ನವದೆಹಲಿ: China's Cyber Attack On India - ವಿಶ್ವಾದ್ಯಂತ ಹೆಚ್ಚಾಗುತ್ತಿರುವ ತಾಂತ್ರಿಕ ಅಭಿವೃದ್ಧಿ ಜಾಗತಿಕ ದೇಶಗಳ ನಡುವಿನ ಯುದ್ಧಭೂಮಿಯನ್ನೇ ಬದಲಾಯಿಸಿದೆ. ಹೀಗಾಗಿ ಇನ್ಮುಂದೆ ಯುದ್ಧಗಳು ಮೈದಾನಗಳಿಗಿಂತ ಹೆಚ್ಚಾಗಿ ಸೈಬರ್ ಸ್ಪೇಸ್ (Cyber Space) ನಲ್ಲಿ ನಡೆಯಲಿವೆ.
ಈ ಕುರಿತು ಬಹಿರಂಗಪಡಿಸಿದ ಅಮೆರಿಕಾದ ಸಂಸ್ಥೆ
ಗುಪ್ತಚರ IT ತಜ್ಞರ ಪ್ರಕಾರ, ಈ ಯುದ್ಧಗಳಲ್ಲಿ ಮಾಲ್ವೇಯರ್ ಗಳು (Mallware) ಅಸ್ತ್ರಗಳಾಗಿರಲಿವೆ. ಹ್ಯಾಕರ್ ಗಳು (Hackers) ಹಾಗೂ ಸೈಬರ್ ಸೆಕ್ಯೂರಿಟಿ ಎಕ್ಸ್ಪರ್ಟ್ ಗಳು (Cyber Security Experts) ಈ ಯುದ್ಧದಲ್ಲಿ ಯೋಧರಗಿರಲಿದ್ದಾರೆ. ಬೇರೆ ಬೇರೆ ದೇಶಗಳ ಹೆಚ್ಚಿನ ಪ್ರಮಾಣದ ದತ್ತಾಂಶ ಕಳ್ಳತನ ಈ ಯುದ್ಧದ ಪ್ರಮುಖ ಉದ್ದೇಶವಾಗಿರಲಿದೆ. ಅಮೆರಿಕಾದ ಒಂದು ಸೈಬರ್ ಸಿಕ್ಯೋರಿಟಿ (Cyber Security Organization) ಸಂಸ್ಥೆಯೊಂದರ ವರದಿಯ ಪ್ರಕಾರ, ಚೀನಾ ಈ ವಿಚಾರದಲ್ಲಿ ಎಲ್ಲಕ್ಕಿಂತ ಮುಂದಿದ್ದು, ಅದು ತನ್ನ ಶತ್ರುರಾಷ್ಟ್ರಗಳ ದತ್ತಾಂಶಕ್ಕೆ ಕನ್ನಹಾಕುವುದರ ಜೊತೆಗೆ, ಮಿತ್ರರಾಷ್ಟ್ರಗಳ ದತ್ತಾಂಶಗಳ ಕಳ್ಳತನ ನಡೆಸಿ ಅವುಗಳನ್ನು ಕೂಡ ನಿಷ್ಕ್ರೀಯಗೊಳಿಸುವಲ್ಲಿ ತೊಡಗಿವೆ.
ಸೈಬರ್ ದಾಳಿ ನಡೆಸುವಲ್ಲಿ ನಿರತವಾಗಿದೆ ಚೀನಾ
ವಿಶ್ವದ ಅತಿ ದೊಡ್ಡ ಎಂಟರ್ಪ್ರೈಸ್ ಸಿಕ್ಯೋರಿಟಿ ಇಂಟೆಲಿಜೆನ್ಸ್ (World's Biggest Enterprise Security Intellegence) ಸಂಸ್ಥೆಯಾಗಿರುವ ಆಗಿರುವ 'Recorded Future' ಗುರುವಾರ ಈ ಜಾಗತಿಕ ಸೈಬರ್ ಸಂಚುಗಾರಿಕೆ ಚಟುವಟಿಕೆಗಳನ್ನು ಬಹಿರಂಗಪಡಿಸಿದೆ. ಚೀನಾ ಪ್ರಾಯೋಜಕತ್ವದ ಈ ಹ್ಯಾಕರ್ ಗಳು ಸತತವಾಗಿ ಭಾರತೀಯ ಡಿಫೆನ್ಸ್ ಹಾಗೂ ಇತರೆ ಸಂಸ್ಥೆಗಳನ್ನು ಗುರಿಯಾಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದಿದೆ.
ಚೀನಾ ಮೂಲದ ಸಂಸ್ಥೆಯಾಗಿರುವ RedFoxtrot ನಿರಂತರವಾಗಿ ಇದರ ಮೇಲೆ ಕಾರ್ಯನಿರ್ವಹಿಸುತ್ತದೆ. RedFoxtrot ಭಾರತದಲ್ಲಿ 2014ರಿಂದ ಸಕ್ರೀಯವಾಗಿದ್ದು, ಏರೋಸ್ಪೇಸ್, ರಕ್ಷಣಾ, ಸರ್ಕಾರ, ದೂರ ಸಂಚಾರ, ಗಣಿಗಾರಿಕೆ ಮತ್ತು ಸಂಶೋಶನಾ ಸಂಸ್ಥೆಗಳನ್ನು ಗುರಿಯಾಗಿಸುತ್ತಿದೆ.
ಎಲ್ಲಾ ನೆರೆರಾಷ್ಟ್ರ ಗಳ ಮೇಲೆ ದಾಳಿ
ಸೈಬರ್ ದಾಳಿಖೋರರ್ ಮೂಲಕ ಚೀನಾ ತನ್ನ ಎಲ್ಲಾ ನೆರೆರಾಷ್ಟ್ರಗಳು ದೇಶದೊಳಗೆ ಏನು ಮಾಡುತ್ತಿವೆ ಎಂಬುದನ್ನು ನೋಡಲು ಪ್ರಯತ್ನಿಸುತ್ತಿದೆ. ಚೀನಾದ ಎಲ್ಲಾ ನೆರೆರಾಷ್ಟ್ರಗಳನ್ನು ಅದರ ಈ ಗುರಿಯಲ್ಲಿವೆ, ಶತ್ರು ರಾಷ್ಟ್ರಗಳಷ್ಟೇ ಅಲ್ಲ ಮಿತ್ರ ರಾಷ್ಟ್ರಗಳನ್ನು ಕೂಡ ಚೀನಾ ಬಿಟ್ಟಿಲ್ಲ. ಭಾರತವನ್ನು ಹೊರತುಪಡಿಸಿ, ಚೀನಾ ಅಫ್ಘಾನಿಸ್ತಾನ, ಕಜಾಕಿಸ್ತಾನ, ಕಿರ್ಗಿಸ್ತಾನ್, ತಜಕಿಸ್ತಾನ್ ಹಾಗೂ ಉಜ್ಬೆಕಿಸ್ತಾನ್ ಗಳಲ್ಲಿಯೂ ಕೂಡ ಚೀನಾ ಇದೇ ರೀತಿಯ ಸೈಬರ್ ದಾಳಿಯನ್ನು ನಡೆಸುತ್ತಿದೆ. ಸೈಬರ್ ದಾಳಿಯ ಈ ಆಟದಲ್ಲಿ ಅದು ತನ್ನ ಪರಮ ಆಪ್ತ ರಾಷ್ಟ್ರ ಪಾಕಿಸ್ತಾನವನ್ನು ಕೂಡ ಬಿಟ್ಟಿಲ್ಲ.
ಪಾಕಿಸ್ತಾನವನ್ನು ಕೂಡ ಚೀನಾ ಬಿಟ್ಟಿಲ್ಲ
PLA ಯುನಿಟಿ ಆಗಿರುವ 69010, ಚೀನಾಗೆ ಹೊಂದಿಕೊಂಡಂತೆ ಇರುವ ಪಾಕಿಸ್ತಾನದ ಕಂಪ್ಯೂಟರ್ ನೆಟ್ವರ್ಕ್ ಗೆ ಕನ್ನಹಾಕಿ ಸತತವಾಗಿ ಅಲ್ಲಿಂದ ದತ್ತಾಂಶ ಕಳ್ಳತನ ಮಾಡುತ್ತಿದೆ. ವರದಿಗಳ ಪ್ರಕಾರ RedFoxtrot ಹಾಗೂ ಚೀನಾ (China) ಪ್ರಾಯೋಜಿತ ಮತ್ತೊಂದು ಹ್ಯಾಕರ್ ಗ್ರೂಪ್ ಇದಾಗಿದೆ. ಅದನ್ನು ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಹ್ಯಾಕಿಂಗ್ ಹಾಗೂ ಸೈಬರ್ ದಾಳಿಗಾಗಿ PLAನ ವಿಶೇಷ ಯುನಿಟ್ ಜೊತೆಗೆ ಜೋಡಿಸಲಾಗಿದೆ.
ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಸಂಬಂಧಿಸಿದ ಒಂದು ಮಹತ್ವದ ಅಪ್ಡೇಟ್ ಪ್ರಕಟ, ನೀವೂ ತಿಳಿದುಕೊಳ್ಳಿ
ಚೀನಾ ಸೈಬರ್ ದಾಳಿಗಳು ಗೌಪ್ಯವಾಗಿವೆ
Recorded Future ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Christopher Ahlberg ಹೇಳುವ ಪ್ರಕಾರ, PLA ಇತ್ತೀಚಿನ ಚಟುವಟಿಕೆಗಳು ಇಂಟೆಲಿಜೆನ್ಸ್ ಕಮ್ಯೂನಿಟಿಗಾಗಿ ಒಂದು ಬ್ಲಾಕ್ ಬಾಕ್ಸ್ ನಂತಿವೆ ಹಾಗೂ ಅವುಗಳನ್ನು ಸುಲಭವಾಗಿ ಡಿಕೋಡ್ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ತನ್ನ ಈ ಚಟುವಟಿಕೆಗಳ ಮೇಲೆ ಗೌಪ್ಯತೆಯ ಬಿಗಿ ಬಂದೋಬಸ್ತ್ ಮಾಡಿದೆ. ಈ ಹಿನ್ನೆಲೆ ಅದರ ಮಿಲಿಟರಿ ಟ್ಯಾಕ್ಟಿಸ್ ಹಾಗೂ ಅಂತಾರಾಷ್ತ್ರೀಯ ಅಪಾಯದ ಖಚಿತ ಮಾಹಿತಿ ಲಭಿಸಿಲ್ಲ. ಹೀಗಾಗಿ ಎಲ್ಲ ದೇಶಗಳ ಸರ್ಕಾರಗಳು ಇಂತಹ ಸೈಬರ್ ದಾಳಿಗಳಿಂದ ಎಚ್ಚರಿಕೆಯಿಂದ ಇರಬೇಕು ಹಾಗೂ ತಮ್ಮ IT ರಕ್ಷಣಾ ತಂತ್ರವನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Lambda COVID-19 New Variant: 29 ದೇಶಗಳಲ್ಲಿ ದೊರೆತ ಕೊವಿಡ್-19 ಲ್ಯಾಮ್ದಾ ರೂಪಾಂತರಿ, WHO ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.