ಸಣ್ಣ ಉಳಿತಾಯದಿಂದಲೇ ಗಳಿಸಬಹುದು ದೊಡ್ದಲಾಭ , ನೀವೂ ಆಗಬಹುದು ಕೋಟ್ಯಾಧಿಪತಿ

ಸಣ್ಣ ಉಳಿತಾಯ ಯೋಜನೆಗಳಲ್ಲಿ  ನಿರಂತರವಾಗಿ ಹಣವನ್ನು ಠೇವಣಿ ಮಾಡುತ್ತಿದ್ದರೆ, ಕ್ರಮೇಣ ಅದು ಕೂಡಾ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸಬಹುದು. ಇದು ಹೇಳುವುದಕ್ಕೆ ಮಾತ್ರ ಸಣ್ಣ ಉಳಿತಾಯ ಯೋಜನೆ ಆದರೆ ಇದರಲ್ಲಿ ಸಿಗುವ ಬಡ್ಡಿ ಅಧಿಕವಾಗಿರುತ್ತದೆ. 

Written by - Ranjitha R K | Last Updated : Jul 12, 2021, 07:52 PM IST
  • ಸಣ್ಣ ಉಳಿತಾಯ ಯೋಜನೆಗಳಲ್ಲಿ ನಿರಂತರವಾಗಿ ಹಣ ಹೂಡಿದರೆ ಕೋಟ್ಯಾಧಿಪತಿಯಾಗಬಹುದು.
  • ಹೇಳುವುದಕ್ಕೆ ಮಾತ್ರ ಸಣ್ಣ ಉಳಿತಾಯ ಯೋಜನೆ ಆದರೆ ಇದರಲ್ಲಿ ಸಿಗುವ ಬಡ್ಡಿ ಅಧಿಕವಾಗಿರುತ್ತದೆ.
  • ಸಣ್ಣ ಉಳಿತಾಯ ಯೋಜನೆಗೆ ಸರ್ಕಾರ ಗ್ಯಾರಂಟಿ ನೀಡುತ್ತದೆ
ಸಣ್ಣ ಉಳಿತಾಯದಿಂದಲೇ ಗಳಿಸಬಹುದು ದೊಡ್ದಲಾಭ , ನೀವೂ ಆಗಬಹುದು ಕೋಟ್ಯಾಧಿಪತಿ  title=
ಹೇಳುವುದಕ್ಕೆ ಮಾತ್ರ ಸಣ್ಣ ಉಳಿತಾಯ ಯೋಜನೆ ಆದರೆ ಇದರಲ್ಲಿ ಸಿಗುವ ಬಡ್ಡಿ ಅಧಿಕವಾಗಿರುತ್ತದೆ. (photo india.com)

ನವದೆಹಲಿ : ಸಣ್ಣ ಉಳಿತಾಯ ಖಾತೆಯಿಂದ ಏನು ಪ್ರಯೋಜನ ಎಂದು ಎಷ್ಟೋ  ಬಾರಿ ಅನಿಸಬಹುದು. ಆದರೆ ವಾಸ್ತವವಾಗಿ ಅದರಲ್ಲಿ ಲಭ್ಯವಿರುವ ಪ್ರಯೋಜನಗಳು  ಸಣ್ಣದಾಗಿರುವುದಿಲ್ಲ. ಸಣ್ಣ ಉಳಿತಾಯ ಯೋಜನೆಗಳಲ್ಲಿ (Small Saving Scheme) ನಿರಂತರವಾಗಿ ಹಣವನ್ನು ಠೇವಣಿ ಮಾಡುತ್ತಿದ್ದರೆ, ಕ್ರಮೇಣ ಅದು ಕೂಡಾ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸಬಹುದು. ಇದು ಹೇಳುವುದಕ್ಕೆ ಮಾತ್ರ ಸಣ್ಣ ಉಳಿತಾಯ ಯೋಜನೆ ಆದರೆ ಇದರಲ್ಲಿ ಸಿಗುವ ಬಡ್ಡಿ ಅಧಿಕವಾಗಿರುತ್ತದೆ. ಸ್ಥಿರ ಠೇವಣಿಗಳ ವಿಷಯಕ್ಕೆ ಬಂದಾಗ, ಗಳಿಕೆಯ ಅನೇಕ ಮೂಲಗಳು ಒಟ್ಟಿಗೆ ಬರುತ್ತವೆ. ಈ ಕಾರಣದಿಂದಾಗಿ, ಈ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ಮಿತಿಯಿರುವುದಿಲ್ಲ. ಈ ಕಾರಣದಿಂದಾಗಿ, ಈ ಸಣ್ಣ ಉಳಿತಾಯ ಯೋಜನೆಯಿಂದ ನೀವು ಕೋಟ್ಯಾಧಿಪತಿಗಳಾಗಬಹುದು. 

ಉದಾಹರಣೆಗೆ, ಪಿಪಿಎಫ್ (PPF) ಖಾತೆಯಲ್ಲಿ ಗರಿಷ್ಠ ಠೇವಣಿ ಮಿತಿ 1.5 ಲಕ್ಷ ರೂಪಾಯಿಗಳು. ಹಣಕಾಸು ವರ್ಷದಲ್ಲಿ ನೀವು ಈ ಖಾತೆಯಲ್ಲಿ ಗರಿಷ್ಠ 1.5 ಲಕ್ಷ ರೂ ಉಳಿತಾಯ ಮಾಡಬಹುದು. ಈ ಸಣ್ಣ ಉಳಿತಾಯ ಯೋಜನೆಗೆ ಸರ್ಕಾರ ಗ್ಯಾರಂಟಿ ನೀಡುತ್ತದೆ. ಅಲ್ಲದೆ, ತೆರಿಗೆ ವಿನಾಯಿತಿಯ ಲಾಭ ಕೂಡಾ ಇದೆ. ಹೂಡಿಕೆದಾರರು ನಿರ್ದಿಷ್ಟ ಸಮಯದವರೆಗೆ ಅದರಲ್ಲಿ ಹಣವನ್ನು ಠೇವಣಿ ಇಟ್ಟರೆ, ಅದರಿಂದ ಸಾಕಷ್ಟು ಲಾಭವನ್ನು ಪಡೆಯಬಹುದು. ಈ ಲಾಭ ಗ್ರಾಹಕರು ಠೇವಣಿ ಮಾಡಿದ ಮೊತ್ತವನ್ನು ಅವಲಂಬಿಸಿರುತ್ತದೆ. ಅಂದರೆ  ಖಾತೆಯಲ್ಲಿ ಎಷ್ಟು ಮೊತ್ತವನ್ನು ಠೇವಣಿ ಇಡಬೇಕು ಮತ್ತು ಎಷ್ಟು ಸಮಯದವರೆಗೆ ಇಡಬೇಕು ಅನ್ನುವುದನ್ನು ಕೂಡಾ ಅವಲಂಬಿಸಿರುತ್ತದೆ. 

ಇದನ್ನೂ ಓದಿ : Big Relief: ಜೂನ್ ತಿಂಗಳಿನಲ್ಲಿ ಇಳಿಕೆಯಾದ ಹಣದುಬ್ಬರ, ಆರ್ಥಿಕತೆಯ ಕುರಿತೂ ಕೂಡ ಬಂತು ಗುಡ್ ನ್ಯೂಸ್

ಪ್ರಸ್ತುತ, ಪಿಪಿಎಫ್ ಖಾತೆಯ (PPF account) ಮೇಳೆ ಶೇಕಡಾ 7.1 ದರದಲ್ಲಿ ಬಡ್ಡಿ ಸಿಗುತ್ತದೆ. ಈ ಮಿತಿಯನ್ನು ಜುಲೈನಿಂದ ಸೆಪ್ಟೆಂಬರ್ ವರೆಗೆ ನಿಗದಿಪಡಿಸಲಾಗಿದೆ. ಇದು ಬ್ಯಾಂಕಿನ ಎಫ್‌ಡಿ (FD) ದರಕ್ಕಿಂತ ಹೆಚ್ಚಿನದಾಗಿದೆ. ಇದರಲ್ಲಿ, ತೆರಿಗೆ ವಿನಾಯಿತಿಯೂ ಇದೆ. ಹೂಡಿಕೆಯ ಮಿತಿಯನ್ನು ಒಂದು ವರ್ಷದಲ್ಲಿ 1.5 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಮೆಚ್ಯುರಿಟಿ  ಸಮಯದಲ್ಲಿ ಪಡೆದ ಮೊತ್ತಕ್ಕೆ ಯಾವುದೇ ರೀತಿಯ ತೆರಿಗೆ (Income tax) ವಿಧಿಸಲಾಗುವುದಿಲ್ಲ. ಇದು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಒಬ್ಬ ವ್ಯಕ್ತಿಯು ಕೆಲಸವನ್ನು ಪ್ರಾರಂಭಿಸುವುದರ ಜೊತೆಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಅವನು ಮಿಲಿಯನೇರ್ ಆಗಬಹುದು ಎನ್ನುತ್ತಾರೆ ತಜ್ಞರು.

ನೀವು ಪಿಪಿಎಫ್ ಖಾತೆಯಲ್ಲಿ ತಿಂಗಳಿಗೆ 10,000 ರೂ. ಹೂಡಿಕೆ ಮಾಡಿದರೆ, 25 ವರ್ಷಗಳ ನಂತರ ನಿಮಗೆ ಶೇಕಡಾ 7.1 ರಷ್ಟು ಬಡ್ಡಿದರದೊಂದಿಗೆ 1 ಕೋಟಿ ರೂ. ಸಿಗುತ್ತದೆ. ಆದರೆ, ಇದಕ್ಕಾಗಿ ಪಿಪಿಎಫ್ ಖಾತೆಯಲ್ಲಿ ಗರಿಷ್ಠ ಮೊತ್ತವನ್ನು ಜಮಾ ಮಾಡಬೇಕು ಎನುವುದನ್ನು ಸ್ಪಷ್ಟವಾಗಿ ತಿಳಿದುಕೊಂಡಿರಬೇಕು. ಹೂಡಿಕೆದಾರರು ಪ್ರತಿ ತಿಂಗಳು 12,500 ರೂಗಳನ್ನು ಪಿಪಿಎಫ್ ಖಾತೆಯಲ್ಲಿ 15 ವರ್ಷಗಳವರೆಗೆ ಠೇವಣಿ ಇಟ್ಟರೆ, ಮುಕ್ತಾಯದ ಸಮಯದಲ್ಲಿ ಶೇಕಡಾ 7.1 ರಷ್ಟು ಬಡ್ಡಿದರದಲ್ಲಿ (Interet rate) 43 ಲಕ್ಷ ರೂ. ಸಿಗಲಿದೆ.  ಮಿತಿಯನ್ನು 20 ವರ್ಷಗಳಿಗೆ ಹೆಚ್ಚಿಸಿದರೆ ಮತ್ತು ವಾರ್ಷಿಕ ಹೂಡಿಕೆ 1.5 ಲಕ್ಷ ರೂ. ಆಗಿದ್ದರೆ, ಒಟ್ಟು ಮೊತ್ತ 73 ಲಕ್ಷ ರೂ ಸಿಗಲಿದೆ. ಅದೇ ರೀತಿ, ಅದರ  ಮಿತಿಯನ್ನು 25 ವರ್ಷಗಳಿಗೆ ಹೆಚ್ಚಿಸಿದರೆ, ಮುಕ್ತಾಯದ ಸಮಯದಲ್ಲಿ ಒಟ್ಟು ಮೊತ್ತವು 1 ಕೋಟಿ 16 ಲಕ್ಷ 60 ಸಾವಿರ ರೂ. ಸಿಗಲಿದೆ. 

ಇದನ್ನೂ ಓದಿ : PM Kisan : 9ನೇ ಕಂತು ಬಿಡುಗಡೆಗೆ ಮುನ್ನ ಯೋಜನೆಯಲ್ಲಾದ ಬದಲಾವಣೆ ಗೊತ್ತಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News