SBI's new scheme: ವ್ಯವಹಾರಕ್ಕೆ 10 ಲಕ್ಷದಿಂದ 100 ಕೋಟಿ ರೂ.ವರೆಗೆ ಸುಲಭ ಸಾಲ ಲಭ್ಯ

SBI Aarogyam Healthcare Business Loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆರೋಗ್ಯ ಕ್ಷೇತ್ರವನ್ನು ಬೆಂಬಲಿಸಲು ಹೊಸ ವ್ಯಾಪಾರ ಸಾಲ ಉತ್ಪನ್ನ 'ಆರೋಗ್ಯಂ ಹೆಲ್ತ್‌ಕೇರ್ ಬಿಸಿನೆಸ್ ಸಾಲ' ವನ್ನು ಪ್ರಾರಂಭಿಸಿದೆ.

Written by - Yashaswini V | Last Updated : Jun 25, 2021, 09:32 AM IST
  • ದೇಶದ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಎಸ್‌ಬಿಐ ಹೊಸ ಉತ್ಪನ್ನವನ್ನು ಪ್ರಾರಂಭಿಸಿದೆ
  • ಎಸ್‌ಬಿಐ ಆರೋಗ್ಯ ಕ್ಷೇತ್ರವನ್ನು ಬೆಂಬಲಿಸಲು ಹೊಸ ವ್ಯಾಪಾರ ಸಾಲವನ್ನು ಒದಗಿಸುತ್ತಿದೆ
  • ಮೆಟ್ರೋ ನಗರಗಳಲ್ಲಿ ಆರೋಗ್ಯ ಸಾಲ ಯೋಜನೆಯಡಿ 100 ಕೋಟಿ ರೂ.ವರೆಗೆ ಸಾಲವನ್ನು ಪಡೆಯಬಹುದು
SBI's new scheme: ವ್ಯವಹಾರಕ್ಕೆ 10 ಲಕ್ಷದಿಂದ 100 ಕೋಟಿ ರೂ.ವರೆಗೆ ಸುಲಭ ಸಾಲ ಲಭ್ಯ title=
ಎಸ್‌ಬಿಐನ ಹೊಸ ಯೋಜನೆ: ಬ್ಯುಸಿನೆಸ್ ಮಾಡಲು 10 ಲಕ್ಷದಿಂದ 100 ಕೋಟಿ ರೂ.ವರೆಗೆ ಸಾಲ ಸೌಲಭ್ಯ

ನವದೆಹಲಿ: SBI Aarogyam Healthcare Business Loan- ಸಾಂಕ್ರಾಮಿಕ ರೋಗದ ಮಧ್ಯೆ ದೇಶದ ಆರೋಗ್ಯ ಕ್ಷೇತ್ರಕ್ಕೆ ವರ್ಧಿತ ಬೆಂಬಲವನ್ನು ಒದಗಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಆರೋಗ್ಯಂ ಹೆಲ್ತ್‌ಕೇರ್ ಬಿಸಿನೆಸ್ ಸಾಲವನ್ನು (Aarogyam Healthcare Business Loan) ಪ್ರಾರಂಭಿಸಿದೆ. ಈ ಸಾಲವನ್ನು ನಗದು ಕ್ರೆಡಿಟ್, ಟರ್ಮ್ ಸಾಲ, ಬ್ಯಾಂಕ್ ಗ್ಯಾರಂಟಿ ಅಥವಾ ಲೆಟರ್ ಆಫ್ ಕ್ರೆಡಿಟ್ ಮೂಲಕ ತೆಗೆದುಕೊಳ್ಳಬಹುದು. ಇದರಲ್ಲಿ ಉದ್ಯಮಿಗಳಿಗೆ ಕನಿಷ್ಠ 10 ಲಕ್ಷ ಸಾಲ ಮತ್ತು ಗರಿಷ್ಠ 100 ಕೋಟಿ ವರೆಗೆ ಸಾಲ ಪಡೆಯಲು ಸಾಧ್ಯವಾಗುತ್ತದೆ. ಈ ಉತ್ಪನ್ನದ ವಿಶೇಷ ಲಕ್ಷಣವೆಂದರೆ ಅದು ಮರುಪಾವತಿ ಅವಧಿಗೆ 10 ವರ್ಷಗಳನ್ನು ಪಡೆಯುತ್ತದೆ, ಅಂದರೆ ಸಾಲವನ್ನು ಮರುಪಾವತಿಸಲು 10 ವರ್ಷಗಳ ಸಮಯಾವಕಾಶ ಸಿಗಲಿದೆ. ಅಲ್ಲದೆ, ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಮತ್ತು ಸ್ಮಾಲ್ ಎಂಟರ್‌ಪ್ರೈಸಸ್ (ಸಿಜಿಟಿಎಂಎಸ್‌ಇ) ಯೋಜನೆಯಡಿ 2 ಕೋಟಿ ರೂ. ವರೆಗೆ ಸಿಗಲಿದೆ.

ಈ ಸಾಲವನ್ನು ಯಾರು ಪಡೆಯಬಹುದು?
ಆಸ್ಪತ್ರೆಗಳು (Hospitals), ನರ್ಸಿಂಗ್ ಹೋಂಗಳು, ರೋಗನಿರ್ಣಯ ಕೇಂದ್ರಗಳು, ರೋಗಶಾಸ್ತ್ರ ಪ್ರಯೋಗಾಲಯಗಳು, ತಯಾರಕರು, ಪೂರೈಕೆದಾರರು, ಆಮದುದಾರರು ಮತ್ತು ನಿರ್ಣಾಯಕ ಆರೋಗ್ಯ ಸರಬರಾಜು ಕೆಲಸದಲ್ಲಿ ತೊಡಗಿರುವ ಲಾಜಿಸ್ಟಿಕ್ಸ್ ಕಂಪೆನಿಗಳಂತಹ ಆರೋಗ್ಯ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಸಂಸ್ಥೆಗಳು ಎಸ್‌ಬಿಐನ 'ಆರೋಗ್ಯಂ ಹೆಲ್ತ್‌ಕೇರ್ ಬಿಸಿನೆಸ್ ಲೋನ್' (Aarogyam Healthcare Business Loan) ಪ್ರಯೋಜನವನ್ನು ಪಡೆಯಬಹುದು. ಆರೋಗ್ಯಂ ಸಾಲವನ್ನು ಟರ್ಮ್ ಸಾಲ ಅಥವಾ ನಗದು ಸಾಲ, ಬ್ಯಾಂಕ್ ಗ್ಯಾರಂಟಿ ಎಂದು ತೆಗೆದುಕೊಳ್ಳಬಹುದು. ಹೊಸ ಘಟಕಗಳನ್ನು ಸ್ಥಾಪಿಸಲು ಅಥವಾ ಹಳೆಯ ವ್ಯವಹಾರದ ವಿಸ್ತರಣೆಗೆ ಬಂಡವಾಳದ ಸಾಲವನ್ನು ಬಳಸಬಹುದು.

ಇದನ್ನೂ ಓದಿ- SBI New Rule: ಜುಲೈ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಆಗಲಿದೆ ದುಬಾರಿ

ಮೆಟ್ರೋ ನಗರಗಳಲ್ಲಿ 100 ಕೋಟಿ ವರೆಗೆ ಸಾಲ:
ಮೆಟ್ರೋ ನಗರಗಳಲ್ಲಿ ಆರೋಗ್ಯ ಸಾಲ ಯೋಜನೆಯಡಿ 100 ಕೋಟಿ ರೂ.ವರೆಗೆ ಸಾಲವನ್ನು ಪಡೆಯಬಹುದು. ಶ್ರೇಣಿ -1 ಮತ್ತು ನಗರ ಕೇಂದ್ರದಲ್ಲಿ 20 ಕೋಟಿ ವರೆಗೆ ಸಾಲ ಪಡೆಯಬಹುದು. ಅದೇ ಸಮಯದಲ್ಲಿ, ಶ್ರೇಣಿ -2 ರಿಂದ ಶ್ರೇಣಿ -4 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ 10 ಕೋಟಿ ರೂ.ವರೆಗೆ ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ- ATM ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಸ್‌ಬಿಐ ಎಚ್ಚರಿಕೆ! ನಿಮ್ಮ ಕಾರ್ಡ್ ಕಳೆದುಹೋದರೆ ತಕ್ಷಣ ಈ ಕೆಲಸ ಮಾಡಿ

ಸಾಲ ಮೇಲಾಧಾರ 2 ಕೋಟಿ ವರೆಗೆ ಉಚಿತ:
ಆರೋಗ್ಯಂ ಹೆಲ್ತ್‌ಕೇರ್ ಬಿಸಿನೆಸ್ ಸಾಲದ ಲೋನ್' (Aarogyam Healthcare Business Loan)  ಮತ್ತೊಂದು ವೈಶಿಷ್ಟ್ಯವೆಂದರೆ 2 ಕೋಟಿ ರೂ.ವರೆಗೆ ಸಾಲ ತೆಗೆದುಕೊಳ್ಳುವ ಕಂಪನಿಗಳು ಯಾವುದೇ ಮೇಲಾಧಾರ ಅಥವಾ ಭದ್ರತೆಯನ್ನು ಬ್ಯಾಂಕಿನಲ್ಲಿ ಠೇವಣಿ ಇಡುವ ಅಗತ್ಯವಿಲ್ಲ. ಈ ಸಾಲವನ್ನು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ (ಸಿಜಿಟಿಎಂಎಸ್‌ಇ) ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್‌ನ ಖಾತರಿ ಯೋಜನೆಯಡಿ ಸಂಪೂರ್ಣವಾಗಿ ನೀಡಲಾಗುತ್ತದೆ. ಆರೋಗ್ಯಂ ಹೆಲ್ತ್‌ಕೇರ್ ಬಿಸಿನೆಸ್ ಸಾಲವನ್ನು ಕೋವಿಡ್ ಸಾಲ ಪುಸ್ತಕದಡಿ ಮಾಡಲಾಗಿದೆ. ಇತ್ತೀಚೆಗೆ, ಕೋವಿಡ್ ಪರಿಹಾರ ಕ್ರಮಗಳ ಅಡಿಯಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ರಿಸರ್ವ್ ಬ್ಯಾಂಕ್ ಘೋಷಿಸಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News