Contractual Employees: ಈ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಭಾರಿ ಉಡುಗೊರೆ

Contractual Employees - ಕೊರೊನಾ ವೈರಸ್ ನ ಎರಡನೇ ಅಲೆಗೆ ತತ್ತರಿಸಿಹೋಗಿರುವ ಮತ್ತು ಕೇಂದ್ರ ಸರ್ಕರಾದ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಗುತ್ತಿಗೆ ಆಧಾರದ ಕೆಲಸ ಮಾಡುತ್ತಿರುವ ನೌಕರರಿಗೆ ಕೇಂದ್ರ ಸರ್ಕಾರ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.

Written by - Nitin Tabib | Last Updated : Jun 9, 2021, 06:16 PM IST
  • ಕೇಂದ್ರ ಸರ್ಕಾರದ ಗುತ್ತಿಗೆ ನೌಕರರಿಗೊಂದು ಸಂತಸದ ಸುದ್ದಿ.
  • ಲಾಕ್ ಡೌನ್ ನಲ್ಲಿ ಮನೆಯಲ್ಲಿರುವ ಗುತ್ತಿಗೆ ನೌಕರರಿಗೆ ಸಂಪೂರ್ಣ ವೇತನ.
  • ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನಗಳನ್ನು ರವಾನಿಸಿದ ಕೇಂದ್ರ ಸರ್ಕಾರ.
Contractual Employees: ಈ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಭಾರಿ ಉಡುಗೊರೆ title=
Contractual Employees (File Photo)

ನವದೆಹಲಿ: Contractual Employees - ಕರೋನಾದ ಈ ಬಿಕ್ಕಟ್ಟಿನ (Corona Crisis)ಪರಿಸ್ಥಿತಿಯಲ್ಲಿ  ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೋದನ್ನು ತೆಗೆದುಕೊಂಡಿದೆ. ಕರೋನಾದ ಎರಡನೇ ಅಲೆಯಿಂದ ಪ್ರಭಾವಿತರಾದ ಭಾರತ ಸರ್ಕಾರದ (Central Government) ವಿವಿಧ ಸಚಿವಾಲಯಗಳಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ (Contractual Employees) ಸರ್ಕಾರ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. 2021 ರ ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಅವರ ಸಂಪೂರ್ಣ ವೇತನವನ್ನು (Central Government Salary) ನೀಡಲು ಸರ್ಕಾರ ನಿರ್ಧರಿಸಿದೆ. ಲಾಕ್ ಡೌನ್ (Lockdown Period) ಘೋಷಣೆಯಾದ ಹಿನ್ನೆಲೆ, ಗುತ್ತಿಗೆ ನೌಕರರು ಮನೆಗಳಲ್ಲಿ ಇರಬೇಕಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನ ಜಾರಿ
ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಕರೋನಾದ ಎರಡನೇ ಅಲೆಯ (Coronavirus Second Wave) ಸಮಯದಲ್ಲಿ (Lockdown) ಮನೆಗಳಲ್ಲಿರುವ ಅಂತಹ ಎಲ್ಲ ಗುತ್ತಿಗೆ ನೌಕರರನ್ನು 'ಕರ್ತವ್ಯದಲ್ಲಿ' ಎಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸಚಿವಾಲಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಇದನ್ನೂ ಓದಿ- Corona Pandemic ಕುರಿತು ಚೀನಾಗೆ ಮೊದಲೇ ಗೊತ್ತಿತ್ತು! ಭಾರತೀಯ ವೈರಾಲಾಜಿಸ್ಟ್ ಗಂಭೀರ ಹೇಳಿಕೆ ಇದು

CSS ಅಡಿ ಹೊಸ ಅಧಿಕಾರಿಗಳು ಬರಲಿದ್ದಾರೆ
ಅಧಿಕಾರಿಗಳ ಕೊರತೆಯನ್ನು ಉಲ್ಲೇಖಿಸಿ ಕೇಂದ್ರವು ಮಂಗಳವಾರ ರಾಜ್ಯ ಸರ್ಕಾರಗಳಿಗೆ ಪತ್ರವೊಂದನ್ನು ಕೂಡ ರವಾನಿಸಿದೆ. ಡೆಪ್ಯೂಟೆಶನ್ ಆಧಾರದ (Deputation Basis) ಮೇಲೆ  ಉಪ ಕಾರ್ಯದರ್ಶಿ, ನಿರ್ದೇಶಕ ಮತ್ತು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಹೆಚ್ಚಿನ ಅಧಿಕಾರಿಗಳನ್ನು ಶಿಫಾರಸು ಮಾಡಲು ಈ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಬಡ್ತಿ ಪಡೆಯಲಿರುವ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡದಿರಲು ಸೂಚಿಸಲಾಗಿದೆ. ಏಕೆಂದರೆ ಇಂತಹ ಅಧಿಕಾರಿಗಳನ್ನು ಕೂಡಲೇ ವಾಪಸ್ ಕಳುಹಿಸಬೇಕಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ?

ಸಂಪೂರ್ಣಾವಧಿಗೆ ಅಧಿಕಾರಿಗಳು ಬೇಕಾಗಿದ್ದಾರೆ
ಈ ಕುರಿತು ಸಿಬ್ಬಂದಿ ಸಚಿವಾಲಯ ಹೊರಡಿಸಿರುವ ಪತ್ರದಲ್ಲಿ, 'ಕೇಂದ್ರ ನೌಕರರ ಯೋಜನೆಯಡಿ ಸಂಪೂರ್ಣ ಅಧಿಕಾರಾವಧಿಗೆ (Fultime) ಹಾಜರಾಗಿರುವ ಅಧಿಕಾರಿಗಳ ಹೆಸರನ್ನು ಮಾತ್ರ ಕಳುಹಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು' ಎನ್ನಲಾಗಿದೆ.  ಕೇಂದ್ರ ನೌಕರರ ಯೋಜನೆಯಡಿ (CSS) ಉಪ ಕಾರ್ಯದರ್ಶಿ / ನಿರ್ದೇಶಕರು ಕೇಂದ್ರ ಸರ್ಕಾರದ ಸಚಿವಾಲಯಗಳು / ಇಲಾಖೆಗಳಲ್ಲಿ ಮೇಲಿನ ಮತ್ತು ಮೇಲ್ವಿಚಾರಣೆಯಲ್ಲಿರುವ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ.

ಇದನ್ನೂ ಓದಿ- ಕೇಂದ್ರ ಸರ್ಕಾರದಿಂದ 44 ಕೋಟಿ ಲಸಿಕೆಗಳಿಗೆ ಆರ್ಡರ್, ಶೇ.30 ರಷ್ಟು ಅಡ್ವಾನ್ಸ್ ಕೂಡ ಪಾವತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News