Earthquake: ಮಣಿಪುರದ ಉಖ್ರುಲ್‌ನಲ್ಲಿ 4.5 ತೀವ್ರತೆಯ ಭೂಕಂಪ

ಭಾರತದ ಈಶಾನ್ಯ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ.

Written by - Zee Kannada News Desk | Last Updated : Jul 9, 2021, 09:40 AM IST
  • ಭೂಕಂಪಗಳ ವಿಷಯದಲ್ಲಿ ಈಶಾನ್ಯ ಭಾರತವು ಬಹಳ ಸೂಕ್ಷ್ಮ ಪ್ರದೇಶವಾಗಿದೆ
  • ಈ ಭಾಗಗಳಲ್ಲಿ ಭೂಕಂಪದ ನಡುಕ ಪುನರಾವರ್ತಿತವಾಗಿ ಕಂಡುಬರುತ್ತದೆ
  • ಏಪ್ರಿಲ್ 28 ರಂದು ಸಹ ಇಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದೆ
Earthquake: ಮಣಿಪುರದ ಉಖ್ರುಲ್‌ನಲ್ಲಿ 4.5 ತೀವ್ರತೆಯ ಭೂಕಂಪ title=
ಭಾರತದ ಈಶಾನ್ಯ ಪ್ರದೇಶದಲ್ಲಿ ಪ್ರಬಲ ಭೂಕಂಪ

Earthquake: ದೇಶದ ಈಶಾನ್ಯ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಇಂದು ಬೆಳಿಗ್ಗೆ 5.56 ಕ್ಕೆ ಮಣಿಪುರದ (Manipur) ಉಖ್ರುಲ್‌ನಲ್ಲಿ (Ukhrul) 57 ಕಿ.ಮೀ ಇಎಸ್‌ಇಯಲ್ಲಿ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ದಾಖಲಾಗಿದೆ.

ಅದೇ ಸಮಯದಲ್ಲಿ, ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಗುರುವಾರ ಮಧ್ಯಾಹ್ನ 5.9 ರ ತೀವ್ರತೆಯ ಭೂಕಂಪನವು (Earthquake) ಕ್ಯಾಲಿಫೋರ್ನಿಯಾ-ನೆವಾಡಾ ಗಡಿಯನ್ನು ನಡುಗಿಸಿತು, ಜನರು ನೂರಾರು ಮೈಲಿ ದೂರದಲ್ಲಿ ನಡುಕವನ್ನು ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ- Earthquake: ಅಸ್ಸಾಂನಲ್ಲಿ ಭೂಕಂಪ, ಈಶಾನ್ಯ ಪ್ರದೇಶದಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ

ಇದಕ್ಕೂ ಮೊದಲು ಬುಧವಾರ ಬೆಳಿಗ್ಗೆ ಅಸ್ಸಾಂನಲ್ಲಿ (Assam)  5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದಲ್ಲದೆ ನೆರೆಯ ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗಗಳಲ್ಲಿ ಮತ್ತು ಬಾಂಗ್ಲಾದೇಶದವರೆಗೆ ನಡುಕ ಉಂಟಾಗಿತ್ತು. ಅದೇ ದಿನ ಬೆಳಿಗ್ಗೆ 8: 45 ಕ್ಕೆ ಲೋವರ್ ಅಸ್ಸಾಂನ ಗೋಲ್ಪಾರದಲ್ಲಿ 14 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು. ಮೇಘಾಲಯದ ತುರಾದಿಂದ ಉತ್ತರಕ್ಕೆ 71 ಕಿ.ಮೀ ದೂರದಲ್ಲಿ ಭೂಕಂಪದ ಅನುಭವವಾಗಿತ್ತು ಮತ್ತು ರಾಜ್ಯದಲ್ಲೂ ನಡುಕ ಉಂಟಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (ಆರ್‌ಎಂಸಿ) ಉಪ ನಿರ್ದೇಶಕ ಸಂಜಯ್ ಒನಿಲ್ ಶಾ ಮಾಹಿತಿ ನೀಡಿದ್ದರು.

ಇದನ್ನೂ ಓದಿ- Earthquake: ದೆಹಲಿಯಲ್ಲಿ ಮತ್ತೆ ಕಂಪಿಸಿದ ಭೂಮಿ, ಪಂಜಾಬಿ ಬಾಗ್ ಪ್ರದೇಶದಲ್ಲಿ ಭೂಕಂಪದಿಂದಾಗಿ ಆತಂಕ

ವಾಸ್ತವವಾಗಿ, ಭೂಕಂಪಗಳ ವಿಷಯದಲ್ಲಿ ಈಶಾನ್ಯ ಭಾರತವು ಬಹಳ ಸೂಕ್ಷ್ಮ ಪ್ರದೇಶವಾಗಿದೆ. ಭೂಕಂಪದ ನಡುಕ ಇಲ್ಲಿ ಪುನರಾವರ್ತಿತವಾಗಿ ಕಂಡುಬರುತ್ತದೆ. ಏಪ್ರಿಲ್ 28 ರಂದು ಸಹ ಇಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News