First Death Due To Corona Vaccine! ದೇಶದಲ್ಲಿ ವ್ಯಾಕ್ಸಿನ್ ನಿಂದ ಮೊದಲ ಸಾವು ದೃಢ! ಕೇಂದ್ರ ಸರ್ಕಾರಿ ಪ್ಯಾನಲ್ ವರದಿಯಲ್ಲಿ ಈ ಅಂಶ ಬಹಿರಂಗ

First Death Due To Corona Vaccine! AEFI ಸಮಿತಿಯ ವರದಿಯಲ್ಲಿ ಮಾರ್ಚ್ 8, 2021ರಂದು ವ್ಯಾಕ್ಸಿನ್ ಶಾಟ್ ಪಡೆದ 68 ವರ್ಷದ ವೃದ್ಧರೊಬ್ಬರು ಎನ್ಫಿಲೆಕ್ಸಿಸ್ ಕಾರಣ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ವ್ಯಾಕ್ಸಿನೆಶನ್ ಬಳಿಕ ಸಾವಿನ ಮೊದಲ ಪ್ರಕರಣ ಇದಾಗಿದೆ.

Written by - Nitin Tabib | Last Updated : Jun 15, 2021, 02:39 PM IST
  • ಕೊರೊನಾ ವ್ಯಾಕ್ಸಿನ್ ನಿಂದ ಭಾರತದಲ್ಲಿ ಮೊದಲ ಸಾವು ದೃಢ.
  • AEFI ಸಮಿತಿ ನೀಡಿದ ವರದಿಯಲ್ಲಿ ಈ ಅಂಶ ಬಹಿರಂಗ.
  • AEFI ಸಮಿತಿಯನ್ನು ಕೇಂದ್ರ ಸರ್ಕಾರ ಲಸಿಕಾಕರಣದ ಅಡ್ಡಪರಿಣಾಮಗಳ ಅಧ್ಯಯನಕ್ಕೆ ರಚಿಸಿದೆ.
First Death Due To Corona Vaccine! ದೇಶದಲ್ಲಿ ವ್ಯಾಕ್ಸಿನ್ ನಿಂದ ಮೊದಲ ಸಾವು ದೃಢ! ಕೇಂದ್ರ ಸರ್ಕಾರಿ ಪ್ಯಾನಲ್ ವರದಿಯಲ್ಲಿ ಈ ಅಂಶ ಬಹಿರಂಗ title=
First Death Due To Corona Vaccine In India (File Photo)

First Death Due To Vaccination! ಕೊರೊನಾ ವೈರಸ್ ವಿರುದ್ಧ ರಕ್ಷಣೆ ಒದಗಿಸಲು ನಡೆಸಲಾಗುತ್ತಿರುವ ವ್ಯಾಕ್ಸಿನೆಶನ್ ನ ಅಡ್ಡಪರಿಣಾಮಗಳನ್ನು ಕಂಡುಹಿಡಿಯಲು ಸರ್ಕಾರದಿಂದ ನೇಮಕಗೊಂಡ ಸಮಿತಿ ಅಧ್ಯಯನ ನಡೆಸುತ್ತಿದೆ. ಲಸಿಕಾಕರಣದ ಬಳಿಕ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಈ ಪ್ಯಾನಲ್ ದೃಢಪಡಿಸಿದೆ. AEFI ಸಮಿತಿಯ (AEFI Committee Report) ವರದಿಯಲ್ಲಿ ಮಾರ್ಚ್ 8, 2021ರಂದು ವ್ಯಾಕ್ಸಿನ್ ಶಾಟ್ ಪಡೆದ 68 ವರ್ಷದ ವೃದ್ಧರೊಬ್ಬರು ಎನ್ಫಿಲೆಕ್ಸಿಸ್ ಕಾರಣ ಸಾವನ್ನಪ್ಪಿದ್ದಾರೆ. ವ್ಯಾಕ್ಸಿನೆಶನ್ ಬಳಿಕ ಆ ವೃದ್ಧ ವ್ಯಕ್ತಿಗೆ ಗಂಬೀರ ಅಲರ್ಜಿ ಉಂಟಾದ ಕಾರಣ ಆತನ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ವ್ಯಾಕ್ಸಿನೆಶನ್ ಬಳಿಕ ಸಾವಿನ ಮೊದಲ ಅಧಿಕೃತ ಪ್ರಕರಣ ಇದಾಗಿದೆ.

ಈ ಕುರಿತು ಹೇಳಿಕೆ ನೀಡಿರುವ AEFI ಅಧ್ಯಕ್ಷ ಡಾ. NK ಆರೋರಾ, ವ್ಯಾಕ್ದಿನೆಶನ್ ಬಳಿಕ ನಾವು ಕಂಡ ಮೊದಲ ಸಾವಿನ ಪ್ರಕರಣ ಇದಾಗಿದೆ ಎಂದಿದ್ದಾರೆ. ಈ ಪ್ರಕರಣದ ತನಿಖೆಯ ವೇಳೆ ವ್ಯಾಕ್ಸಿನೆಶನ್ ಬಳಿಕ ವ್ಯಕ್ತಿಯಲ್ಲಿ ಏನಾಫಿಲೆಕ್ಸಿಸ್ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ವರದಿಯಲ್ಲಿ ವ್ಯಾಕ್ಸಿನ್ ತುಂಬಾ ಲಾಭಕಾರಿಯಾಗಿದೆ ಎನ್ನಲಾಗಿದೆ
ಇದೇ ಮೊದಲ ಬಾರಿಗೆ ವರದಿಯೊಂದರಲ್ಲಿ AEFI ಸಮಿತಿಯು ವ್ಯಾಕ್ಸಿನೆಶನ್ ಕಾರಣ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಸಂಗತಿಯನ್ನು ಒಪ್ಪಿಕೊಂಡಿದೆ. ಆದರೆ, ತನ್ನ ಈ ವರದಿಯಲ್ಲಿ ವ್ಯಾಕ್ಸಿನ್ ಹಲವು ಲಾಭಗಳನ್ನು ಹೊಂದಿದೆ ಎಂಬ ಸಂಗತಿಯನ್ನು ಸಮಿತಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ-Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ

31 ಗಂಭೀರ ಪ್ರಕರಣಗಳ ಅಧ್ಯಯನ ನಡೆಸಿದ ಸಮೀತಿ
AEFI ಸಮೀತಿ ಒಟ್ಟು 31 ಗಂಭೀರ ಪ್ರಕರಣಗಳ ಮೌಲ್ಯಮಾಪನ ನಡೆಸಿದೆ. ಇವರಲ್ಲಿ  ಒಟ್ಟು 28 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದರೆ, ಈ 28 ಪ್ರಕರಣಗಳಲ್ಲಿ ಓರ್ವ ವ್ಯಕ್ತಿ ಮಾತ್ರ ವ್ಯಾಕ್ಸಿನ್ (Corona Vaccine) ಕಾರಣ ಸಾವನ್ನಪ್ಪಿದ್ದಾನೆ ಎಂದು ಸಮಿತಿ ಸ್ಪಷ್ಟಪಡಿಸಿದೆ. ಒಟ್ಟು ಮೂವರಲ್ಲಿ ಅನಾಫಿಲೆಕ್ಸಿಸ್ (Vaccine Product Related Reaction) ಲಕ್ಷಣಗಳು ಕಂಡುಬಂದಿದ್ದವು. ಇವರಲ್ಲಿ ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲಾದ ಬಳಿಕ ಚೇತರಿಸಿಕೊಂಡಿದ್ದಾರೆ ಹಾಗೂ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ- New Corona Vaccine: Covid-19 ವಿರುದ್ಧ ಸಿಕ್ತು ಮತ್ತೊಂದು ಅಸ್ತ್ರ, ಶೇ.90ರಷ್ಟು ಪರಿಣಾಮಕಾರಿ

AEFI ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿರುವ 31 ಪ್ರಕರಣಗಳ ಪೈಕಿ ಟೂ 18 ಪ್ರಕರಣಗಳು ಕೋಇನ್ಸಿಡೆಂಟಲ್ ಪ್ರಕರಣಗಳಾಗಿದ್ದು, ವ್ಯಾಕ್ಸಿನ್ ಜೊತೆಗೆ ಇವರ ಯಾವುದೇ ಸಂಬಂಧ ಇರಲಿಲ್ಲ ಎನ್ನಲಾಗಿದೆ. 7 ಪ್ರಕರಣಗಳು ಅನಿಶ್ಚಿತ (ಲಸಿಕಾಕರಣದ ತಕ್ಷಣ ಬಳಿಕದ ಪ್ರಕರಣಗಳಾಗಿವೆ ಆದರೆ, ಲಸಿಕೆಯ ಕಾರಣ ಸಾವು ಸಂಭವಿಸಿದೆ ಎಂಬುದಕ್ಕೆ ಸಾಕ್ಷಾಧಾರಗಳು ಸಿಕ್ಕಿಲ್ಲ) ಪ್ರಕರಣಗಳಾಗಿದ್ದು, 3 ಪ್ರಕರಣಗಳು ವ್ಯಾಕ್ಸಿನ್ ರಿಲೇಟೆಡ್ ಪ್ರಕರಣಗಳಾಗಿದ್ದವು, 2 ಅವರ್ಗೀಕೃತ (ಮಹತ್ವದ ಮಾಹಿತಿ ಲಭ್ಯವಿಲ್ಲ) ಪ್ರಕರಣಗಳಾಗಿದ್ದರೆ, ಒಂದು ಪ್ರಕರಣ ಎಂಗ್ಸೈಟಿ ರಿಲೇಟೆಡ್ ರಿಯಾಕ್ಸನ್ ಅಂದರೆ, Anaphylaxis ಪ್ರಕರಣವಾಗಿತ್ತು ಮತ್ತು ವ್ಯಾಕ್ಸಿನ್ ಹಾಕಿಸಿಕೊಂಡ ಅರ್ಧಗಂಟೆಯ ಒಳಗೆ  ಆತನ ಶರೀರದಲ್ಲಿ ಸಂಭವಿಸಿದ ಸಿವಿಯರ್ ರಿಯಾಕ್ಷನ್ ಕಾರಣ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ (First Death Due To Covid-19 Vaccine In India) ಎನ್ನಲಾಗಿದೆ. 

ಇದನ್ನೂ ಓದಿ-Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News