IND VS SL: ಭಾರತ ಹಾಗೂ ಶ್ರೀಲಂಕಾ ಸಿರೀಸ್ (India Tour Of Sri Lanka) ನ ಶೆಡ್ಯೂಲ್ ಕೊರೊನಾ ವೈರಸ್ (Coronavirus) ಕಾರಣ ಮತ್ತೊಮ್ಮೆ ಬದಲಾವಣೆ ಕಂಡಿದೆ. ಖಚಿತ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಉಭಯ ದೇಶಗಳ ನಡುವಿನ ಏಕದಿನ ಸರಣಿ ಜುಲೈ 18ರಿಂದ ಆರಂಭಗೊಳ್ಳಲಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಶುಕ್ರವಾರ ಸರಣಿ ಜುಲೈ 17 ರಿಂದ ಆರಂಭಗೊಳ್ಳಲಿದೆ ಎನ್ನಲಾಗಿತ್ತು. ಆದರೆ ಇದೀಗ ಎರಡನೇ ಬಾರಿ ಶೆಡ್ಯೂಲ್ ನಲ್ಲಿ ಬದಲಾವಣೆ ಮಾಡಲಾಗಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ವತಿಯಿಂದ ಶೀಘ್ರದಲ್ಲಿಯೇ ಬದಲಾದ ಶೆಡ್ಯೂಲ್ ಜಾರಿಗೊಳ್ಳಲಿದೆ.
#IndvsSL ODI series to start by July 18. Dates likely to be 18, 20, 22. T20Is likely to be on 24, 25,27 of July, says BCCI sources. Exact schedule to be out soon.
— G. S. Vivek (@GSV1980) July 10, 2021
ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಮೂರು ದಿನಗಳ ಏಕದಿನ ಸರಣಿ ಜುಲೈ 13ರಿಂದ ಆರಂಭಗೊಳ್ಳಬೇಕಿತ್ತು. ಆದರೆ, ಶ್ರೀಲಂಕಾ ಕ್ರಿಕೆಟ್ (Cricket) ತಂಡದ ಇಬ್ಬರು ಸಿಬ್ಬಂದಿಗಳು ಕೋರೋನಾ ಸೋಂಕಿಗೆ ಗುರಿಯಾದ ಕಾರಣ ಸರಣಿಯ ಮೇಲೆ ಕಾರ್ಮೋಡ ಕವಿದಿತ್ತು. ಆದರೆ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡದ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿರುವ ಕುರಿತು ಮಾಹಿತಿ ನೀಡಿತ್ತು. ಆದರೆ, ಆಟಗಾರರ ಹಿತರಕ್ಷಣೆಯ ಹಿನ್ನೆಲೆ ಸರಣಿಯನ್ನು ಮುಂದುಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ- IND VS SL: ಕೊರೊನಾ ಕಾರಣ ಭಾರತ-ಶ್ರೀಲಂಕಾ ಸರಣಿ ಮೇಲೆ ಬಿತ್ತು ಬ್ರೇಕ್! ಇಲ್ಲಿದೆ ಹೊಸ ಶೆಡ್ಯೂಲ್!
ಜುಲೈ 18 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ
ಸರಣಿ (India Vs Sri Lanka ODI Series) ಆರಂಭದ ಕುರಿತು ಶುಕ್ರವಾರ ಪ್ರಕಟಗೊಂಡಿದ್ದ ವರದಿಯೊಂದರ ಪ್ರಕಾರ ಸರಣಿ ಜುಲೈ 17 ರಿಂದ ಆರಂಭಗೊಳ್ಳಲಿದೆ ಎಂಬ ಮಾಹಿತಿ ಲಭಿಸಿತ್ತು. ಆದರೆ, ಈ ಏಕದಿನ ಸರಣಿ ಜುಲೈ 18ರಿಂದ ಆರಂಭಗೊಳ್ಳುವುದು ಇದೀಗ ಬಹುತೇಕ ಖಚಿತವಾಗಿದೆ. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವತಿಯಿಂದ ಇನ್ನೂ ಬದಲಾದ ಶೆಡ್ಯೂಲ್ ಬಿಡುಗಡೆ ಮಾಡಲಾಗಿಲ್ಲ. ಜುಲೈ 18 ರಿಂದ ಉಭಯ ದೇಶಗಳ ನಡುವಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಉಭಯ ತಂಡಗಳ ನಡುವೆ ಮೊದಲ ಪಂದ್ಯ ಜುಲೈ 18, ಎರಡನೇ ಪಂದ್ಯ ಜುಲೈ 20 ಹಾಗೂ ಮೂರನೇ ಪಂದ್ಯ ಜುಲೈ 22ರಂದು ನಡೆಯುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ-IPL 2021: ಎಂ.ಎಸ್.ಧೋನಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
ಈ ಏಕದಿನ ಸರಣಿಯ ಬಳಿಕ ಎರಡೂ ಪಂದ್ಯಗಳ ನಡುವೆ T20 ಸರಣಿಯ ಮೂರು ಪಂದ್ಯಗಳು ನಡೆಯಲಿವೆ. T20 ಸರಣಿಯ ಮೊದಲ ಪಂದ್ಯ ಜುಲೈ 24 ರಂದು ನಡೆದರೆ, ಜುಲೈ 25 ಮತ್ತು ಜುಲೈ 27 ರಂದು ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ನಡೆಯುವ ನಿರೀಕ್ಷೆ ಇದೆ. ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ಸಂಜೆ ಅಥವಾ ಭಾನುವಾರ ಬೆಳಗ್ಗೆ ಹೊಸ ಶೆಡ್ಯೂಲ್ ಜಾರಿಮಾಡಲಿದೆ ಎಂಬ ನಿರೀಕ್ಷೆ ಇದೆ.
ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.