ನವದೆಹಲಿ : ಕಳೆದ ವರ್ಷ ಏಪ್ರಿಲ್ 1 ರಿಂದ ಸಿಂಡಿಕೇಟ್ ಬ್ಯಾಂಕ್ (Syndicate Bank) ಅನ್ನು ಕೆನರಾ ಬ್ಯಾಂಕ್ನೊಂದಿಗೆ (Canara Bank) ವಿಲೀನಗೊಳಿಸಲಾಗಿದೆ. ಇದೀಗ, ಜುಲೈ 1 ರಿಂದ ಈ ಬ್ಯಾಂಕಿನ ಐಎಫ್ಎಸ್ಸಿ ಕೋಡ್ (IFSC) ಕೂಡ ಬದಲಾಗಲಿದೆ. ಅಂದರೆ, ಸಿಂಡಿಕೇಟ್ ಬ್ಯಾಂಕ್ ಐಎಫ್ಎಸ್ಸಿ ಕೋಡ್ 30 ಜೂನ್ 2021 ರವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ. ಬ್ಯಾಂಕಿನ ಹೊಸ ಐಎಫ್ಎಸ್ಸಿ ಕೋಡ್ ಜುಲೈ 1, 2021 ರಿಂದ ಅನ್ವಯವಾಗುತ್ತವೆ. ಹಾಗಾಗಿ ಬ್ಯಾಂಕಿನ ಹೊಸ ಐಎಫ್ಎಸ್ಸಿ ಕೋಡನ್ನು (New IFSC Code) ಬ್ಯಾಂಕ್ ನಿಂದ ತೆಗೆದುಕೊಳ್ಳಬೇಕಾಗುತ್ತದೆ.
ಗ್ರಾಹಕರಿಗೆ ಸೂಚನೆ ನೀಡಿದ ಕೆನರಾ ಬ್ಯಾಂಕ್ :
ಮೊದಲೇ ಹೇಳಿದ ಹಾಗೆ ಸಿಂಡಿಕೆಟ್ ಬ್ಯಾಂಕ್ (Syndicate Bank) ಕಳೆದ ಏಪ್ರಿಲ್ ನಲ್ಲಿಯೇ ಕೆನರಾ ಬ್ಯಾಂಕ್ ನೊಂದಿಗೆ ವಿಲೀನವಾಗಿದೆ. ಇದೀಗ ಜುಲೈ ಒಂದರಿಂದ ಬ್ಯಾಂಕಿನ ಐಎಫ್ಎಸ್ ಸಿ ಕೋಡ್ ಬದಲಾಗಲಿದೆ. ಈ ಬಗ್ಗೆ ಕೆನರಾ ಬ್ಯಾಂಕ್ (Canara Bank) ಜಾಹೀರಾತು ನೀಡುವ ಮೂಲಕ ತನ್ನ ಗ್ರಾಹಕರಿಗೆ ಮತ್ತೊಮ್ಮೆ ನೆನಪಿಸಿದೆ. ಎಸ್ವೈಎನ್ಬಿಯಿಂದ ಪ್ರಾರಂಭವಾಗುವ ಎಲ್ಲಾ eSyndicate IFSC ಬದಲಾಯಿಸಲಾಗಿದೆ. SYNB ಯಿಂದ ಪ್ರಾರಂಭವಾಗುವ ಎಲ್ಲಾ IFSC ಗಳನ್ನು ಜುಲೈ 1, 2021 ರಿಂದ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ, .
ಇದನ್ನೂ ಓದಿ : ಬದಲಾಗಿದೆ ಬ್ಯಾಂಕ್ ನಿಯಮ; ಜುಲೈ 1ರಿಂದ ಎಟಿಎಂನಿಂದ ಹಣ ತೆಗೆಯುವುದು ದುಬಾರಿಯಾಗಲಿದೆ
ಏನು ಹೇಳಿದೆ ಬ್ಯಾಂಕ್ :
NEFT, RTGS, IMPS ಬಳಸುವಾಗ, CNRBಯಿಂದ ಪ್ರಾರಂಭವಾಗುವ ಹೊಸ ಐಎಫ್ಎಸ್ಸಿ ಮಾತ್ರ ಬಳಸುವಂತೆ ಬ್ಯಾಂಕ್ ಸೂಚಿಸಿದೆ.. ಇನ್ನು ಸಿಂಡಿಕೇಟ್ ಬ್ಯಾಂಕಿನ ಹಿಂದಿನ ಐಎಫ್ಎಸ್ಸಿಗೆ 10000 ಸೇರಿಸುವಂತೆಯೂ ಕೆನರಾ ಬ್ಯಾಂಕ್ ಸೂಚಿಸಿದೆ. ಉದಾಹರಣೆಗೆ, ಹಳೆಯ IFSC, SYNB0003687 ಆಗಿದ್ದರೆ, ಈಗ ಹೊಸ ಐಎಫ್ಎಸ್ಸಿ IFSC, CNRB0013687 ಆಗಿರಲಿದೆ.
ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ :
ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರು ಹೊಸ ಐಎಫ್ಎಸ್ಸಿ ಮತ್ತು ಎಂಐಸಿಆರ್ ಕೋಡ್ ಬಗ್ಗೆ ವಿವರಗಳಿಗಾಗಿ ಕೆನರಾ ಬ್ಯಾಂಕ್ ವೆಬ್ಸೈಟ್ಗೆ (http://www.canarabank.com/) ಭೇಟಿ ನೀಡಿ. ಇಲ್ಲಿ Below 'What's New' ಮತ್ತು 'KIND ATTN eSYNDIATE CUSTOMERS: KNOW YOUR NEW IFSC' ಮೇಲೆ ಕ್ಲಿಕ್ ಮಾಡಿ. ಇದಲ್ಲದೆ ಕೆನರಾ ಬ್ಯಾಂಕಿನ ಕಸ್ಟಮರ್ ಕೇರ್ ನಂಬರ್ 18004250018 ಗೆ ಸಂಪರ್ಕಿಸಬಹುದು.
ಇದನ್ನೂ ಓದಿ : Fact Check: ಜುಲೈ ತಿಂಗಳಿನಿಂದ DA-DR ಸಿಗಲಿದೆ! ಸರ್ಕಾರಿ ನೌಕರರು ಓದಲೇ ಬೇಕಾದ ಸುದ್ದಿ ಇದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ