Chandra Grahan 2021 : ಬುದ್ದ ಪೂರ್ಣಿಮದ ದಿನವೇ ವರ್ಷದ ಮೊದಲ ಚಂದ್ರಗ್ರಹಣ

ಈ ಚಂದ್ರ ಗ್ರಹಣವು ಜಪಾನ್, ಸಿಂಗಾಪುರ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಬರ್ಮಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಫಿಲಿಪೈನ್ಸ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ.

Written by - Ranjitha R K | Last Updated : May 18, 2021, 01:15 PM IST
  • ಮೇ 26ರಂದು ಸಂಭವಿಸಲಿದೆ ವರ್ಷದ ಮೊದಲ ಚಂದ್ರಗ್ರಹಣ
  • ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ
  • ಗೋಚರಿಸದ ಕಾರಣ ಧಾರ್ಮಿಕ ಮಹತ್ವವಿರುವುದಿಲ್ಲ
Chandra Grahan 2021 : ಬುದ್ದ ಪೂರ್ಣಿಮದ ದಿನವೇ ವರ್ಷದ ಮೊದಲ ಚಂದ್ರಗ್ರಹಣ title=
ಮೇ 26ರಂದು ಸಂಭವಿಸಲಿದೆ ವರ್ಷದ ಮೊದಲ ಚಂದ್ರಗ್ರಹಣ (file photo)

ನವದೆಹಲಿ : Chandra Grahan 2021 : 2021 ರ ಮೊದಲ ಚಂದ್ರಗ್ರಹಣ (Lunar eclipse) ಇದೇ ತಿಂಗಳಲ್ಲಿ ನಡೆಯಲಿದೆ.  ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು ಅಂದರೆ  ಬುದ್ಧ ಪೂರ್ಣಿಮಾ ದಿನದಂದು ವರ್ಷದ ಮೊದಲ ಚಂದ್ರಗ್ರಹಣ (Chandra grahan) ನಡೆಯಲಿದೆ. ಅಂದರೆ ಈ ಬಾರಿ ಮೇ 26 ರಂದು ಚಂದ್ರಗ್ರಹಣ ಘಟಿಸಲಿದೆ. 

ಈ ಚಂದ್ರ ಗ್ರಹಣವು ಜಪಾನ್, ಸಿಂಗಾಪುರ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಬರ್ಮಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಫಿಲಿಪೈನ್ಸ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ. ಭಾರತದಲ್ಲಿ ಈ ಚಂದ್ರಗ್ರಹಣ (Chandra grahan) ಗೋಚರಿಸುವುದಿಲ್ಲ. ಹಾಗಾಗಿ ಈ ಚಂದ್ರಗ್ರಹಣದ ಸೂತಕ ಇರುವುದಿಲ್ಲ. 

ಇದನ್ನೂ ಓದಿ : ನಿಮ್ಮ ಕೈಯಲ್ಲೂ ಈ ರೇಖೆಗಳಿದ್ದರೆ ಅದೃಷ್ಟವೂ ಅದೃಷ್ಟ..!

ಇದೊಂದು ಉಪಛಾಯಾ ಗ್ರಹಣ :
ಈ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ,.  ಗೋಚರವಾಗದ ಕಾರಣ ಇದಕ್ಕೆ  ಧಾರ್ಮಿಕ ಮಹತ್ವವಿರುವುದಿಲ್ಲ. ಉಪಛಾಯಾ ಗ್ರಹಣವನ್ನು (Upachaya grahana) ಬರಿಗಣ್ಣಿನಲ್ಲಿ ವೀಕ್ಷಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಗ್ರಹಣ (Grahana) ಗೋಚರವಾಗದ ಕಾರಣ ಇದರಲ್ಲಿ ಶುಭ, ಅಶುಭ ಫಲಗಳೂ ಇರುವುದಿಲ್ಲ. ಬರಿಗಣ್ಣಿಗೂ ಗೋಚರಿಸುವ ಗ್ರಹಣಕ್ಕೆ ಧಾರ್ಮಿಕವಾಗಿ ಬಹಳಷ್ಟು ಮಹತ್ವವಿರುತ್ತದೆ.  

ಜ್ಯೋತಿಷ್ಯದಲ್ಲಿ ಗ್ರಹಣ :
ಜ್ಯೋತಿಷ್ಯ (Astrology)  ಲೆಕ್ಕಾಚಾರಗಳ ಪ್ರಕಾರ, ಗ್ರಹಣ ಗೋಚರಿಸುತ್ತದೆಯೋ ಇಲ್ಲವೋ, ಅದು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಬುದ್ಧ ಪೂರ್ಣಿಮದಂದು ನಡೆಯಲಿರುವ ಈ ಚಂದ್ರಗ್ರಹಣವು ವೃಶ್ಚಿಕ ರಾಶಿ ಮತ್ತು ಅನುರಾಧಾ ನಕ್ಷತ್ರದಲ್ಲಿ ನಡೆಯಲಿದೆ.

ಇದನ್ನೂ ಓದಿ :Financial Problem Solution : ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಯೇ? ಹಾಗಿದ್ರೆ ಇಲ್ಲಿದೆ ಪರಿಹಾರ..!

ಚಂದ್ರ ಗ್ರಹಣದ ಸಮಯ :
ಗ್ರಹಣ ಆರಂಭ  - ಮೇ 26, ಬುಧವಾರ ಮಧ್ಯಾಹ್ನ 3: 15 ಕ್ಕೆ
ಮಧ್ಯಕಾಲ ಗ್ರಹಣ - ಸಂಜೆ 4:49
ಗ್ರಹಣ ಅಂತ್ಯ  - ಸಂಜೆ 6:23

ಈ ಗ್ರಹಣದ ನಂತರ, ವರ್ಷದ ಎರಡನೇ ಚಂದ್ರಗ್ರಹಣವು 2021 ರ ನವೆಂಬರ್ 19 ರಂದು ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News