Post Office Savings Scheme: ಪೋಸ್ಟ್ ಆಫೀಸ್‌ನ ಅತ್ಯಂತ ಲಾಭದಾಯಕ ಯೋಜನೆ, ಕೇವಲ 5 ವರ್ಷ ಹೂಡಿಕೆ ಮಾಡಿ ಮೇಲೆ 14 ಲಕ್ಷ ರೂ. ಗಳಿಸಿ

Post Office Senior Citizen Savings Scheme (SCSS): ಅಂಚೆ ಕಚೇರಿ ವಿಶೇಷ ಯೋಜನೆಗಳನ್ನು ನಡೆಸುತ್ತದೆ. ಇದು ಎಲ್ಲಾ ವಯಸ್ಸಿನ ಜನರಿಗೆ ಯೋಜನೆಗಳನ್ನು ಹೊಂದಿದೆ.

Written by - Yashaswini V | Last Updated : May 26, 2021, 11:30 AM IST
  • ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ, ಹೂಡಿಕೆದಾರರು ಶೇಕಡಾ 7.4 ದರದಲ್ಲಿ ಬಡ್ಡಿ ಪಡೆಯುತ್ತಾರೆ
  • ಇದರಲ್ಲಿ ಹೂಡಿಕೆ ಮಾಡುವುದರೊಂದಿಗೆ ಕೇವಲ 5 ವರ್ಷಗಳಲ್ಲಿ ಅಧಿಕ ಆದಾಯ ಗಳಿಸಬಹುದು
  • ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು? ಇದರಿಂದ ಏನೆಲ್ಲಾ ಲಾಭ ದೊರೆಯಲಿದೆ ಎಂದು ತಿಳಿಯಿರಿ
Post Office Savings Scheme: ಪೋಸ್ಟ್ ಆಫೀಸ್‌ನ ಅತ್ಯಂತ ಲಾಭದಾಯಕ ಯೋಜನೆ, ಕೇವಲ 5 ವರ್ಷ ಹೂಡಿಕೆ ಮಾಡಿ ಮೇಲೆ 14 ಲಕ್ಷ ರೂ. ಗಳಿಸಿ title=
Post Office Senior Citizen Savings Scheme (SCSS)

ನವದೆಹಲಿ:   Post Office Senior Citizen Savings Scheme (SCSS)- ಅಂಚೆ ಕಚೇರಿಗಳು ಹಲವು ವಿಶೇಷ ಯೋಜನೆಗಳನ್ನು ನಡೆಸುತ್ತವೆ. ಇದು ಎಲ್ಲಾ ವಯೋಮಾನದವರಿಗೂ ಹಲವು ಲಾಭದಾಯಕ ಯೋಜನೆಗಳನ್ನು ನೀಡುತ್ತದೆ. ನೀವು ಸಹ ಈ ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ಉತ್ತಮ ಆದಾಯ ನೀಡುವ ಯೋಜನೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಹೆಚ್ಚಿನ ಲಾಭ ತಂದುಕೊಡುವ ಯೋಜನೆ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ, ಹೂಡಿಕೆದಾರರು ಶೇಕಡಾ 7.4 ದರದಲ್ಲಿ ಬಡ್ಡಿ ಪಡೆಯುತ್ತಾರೆ. ಇದರಲ್ಲಿ ಹೂಡಿಕೆ ಮಾಡುವುದರೊಂದಿಗೆ ಕೇವಲ 5 ವರ್ಷಗಳಲ್ಲಿ ನೀವು 14 ಲಕ್ಷ ರೂಪಾಯಿಗಳನ್ನು ಹೇಗೆ ಪಡೆಯಬಹುದು ಎಂದು ತಿಳಿಯಲು ಮುಂದೆ ಓದಿ.

ಯಾರು ಖಾತೆ ತೆರೆಯಬಹುದು?
ಹಿರಿಯ ನಾಗರಿಕರ ಉಳಿತಾಯ ಯೋಜನೆ-ಎಸ್‌ಸಿಎಸ್‌ಎಸ್ (Senior Citizens Savings Scheme-SCSS) ಅಡಿಯಲ್ಲಿ ಖಾತೆ ತೆರೆಯಲು 60 ವರ್ಷ ತುಂಬಿರಬೇಕು. ಈ ಯೋಜನೆಯಡಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮಾತ್ರ ಖಾತೆ ತೆರೆಯಬಹುದು. ಇದಲ್ಲದೆ, ವಿಆರ್ಎಸ್ (ಸ್ವಯಂಪ್ರೇರಿತ ನಿವೃತ್ತಿ ಯೋಜನೆ) ತೆಗೆದುಕೊಂಡ ಜನರು ಈ ಯೋಜನೆಯಡಿ ಖಾತೆಯನ್ನು ತೆರೆಯಬಹುದು.

ನೀವು 10 ಲಕ್ಷ ಹೂಡಿಕೆ ಮಾಡಿದರೆ, ನಿಮಗೆ 14 ಲಕ್ಷಕ್ಕಿಂತ ಹೆಚ್ಚು ಸಿಗುತ್ತದೆ:
ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಒಟ್ಟು 10 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ, ಮುಕ್ತಾಯದ ಸಮಯದಲ್ಲಿ ಹೂಡಿಕೆದಾರರಿಗೆ 14 ಲಕ್ಷ ರೂ.ಗಳಿಗಿಂತ ಹೆಚ್ಚು ಅಂದರೆ ಒಟ್ಟು 14,28,964 ರೂ. ಪಡೆಯುತ್ತಾರೆ. ವಾರ್ಷಿಕ 7.4% ಬಡ್ಡಿದರದ ಪ್ರಕಾರ ( ಸಂಯುಕ್ತ) ಇಲ್ಲಿ ನೀವು ಬಡ್ಡಿಯಾಗಿ 4,28,964 ರೂ. ಪಡೆಯುತ್ತೀರಿ.

ಇದನ್ನೂ ಓದಿ- Bank Alert! ಮೇ 31ರ ಮೊದಲು ನಿಮ್ಮ ಬ್ಯಾಂಕ್ ಖಾತೆಯಿಂದ ರೂ.12 ಕಡಿತವಾಗಿ, 2 ಲಕ್ಷ ರೂ.ಗಳ ಲಾಭ ನಿಮ್ಮದಾಗಲಿದೆ

ಎಷ್ಟು ಹಣದಲ್ಲಿ ಖಾತೆ ತೆರೆಯಬಹುದು?
ಈ ಯೋಜನೆಯಲ್ಲಿ ಖಾತೆ ತೆರೆಯಲು ಕನಿಷ್ಠ ಮೊತ್ತ 1000 ರೂಪಾಯಿಗಳು ಬೇಕಾಗುತ್ತದೆ. ಇದಲ್ಲದೆ, ನೀವು ಈ ಖಾತೆಯಲ್ಲಿ 15 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲ. ಇದಲ್ಲದೆ, ನಿಮ್ಮ ಖಾತೆ ತೆರೆಯುವ ಮೊತ್ತವು ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ನೀವು ಹಣವನ್ನು ಪಾವತಿಸುವ ಮೂಲಕ ಖಾತೆಯನ್ನು ತೆರೆಯಬಹುದು. ಅದೇ ಸಮಯದಲ್ಲಿ, ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ಹೂಡಿಕೆ ಮಾಡಲು ನೀವು ಚೆಕ್ ಮೂಲಕ ಹಣ ಠೇವಣಿ ಇಡಬೇಕಾಗುತ್ತದೆ.

ಮುಕ್ತಾಯದ ಅವಧಿ ಎಷ್ಟು?
ಎಸ್‌ಸಿಎಸ್‌ಎಸ್‌ನ ಮುಕ್ತಾಯ ಅವಧಿ 5 ವರ್ಷಗಳು, ಆದರೆ ಹೂಡಿಕೆದಾರರು ಬಯಸಿದರೆ ಈ ಸಮಯದ ಮಿತಿಯನ್ನು ಸಹ ವಿಸ್ತರಿಸಬಹುದು. ಇಂಡಿಯಾ ಪೋಸ್ಟ್ (India Post) ವೆಬ್‌ಸೈಟ್ ಪ್ರಕಾರ, ನೀವು ಈ ಯೋಜನೆಯನ್ನು ಮುಕ್ತಾಯದ ಅವಧಿಯ ನಂತರ 3 ವರ್ಷಗಳವರೆಗೆ ವಿಸ್ತರಿಸಬಹುದು. ಇದನ್ನು ಹೆಚ್ಚಿಸಲು, ನೀವು ಅಂಚೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ- Bank Holidays: ಜೂನ್‌ನಲ್ಲಿ ಎಷ್ಟು ದಿನ ರಜೆ ಇರಲಿದೆ ಬ್ಯಾಂಕ್, ಇಲ್ಲಿದೆ ಫುಲ್ ಲಿಸ್ಟ್

ತೆರಿಗೆಯಿಂದ ವಿನಾಯಿತಿ:
ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಬಡ್ಡಿ ಮೊತ್ತವು ಎಸ್‌ಸಿಎಸ್‌ಎಸ್ ಅಡಿಯಲ್ಲಿ ವಾರ್ಷಿಕವಾಗಿ 10,000 ರೂ.ಗಳನ್ನು ಮೀರಿದರೆ, ನಿಮ್ಮ ಟಿಡಿಎಸ್ ಕಡಿತಗೊಳ್ಳುತ್ತದೆ. ಆದರೆ, ಈ ಯೋಜನೆಯಲ್ಲಿ ಹೂಡಿಕೆಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ.

ಜಂಟಿ ಖಾತೆಯನ್ನು ತೆರೆಯಬಹುದು:
ಎಸ್‌ಸಿಎಸ್‌ಎಸ್ ಅಡಿಯಲ್ಲಿ, ಠೇವಣಿದಾರನು ವೈಯಕ್ತಿಕ ಅಥವಾ ಅವನ ಹೆಂಡತಿ / ಗಂಡನೊಂದಿಗೆ ಜಂಟಿಯಾಗಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಇರಿಸಿಕೊಳ್ಳಬಹುದು. ಆದರೆ ಎಲ್ಲರೊಂದಿಗೆ, ಗರಿಷ್ಠ ಹೂಡಿಕೆಯ 15 ಲಕ್ಷಕ್ಕಿಂತ ಹೆಚ್ಚಿರಬಾರದು. ಖಾತೆ ತೆರೆಯುವ ಮತ್ತು ಮುಚ್ಚುವ ಸಮಯದಲ್ಲಿ ನಾಮಿನಿ ಸೌಲಭ್ಯ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News