New Wage Code 2021: ನೂತನ ವೇತನ ಸಂಹಿತೆ ಯಾವಾಗ ಆರಿಗೆ ಬರಲಿದೆ? ನೌಕರ ವರ್ಗದ ಜನರ ಮನದಲ್ಲಿ ಈ ಕುರಿತು ನಿರಂತರವಾಗಿ ಪ್ರಶ್ನೆಗಳು ಏಳುತ್ತಿವೆ. ಏಪ್ರಿಲ್ 2021ರಲ್ಲಿ ಸರ್ಕಾರ ಇದನ್ನು ಜಾರಿಗೊಳಿಸುವ ಘೋಷಣೆ ಮಾಡಿತ್ತು. ಆದರೆ, ಕೆಲ ಅಡಚಣೆಗಳ ಹಿನ್ನೆಲೆ ಇದನ್ನು ಮುಂದೂಡಲಾಗಿತ್ತು. ನೂತನ ವೇತನ ಸಂಹಿತೆ 2021ನ್ನು ಜುಲೈ ತಿಂಗಳಿನಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಕೆಲ ಅಧಿಕಾರಿಗಳು ಹೇಳುತ್ತಿದ್ದರೆ, ಮೂಲಗಳು ಮಾತ್ರ ಈ ನೂತನ ಜುಲೈ ನಲ್ಲಿ ವೇತನ ಸಂಹಿತೆ ಜುಲೈ ನಲ್ಲಿ ಜಾರಿಗೆ ಬರುತ್ತಿಲ್ಲ ಎನ್ನುತ್ತಿವೆ.
'ಝೀ ನ್ಯೂಸ್'ಗೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಹಲವು ರಾಜ್ಯಗಳು ಹೊಸ ವೇತನ ಸಂಹಿತೆಯ ಕರಡು ನಿಯಮಗಳನ್ನು (New Wage Code Draft Rules) ಇದುವರೆಗೆ ಸದ್ದಪಡಿಸಿಲ್ಲ. ಹೀಗಾಗಿ ಎಲ್ಲಿಯವರೆಗೆ ರಾಜ್ಯಗಳು ಕರಡು ನಿಯಮಗಳನ್ನು ಸಿದ್ಧಪಡಿಸುವುದಿಲ್ಲವೋ ಅಲ್ಲಿಯವರೆಗೆ ಕೇಂದ್ರ ಸರ್ಕಾರಕ್ಕೂ ಕೂಡ ಆ ಕುರಿತು ಅಧಿಸೂಚನೆ ಹೊರಡಿಸುವುದು ಕಷ್ಟಕರವಾಗಲಿದೆ. ಪ್ರಸ್ತುತ ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಬಿಹಾರ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ತಮ್ಮ ಕರಡು ನಿಯಮಗಳನ್ನು ಪ್ರಕಟಿಸಿವೆ. ಇನ್ನೊಂದೆಡೆ ಹರ್ಯಾಣಾ, ಮೇಘಾಲಯ, ಚತ್ತೀಸ್ಗಡ್, ಗೋವಾ, ಸಿಕ್ಕಿಂ, ತ್ರಿಪುರಾ ಹಾಗೂ ಝಾರ್ಖಂಡ್ ರಾಜ್ಯಗಳ ಕರಡು ನಿಯಮಗಳು ಅಂತಿಮ ಹಂತದಲ್ಲಿವೆ. ಪಂಜಾಬ್ ಕೂಡ ತನ್ನ ಕರಡು ನಿಯಮಗಳನ್ನು ಜಾರಿಗೊಳಿಸಿದೆ. ಆದರೆ, ಅದರಲ್ಲಿ ಕೇವಲ ಮೂರು ಸಂಹಿತೆಗಳ ಉಲ್ಲೇಖ ಮಾಡಲಾಗಿದೆ. ನಾಲ್ಕನೇ ನಿಯಮವಾಗಿರುವ Occupational Safety, Health And Working Conditions ಅನ್ನು ಉಲ್ಲೇಖಿಸಿಲ್ಲ.
ಅಕ್ಟೋಬರ್ ನಲ್ಲಿ ಹೊಸ ವೇತನ ಸಂಹಿತೆ ಜಾರಿಗೆ ಬರುವ ಸಾಧ್ಯತೆ
ವೇತನ ಸಂಹಿತೆಯನ್ನು ಜಾರಿಗೊಳಿಸಲು (New Wage Code Notify) ಕೇಂದ್ರ ಸರ್ಕಾರ ಸಿದ್ಧವಾಗಿದೆ. ಆದರೆ, ರಾಜ್ಯಗಳು ಹಾಗೂ ಕಂಪನಿಗಳ ವತಿಯಿಂದಾಗಿತ್ತಿರುವ ವಿಳಂಬದಿಂದಾಗಿ ಅದನ್ನು ಜಾರಿಗೊಳಿಸುವುದು ಕಷ್ಟಕರವಾಗುತ್ತಿದೆ. ರಾಜ್ಯಗಳ ಒಪ್ಪಿಗೆ ಇಲ್ಲದೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಬಯಸುತ್ತಿಲ್ಲ ಎಂದು ಮೂಲಗಳು ವರದಿ ಮಾಡಿವೆ. ರಾಜ್ಯಗಳಿಂದ ಕರಡು ನಿಯಮಗಳು ಬಂದ ಬಳಿಕ ತಕ್ಷಣಕ್ಕೆ ಹೊಸ ವೇತನ ಸಂಹಿತೆ 2021ಯನ್ನು ಅಕ್ಟೋಬರ್ 2021ರಿಂದ ಜಾರಿಗೆ ತರಲಾಗುವುದು. ಆದರೆ, ಡ್ರಾಫ್ಟ್ ನಿಯಮಗಳು ಪ್ರಕಟಗೊಂಡ ಬಳಿಕ ರಾಜ್ಯಗಳಿಗೆ ಸ್ಟೆಕ್ ಹೊಲ್ದರ್ಸ್ ಗಳಿಂದ ಕಾಮೆಂಟ್ ಹಾಗೂ ಸಲಹೆಗಳನ್ನು ಪಡೆಯಲು 30-45 ದಿನಗಳ ಕಾಲಾವಕಾಶ ನೀಡಬೇಕು. ಈ ಸಲಹೆಗಳ ಆಧಾರದ ಮೇಲೆಯೇ ಸಂಹಿತೆಗಳಿಗೆ ಅಂತಿಮ ರೂಪ ನೀಡಿ ಅವುಗಳನ್ನು ಅಧಿಸೂಚನೆಗೊಳಿಸಲಾಗುವುದು.
ಏನಿದು ಹೊಸ ವೇತನ ಸಂಹಿತೆ?
ಈಗಾಗಲೇ ಜಾರಿಯಲ್ಲಿರುವ 29 ಕಾರ್ಮಿಕ ಕಾನೂನುಗಳನ್ನೂ ಸೇರಿಸಿ 4 ಹೊಸ ಸಂಹಿತೆಗಳನ್ನು ರಚಿಸಿದೆ. ಇದರಲ್ಲಿ ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್, ಕೋಡ್ ಆನ್ ಆಕ್ಯೂಪೆಶ್ನಲ್ ಸೇಫ್ಟಿ, ಹೆಲ್ತ್ ಅಂಡ್ ವರ್ಕಿಂಗ್ ಕಂಡಿಶನ್ಸ್ ಕೋಡ್ , ಸೋಶಿಯಲ್ ಸೆಕ್ಯೂರಿಟಿ ಕೋಡ್ ಹಾಗೂ ಕೋಡ್ ಆನ್ ವೆಜ್ಜಿಸ್ ಶಾಮೀಲಾಗಿದೆ. ಆದರೆ ವೇತನದ ವ್ಯಾಖ್ಯೆ ಬದಲಾವಣೆ ಎಲ್ಲಕ್ಕಿಂತ ದೊಡ್ಡ ಬದಲಾವಣೆ ಆಗಿರಲಿದೆ. ಅದನ್ನು ವಿಸ್ತರಿಸಲಾಗಿದೆ. ಕನ್ಸೋಲಿಡೆಶನ್ ಇದು ನೂತನ ಕಾರ್ಮಿಕ ಸಂಹಿತೆಯ ಮೂಲ ಉದ್ದೇಶವಾಗಿರಲಿದೆ. ಈಗಾಗಲೇ ದೇಶದ ಸಂಸತ್ತು ಕಾರ್ಮಿಕ ಸುಧಾರಣೆಗೆ ಸಂಬಂಧಿಸಿದ ಕಾನೂನನ್ನು ಅಂಗೀಕರಿಸಿದ್ದು ಅದನ್ನು ಇದೀಗ ಜಾರಿಗೊಳಿಸಬೇಕಾಗಿದೆ.
ಹೊಸ ವೆಜ್ ಕೋಡ್ ಆಕ್ಟ್ 2019ರ ಪ್ರಕಾರ, ಯಾವುದೇ ಓರ್ವ ನೌಕರನ ಬೇಸಿಕ್ ವೇತನ ಕಂಪನಿ ನೀಡುವ ಒಟ್ಟು ವೇತನದ (CTC-Cost-To-Company)ಶೇ.50ಕ್ಕಿಂತ ಕಡಿಮೆಯಾಗಿರಬಾರದು. ಪ್ರಸ್ತುತ ಹಲವು ಕಂಪನಿಗಳು ಬೇಸಿಕ್ ವೇತನವನ್ನು ಕಡಿತಗೊಳಿಸಿ, ಭತ್ಯೆಗಳನ್ನು ಹೆಚ್ಚಾಗಿ ನೀಡುತ್ತವೆ. ಕಂಪನಿಯ ಮೇಲೆ ಒತ್ತಡ ಕಡಿಮೆ ಬೀಳಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ನೂತನ ವೇತನ ಸಂಹಿತೆ ಜಾರಿಗೆ ಬಂದ ಬಳಿಕ ನೌಕರರ ವೇತನದ ಸ್ವರೂಪ ಸಂಪೂರ್ಣ ಬದಲಾಗಲಿದೆ. ನೌಕರರ ಟೇಕ್ ಹೋಮ್ ಸ್ಯಾಲರಿ (Take Home Salary) ಕಡಿಮೆಯಾಗಲಿದೆ. ಏಕೆಂದರೆ, ನೌಕರರ ಬೇಸಿಕ್ ವೇತನ ಹೆಚ್ಚಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ PF ಕಡಿತವಾಗಲಿದೆ. ಅಂದರೆ, ನೌಕರರ ಭವಿಷ್ಯ ಮತ್ತಷ್ಟು ಸುರಕ್ಷಿತವಾಗಲಿದೆ.
ಇದನ್ನೂ ಓದಿ- LIC policy Lapsed : ಲ್ಯಾಪ್ಸ್ ಆಗಿರುವ LIC ಪಾಲಿಸಿ ಮತ್ತೆ ಪ್ರಾರಂಭಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ
ವರ್ಕಿಂಗ್ ಅವರ್, ರಜಾದಿನಗಳು, ಪೆನ್ಷನ್ ಹಾಗೂ PF ಮೇಲೆಯೂ ಪ್ರಭಾವ ಉಂಟಾಗಲಿದೆ
EPFO ಮಂಡಳಿ ಹಾಗೂ ಭಾರತೀಯ ಕಾರ್ಮಿಕ ಸಂಘಟನೆಯ ಜನರಲ್ ಸೆಕ್ರೆಟರಿ ವಿರಜೇಶ್ ಉಪಾಧ್ಯಾಯ್ ಪ್ರಕಾರ, ನೌಕರರ ಸೋಸಿಯಲ್ ಸೆಕ್ಯೂರಿಟಿ (Social Security)ತುಂಬಾ ಮಹತ್ವದ್ದಾಗಿದೆ. ಇದರಲ್ಲಿ ಹಲವು ಪ್ರಮುಖ ಅಂಶಗಳಿವೆ. ನೌಕರರ ಕೆಲಸದ ಅವಧಿ, ವಾರ್ಷಿಕ ರಜೆಗಳು, ಪೆನ್ಷನ್, PF, ಟೇಕ್ ಹೋಂ ಸ್ಯಾಲರಿ, ರಿಟೈರ್ಮೆಂಟ್ ಗಳಂತಹ ಹಲವು ವಿಷಯಗಳ ನಿಯಮಗಳು ಬದಲಾಗಲಿವೆ.
ಇದನ್ನೂ ಓದಿ- Indian Currency: 25 ಪೈಸೆಯ ಬದಲಿಗೆ 1.5 ಲಕ್ಷ ರೂ. ಮಾರಾಟ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ
PF ಜೊತೆಗೆ ಗ್ರ್ಯಾಚ್ಯುಟಿ ಮೇಲೂ ಕೂಡ ಪ್ರಭಾವ
ಪ್ರಾವಿಡೆಂಟ್ ಫಂಡ್ ಜೊತೆಗೆ ಗ್ರ್ಯಾಚ್ಯುಟಿಯಲ್ಲಿಯೂ (Gratuity)ಕೂಡ ನೌಕರರ ಕೊಡುಗೆ ಹೆಚ್ಚಾಗಲಿದೆ. ಒಂದೆಡೆ ಟೇಕ್ ಹೋಂ ಸ್ಯಾಲರಿಯಲ್ಲಿ ಇಳಿಕೆಯಾಗಲಿದ್ದರೆ, ಇನ್ನೊಂದೆಡೆ ನಿವೃತ್ತಿಯ ಬಳಿಕ ಅಧಿಕ ಹಣ ನೌಕರರ ಕೈಸೇರಲಿದೆ. ಅಷ್ಟೇ ಅಲ್ಲ ಅಸಂಘಟಿತ ಕಾರ್ಮಿಕರಿಗೂ ಕೂಡ ನೂತನ ವೇತನ ಕೋಡ್ ಅನ್ವಯಿಸಲಿದೆ. ಸ್ಯಾಲರಿ ಹಾಗೂ ಬೋನಸ್ ಗೆ ಸಂಬಂಧಿಸಿದ ನಿಯಮಗಳೂ ಕೂಡ ಬದಲಾಗಿವೆ ಹಾಗೂ ಎಲ್ಲಾ ಸೆಕ್ಟರ್ ಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನದಲ್ಲಿ ಸಮಾನತೆ ಕಂಡುಬರಲಿದೆ.
ಇದನ್ನೂ ಓದಿ-SBI's new scheme: ವ್ಯವಹಾರಕ್ಕೆ 10 ಲಕ್ಷದಿಂದ 100 ಕೋಟಿ ರೂ.ವರೆಗೆ ಸುಲಭ ಸಾಲ ಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.