ಗಜೇಂದ್ರಗಡ : ಶೋಷಿತ ಸಮುದಾಯದ ನೋವನ್ನ ತಮ್ಮ ಬರಹದ ಮೂಲಕ ಸಮರ್ಥವಾಗಿ ನೋವಿನ ಕೆಂಡವನ್ನು ಬಂಡಾಯ ಕವಿ ಸಿದ್ಧಲಿಂಗಯ್ಯನವರು ಇರಿಸಿಕೊಂಡಿದ್ದರು.ಅವರ ಕವನಗಳು ದಲಿತ ಚಳುವಳಿಗೆ ಬಹುದೊಡ್ಡ ಕಾವನ್ನು ನೀಡಿದ್ದವು ಎಂದು ಉಪನ್ಯಾಸಕರಾದ ಅರವಿಂದ ವಡ್ಡರ ಸ್ಮರಿಸಿದರು.ನಗರದಲ್ಲಿ ಏರ್ಪಡಿಸಿದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ ಲೋಕಾರ್ಪಣೆ
ದಲಿತ ಪರ ಚಿಂತನೆ ಹಾಗೂ ಹೋರಾಟದ ಮೂಲಕ ಅವರಿಗೆ ದನಿಯಾಗಿದ್ದ ಹಿರಿಯ ಸಾಹಿತಿ ಸಿದ್ಧಲಿಂಗಯ್ಯನವರು (Siddalingaiah) ಕೊರೊನಾಗೆ ಬಲಿಯಾಗಿದ್ದು ನಿಜಕ್ಕೂ ನೋವಿನ ಸಂಗತಿ ಎಂದು ಹೇಳಿದರು.
ಇದೇ ವೇಳೆ ಶಿಕ್ಷಕರಾದ ಎಂ.ಎಸ್ ತಾಳಿಕೋಟಿ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ ಹುಲ್ಲಪ್ಪ ಹಳ್ಳಿಕೇರಿ ಮಾತನಾಡಿ ಸಿದ್ಧಲಿಂಗಯ್ಯನವರು ನಮ್ಮ ಜೊತೆಗೆ ಈಗ ಇಲ್ಲದೆ ಇರಬಹುದು ಆದರೆ ಅವರ ಸಾಹಿತ್ಯ ಮತ್ತು ಹೋರಾಟದ ದಾರಿ ನಮ್ಮ ಮುಂದೆ ಇದೆ. ಊರು ಕೇರಿಗಳಲ್ಲಿ ಚಳುವಳಿಗಗಳನ್ನು ಕಟ್ಟಿ ಹೋರಾಟದ ಸಾಗರಕ್ಕೆ ಅವರು ನದಿಗಳನ್ನು ಸೇರಿಸಿದ್ದರು.ಅಷ್ಟೇ ಅಲ್ಲದೆ ಅವರು ವಿಧಾನಪರಿಷತ್ ಗೆ ಆಯ್ಕೆಯಾಗುವ ಮೂಲಕ ಶೋಷಿತರ ರೈತರ ದನಿಯಾಗಿದ್ದರು, ಆ ಮೂಲಕ ಜನಪರ ಶಾಸನಗಳನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಸ್ಮರಿಸಿದರು.
ಇದನ್ನೂ ಓದಿ: Unlock in Karnataka : ನಾಳೆಯಿಂದ ರಾಜ್ಯದಲ್ಲಿ 'ಅನ್ ಲಾಕ್' ಪ್ರಕ್ರಿಯೆ ಆರಂಭ!
ಹೋರಾಟದ ಹಾಡುಗಳಲ್ಲಿ ಹಾಗೂ ಸಾಹಿತ್ಯದಲ್ಲಿ ಅವರು ಉಗ್ರವಾಗಿ ಕಂಡರೂ ಸಹಿತ ಒಬ್ಬ ವ್ಯಕ್ತಿಯಾಗಿ ಮಾನವೀಯ ಗುಣಗಳನ್ನು ಹೊಂದಿದ್ದರು.ಅವರ ಬದುಕು ಮತ್ತು ಬರಹ ನಮ್ಮಂತವರಿಗೆ ಪ್ರೇರಕವಾಗಿ ಎಂದು ಹೇಳಿದರು.
ಕಾರ್ಯಕ್ರಮದ ವೇಳೆ ಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳನ್ನು ಹಾಡಿದ್ದಲ್ಲದೆ ಅವರ ಕೆಲವು ಕವಿತೆಗಳನ್ನು ಓದಲಾಯಿತು.ನಂತರ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳನ್ನು ಹಾಡಿ,ಕವಿತೆಗಳನ್ನು ಓದಲಾಯಿತು.ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ಹಾಕಿ ಗೌರವ ಸೂಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರಾದ ಬಿ.ಎ.ಕೆಂಚರಡ್ಡಿ,ರವೀಂದ್ರ ಹೊನವಾಡ ,ಪ್ರಕಾಶ ಮ್ಯಾಗೇರಿ,ಐ.ಆರ್.ಯಲಿಗಾರ,ಮಹಾಂತೇಶ ಕಡಗದ,ಎಂ.ಎಸ್.ಹಡಪದ,ಫಯಾಜ್ ತೋಟದ,ಬಾಲು ರಾಠೋಡ,ಮಾರುತಿ ಚಿಟಗಿ,ಡಿ.ಬಿ.ವಣಗೇರಿ,ಮೆಹಬೂಬ್ ಹವಾಲ್ದಾರ,ಚೆನ್ನಪ್ಪ ಗುಗಲೋತ್ತರ, ಬಸವರಾಜ ಹೊಸಮನಿ, ಗಣೇಶ ರಾಠೋಡ,ಉಸ್ಮಾನಗಣಿ ಹಿರೇಹಾಳ ಮತ್ತೀತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.