ಭಾರತೀಯ ವೈದ್ಯಕೀಯ ಸಮುದಾಯಕ್ಕೆ ಭಾರತ ರತ್ನ ನೀಡಲು ಕೇಜ್ರಿವಾಲ್ ಆಗ್ರಹ

ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿಯನ್ನು ಭಾರತೀಯ ವೈದ್ಯರು ಮತ್ತು ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Written by - Zee Kannada News Desk | Last Updated : Jul 4, 2021, 05:47 PM IST
  • ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿಯನ್ನು ಭಾರತೀಯ ವೈದ್ಯರು ಮತ್ತು ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
  • ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ, ಎಲ್ಲಾ ಆರೋಗ್ಯ ಕಾರ್ಯಕರ್ತರನ್ನು ಒಂದು ಗುಂಪಾಗಿ ಗೌರವಿಸಲು ನಿಯಮಗಳನ್ನು ಬದಲಾಯಿಸಬೇಕೆಂದು ಕೇಜ್ರಿವಾಲ್ ಸೂಚಿಸಿದರು
ಭಾರತೀಯ ವೈದ್ಯಕೀಯ ಸಮುದಾಯಕ್ಕೆ ಭಾರತ ರತ್ನ ನೀಡಲು ಕೇಜ್ರಿವಾಲ್ ಆಗ್ರಹ title=
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿಯನ್ನು ಭಾರತೀಯ ವೈದ್ಯರು ಮತ್ತು ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Delhi Unlock : ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್‌ ನಿಯಮ ಸಡಿಲಿಕೆ : ಸಿಎಂ ಕೇಜ್ರಿವಾಲ್‌

ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ, ಎಲ್ಲಾ ಆರೋಗ್ಯ ಕಾರ್ಯಕರ್ತರನ್ನು ಒಂದು ಗುಂಪಾಗಿ ಗೌರವಿಸಲು ನಿಯಮಗಳನ್ನು ಬದಲಾಯಿಸಬೇಕೆಂದು ಕೇಜ್ರಿವಾಲ್ ಸೂಚಿಸಿದರು.'ಈ ವರ್ಷ ಭಾರತ ರತ್ನವನ್ನು ಭಾರತೀಯ ವೈದ್ಯರಿಗೆ ನೀಡಬೇಕೆಂದು ದೇಶವು ಬಯಸಿದೆ.ಈ ಮೂಲಕ ನಾನು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಅರ್ಥೈಸಿಕೊಳ್ಳುವುದಿಲ್ಲ.ದೇಶದ ಎಲ್ಲಾ ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಈ ಗೌರವವನ್ನು ಪಡೆಯಬೇಕು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ (Arvind Kejriwal) ಬರೆದಿದ್ದಾರೆ.

COVID-19 ರ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ಅನೇಕ ವೈದ್ಯರು ಮತ್ತು ದಾದಿಯರಿಗೆ ಅಂತಹ ಗೌರವವು ನಿಜವಾದ ಗೌರವವಾಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: Arvind Kejriwal : ಮನೆ ಬಾಗಿಲಿಗೆ ಪಿಜ್ಜಾ, ಬರ್ಗರ್ ಡೆಲಿವರಿ ಮಾಡುವ ಹಾಗೆ ಪಡಿತರ ರೇಷನ್ ಯಾಕಾಗಬಾರದು?

'ಲಕ್ಷಾಂತರ ವೈದ್ಯರು ಮತ್ತು ದಾದಿಯರು ತಮ್ಮ ಜೀವನ ಮತ್ತು ಕುಟುಂಬಗಳ ಬಗ್ಗೆ ಕಾಳಜಿ ವಹಿಸದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರು. ಅವರನ್ನು ಗೌರವಿಸಲು ಮತ್ತು ಧನ್ಯವಾದ ಹೇಳಲು ಇದಕ್ಕಿಂತ ಉತ್ತಮವಾದ ದಾರಿ ಯಾವುದು ಇದೆ ? ನಿಯಮಗಳು ಭಾರತ್ ರತ್ನವನ್ನು ಯಾವುದೇ ಗುಂಪಿಗೆ ನೀಡಲು ಅನುಮತಿಸದಿದ್ದರೆ, ನಾನು ನಿಮ್ಮನ್ನು ನಿಯಮಗಳನ್ನು ಬದಲಾಯಿಸಲು ವಿನಂತಿಸುತ್ತೇನೆ. ಇಂದು ಇಡೀ ದೇಶವು ತನ್ನ ವೈದ್ಯರಿಗೆ ಕೃತಜ್ಞರಾಗಿರಬೇಕು.ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವುದರಿಂದಾಗಿ ಪ್ರತಿಯೊಬ್ಬ ಭಾರತೀಯರಿಗೂ ಸಂತೋಷವಾಗುತ್ತದೆ" ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News