ಗೇಟ್ಸ್ ಫೌಂಡೇಶನ್‌ನ ಟ್ರಸ್ಟಿ ಹುದ್ದೆಗೆ ವಾರೆನ್ ಬಫೆಟ್ ರಾಜೀನಾಮೆ

ವಾರೆನ್ ಬಫೆಟ್ ಬುಧವಾರ ಗೇಟ್ಸ್ ಫೌಂಡೇಶನ್‌ನ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿ ಎಲ್ಲಾ ಬರ್ಕ್‌ಷೈರ್ ಹ್ಯಾಥ್‌ವೇ ಇಂಕ್ ಷೇರುಗಳನ್ನು ಚಾರಿಟಿಗೆ ನೀಡುವ ಮೂಲಕ 4.1 ಬಿಲಿಯನ್ ಡಾಲರ್ ದೇಣಿಗೆ ನೀಡುವುದಾಗಿ ಘೋಷಿಸಿದರು.

Last Updated : Jun 23, 2021, 09:26 PM IST
  • ವಾರೆನ್ ಬಫೆಟ್ ಬುಧವಾರ ಗೇಟ್ಸ್ ಫೌಂಡೇಶನ್‌ನ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿದರು ಮತ್ತು ಅವರ ಎಲ್ಲಾ ಬರ್ಕ್‌ಷೈರ್ ಹ್ಯಾಥ್‌ವೇ ಇಂಕ್ ಷೇರುಗಳನ್ನು ಚಾರಿಟಿಗೆ ನೀಡುವ ಮೂಲಕ 1 4.1 ಬಿಲಿಯನ್ ದೇಣಿಗೆ ನೀಡುವುದಾಗಿ ಘೋಷಿಸಿದರು.
ಗೇಟ್ಸ್ ಫೌಂಡೇಶನ್‌ನ ಟ್ರಸ್ಟಿ ಹುದ್ದೆಗೆ ವಾರೆನ್ ಬಫೆಟ್ ರಾಜೀನಾಮೆ  title=
ಸಂಗ್ರಹ ಚಿತ್ರ

ನವದೆಹಲಿ: ವಾರೆನ್ ಬಫೆಟ್ ಬುಧವಾರ ಗೇಟ್ಸ್ ಫೌಂಡೇಶನ್‌ನ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿ ಎಲ್ಲಾ ಬರ್ಕ್‌ಷೈರ್ ಹ್ಯಾಥ್‌ವೇ ಇಂಕ್ ಷೇರುಗಳನ್ನು ಚಾರಿಟಿಗೆ ನೀಡುವ ಮೂಲಕ 4.1 ಬಿಲಿಯನ್ ಡಾಲರ್ ದೇಣಿಗೆ ನೀಡುವುದಾಗಿ ಘೋಷಿಸಿದರು.

ಇದನ್ನೂ ಓದಿ: ಕೇಂದ್ರದ ನೋಟಿಸ್ ನಂತರ ಸರ್ಕಾರಿ ಬಂಗಲೆಯ ಬಾಕಿ ಹಣ ಪಾವತಿಸಿದ ಪ್ರಿಯಾಂಕಾ ಗಾಂಧಿ...!

'ನನ್ನ ಗುರಿಗಳು ಪ್ರತಿಷ್ಠಾನದ ಗುರಿಗಳೊಂದಿಗೆ 100% ಹೊಂದಿವೆ' ಎಂದು 90 ವರ್ಷದ ಬಫೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಳೆದ 15 ವರ್ಷಗಳಲ್ಲಿ ಬಫೆಟ್ ತನ್ನ ಸ್ವಂತ ಹಣದ 27 ಶತಕೋಟಿಯಷ್ಟು ಹಣವನ್ನು ಚಾರಿಟಿಗೆ ನೀಡಿದ್ದಾರೆ. 41 ಬಿಲಿಯನ್ ಡಾಲರ್ ಮೌಲ್ಯದ ಬರ್ಕ್ಷೈರ್ ಸ್ಟಾಕ್ ಅನ್ನು ಐದು ಪ್ರತಿಷ್ಠಾನಗಳಿಗೆ ದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬುಧವಾರ ಅವರು ಹೆಚ್ಚುವರಿಯಾಗಿ 4.1 ಬಿಲಿಯನ್ ಡಾಲರ್ ದೇಣಿಗೆ ಘೋಷಿಸಿದ್ದಾರೆ.

ಇದನ್ನೂ ಓದಿ: ವಾರಣಾಸಿಯ ನೇಕಾರರ ದುಃಸ್ಥಿತಿಯ ಬಗ್ಗೆ ಸಿಎಂ ಯೋಗಿಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ

ವರ್ಷಗಳಿಂದ ನಾನು ಟ್ರಸ್ಟಿಯಾಗಿದ್ದೇನೆ.ಅದರಲ್ಲಿ ನಿಷ್ಕ್ರಿಯ ಟ್ರಸ್ಟಿಯಾಗಿದ್ದೇನೆ, ಈಗ ಬರ್ಕ್ ಶೈರ್ ಹೊರತುಪಡಿಸಿ ನನ್ನ ದೇಣಿಗೆ ಸ್ವೀಕರಿಸುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ (ಬಿಎಂಜಿ) ಗೆ ಹಾಗೂ ಇತರ ಕಾರ್ಪೋರೆಟ್ ಮಂಡಳಿಗಳ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎನ್ನುವ ಅವರ ಹೇಳಿಕೆಯನ್ನು ದಿ ನ್ಯೂಯಾರ್ಕ್ ಟೈಮ್ಸ್ ನೀಡಿದ ಹೇಳಿಕೆಯಲ್ಲಿ ಅವರು ಉಲ್ಲೇಖಿಸಿದೆ.

ಗೇಟ್ಸ್ ದಂಪತಿಗಳು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು ಅತಂತ್ರ ಸ್ಥಿತಿಯಲ್ಲಿದೆ.ಬಫೆಟ್ ಅವರು ಗೇಟ್ಸ್ ಫೌಂಡೇಶನ್‌ನ ಮೂವರು ಮಂಡಳಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.ದಂಪತಿಗಳು ಕಳೆದ ತಿಂಗಳು 27 ವರ್ಷಗಳ ನಂತರ ಬೇರೆಯಾಗುವುದಾಗಿ ಘೋಷಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News