊಬ್ಬರು,  ಬೆರಳು ತೋರಿಸಿ ಮಾತನಾಡುವ ಸಮಯವಲ್ಲ, ಒಬ್ಬರನ್ನೊಬ್ಬರು ಬೆಂಬಲಿಸುವ ಸಮಯ ಎಂದು ಹೇಳಿದ್ದಾರೆ. ಉತ್ತಮ ಮನೋಭಾವದಿಂದ ನಿಸ್ವಾರ್ಥವಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಈ ರೀತಿ ನಡೆದುಕೊಳ್ಳುವುದು ನಿಜವಾದ ದೇಶಭಕ್ತಿ ಮತ್ತು ನಿಜವಾದ ಧರ್ಮ ಎಂದು ಅವರು ಹೇಳಿದ್ದಾರೆ.  

 

ಮೊದಲು ಏಪ್ರಿಲ್ 19 ರಂದು ದೆಹಲಿಯಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿತ್ತು. ಈಗ ನಾಲ್ಕನೇ ಬಾರಿ, ಲಾಕ್ ಡೌನ್ ವಿಸ್ತರಿಸಲಾಗಿದೆ. ದೆಹಲಿಯಲ್ಲಿ (Delhi) ಇದೀಗ ಕರೋನಾ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ, ಈ ಹೊತ್ತಿನಲ್ಲಿ ಸ್ವಲ್ಪ ರೀತಿ ನೀತಿಗಳನ್ನು ಸಡಿಲಗೊಳಿಸಿದರೂ, ಮತ್ತೆ ಪರಿಸ್ಥಿತಿ ಬಿಗಡಾಯಿಸುವ ಭಯ ಕಾಡಲಿದೆ ಅರವಿಂದ ಕೇಜ್ರಿವಾಲ್ (Aravind Kejriwal) ತಿಳಿಸಿದ್ದಾರೆ.  

ಇದನ್ನೂ ಓದಿ : ಆಧಾರ್ ಕಾರ್ಡ್ ಇಲ್ಲ ಅಂದ ಮಾತ್ರಕ್ಕೆ ಕರೋನಾ ಲಸಿಕೆ ನಿರಾಕರಿಸಬಹುದೇ.?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News