ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇಬ್ಬರೂ ಜವಾಬ್ದಾರಿಯುತ ನಾಯಕರು ಎಂದು ಪ್ರತಿಪಾದಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಬ್ಬರೂ ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ಹೆಚ್ಚುವರಿ ಪ್ರಾದೇಶಿಕ ಶಕ್ತಿಯ ಹಸ್ತಕ್ಷೇಪವಿಲ್ಲದಿರುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ- ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟಿನ್ ಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದೇನು?
ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದ ನಾಲ್ಕು ರಾಷ್ಟ್ರಗಳ ಗುಂಪು ಕ್ವಾಡ್ ಅನ್ನು ರಷ್ಯಾ ಸಾರ್ವಜನಿಕವಾಗಿ ಟೀಕಿಸುವುದರೊಂದಿಗೆ, ಪುಟಿನ್ ಅವರು ಯಾವುದೇ ರಾಷ್ಟ್ರಗಳು ಹೇಗೆ ಉಪಕ್ರಮದಲ್ಲಿ ಭಾಗವಹಿಸಬೇಕು ಮತ್ತು ಅವರು ಎಷ್ಟರ ಮಟ್ಟಿಗೆ ಭಾಗವಹಿಸಬೇಕು ಎಂಬುದನ್ನು ಮಾಸ್ಕೋ ನಿರ್ಣಯಿಸಲು ಹೋಗುವುದಿಲ್ಲ. ಇತರ ದೇಶಗಳ ಜೊತೆಗೆ ಸಂಬಂಧ ಬೆಳೆಸಲಿ ಆದರೆ ಯಾವುದೇ ಸಹಭಾಗಿತ್ವವು ಇನ್ನೊಬ್ಬರನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಪುಟಿನ್ (Vladimir Putin) ಹೇಳಿದರು.
ರಷ್ಯಾದ ಅಧ್ಯಕ್ಷರ ಹೇಳಿಕೆಗಳು, ಕ್ವಾಡ್ ಬಗ್ಗೆ ಮಾಸ್ಕೋದ ದೃಷ್ಟಿಕೋನ ಮತ್ತು ಗುಂಪಿನಲ್ಲಿ ಭಾರತದ ಭಾಗವಹಿಸುವಿಕೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಬಂದಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಬೀಜಿಂಗ್ ಪ್ರಭಾವವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಬಣ ಹೊಂದಿದೆ ಎನ್ನಲಾಗಿದೆ.ಇದೆ ವೇಳೆ ಭಾರತದೊಂದಿಗೆ ರಷ್ಯಾದ ಪಾಲುದಾರಿಕೆ ಮತ್ತು ಮಾಸ್ಕೋ ಮತ್ತು ಬೀಜಿಂಗ್ ನಡುವಿನ ಸಂಬಂಧಗಳಲ್ಲಿ ಯಾವುದೇ ವಿರೋಧಾಭಾಸಗಳು ಇಲ್ಲ ಎಂದು ಅವರು ಪ್ರತಿಪಾದಿಸಿದರು.
ಇದನ್ನು ಓದಿ- ರಷ್ಯಾ ಅಧ್ಯಕ್ಷ ಪುಟಿನ್ ನಡೆ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಮುನಿಸು
"ಹೌದು, ಭಾರತ ಚೀನಾ ಸಂಬಂಧಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿವೆ ಎಂದು ನನಗೆ ತಿಳಿದಿದೆ ಆದರೆ ನೆರೆಯ ರಾಷ್ಟ್ರಗಳ ನಡುವೆ ಯಾವಾಗಲೂ ಬಹಳಷ್ಟು ಸಮಸ್ಯೆಗಳಿವೆ, ಆದರೆ ಭಾರತದ ಪ್ರಧಾನಿ ಮತ್ತು ಚೀನಾ ಅಧ್ಯಕ್ಷರ ಮನೋಭಾವ ನನಗೆ ತಿಳಿದಿದೆ. ಇವರು ಬಹಳ ಜವಾಬ್ದಾರಿಯುತ ವ್ಯಕ್ತಿಗಳು ಮತ್ತು ಅವರು ಒಬ್ಬರಿಗೊಬ್ಬರು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಾರೆ ಮತ್ತು ಅವರು ಎದುರಿಸಬಹುದಾದ ಯಾವುದೇ ಸಮಸ್ಯೆಗೆ ಅವರು ಯಾವಾಗಲೂ ಪರಿಹಾರವನ್ನು ತಲುಪುತ್ತಾರೆ ಎಂದು ನಾನು ನಂಬುತ್ತೇನೆ.ಆದರೆ ಬೇರೆ ಯಾವುದೇ ಪ್ರಾದೇಶಿಕ ಶಕ್ತಿಗಳು ಅದರಲ್ಲಿ ಹಸ್ತಕ್ಷೇಪ ಮಾಡದಿರುವುದು ಬಹಳ ಮುಖ್ಯ" ಎಂದು ಪುಟಿನ್ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ