UIDAI Aadhaar Alert: ಆಧಾರ್‌ಗೆ ಸಂಬಂಧಿಸಿದಂತೆ ಮರೆತೂ ಕೂಡ ಈ ತಪ್ಪುಗಳನ್ನು ಮಾಡಲೇಬೇಡಿ

UIDAI Aadhaar Alert latest news: ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡುವ ಮೂಲಕ ಯುಐಡಿಎಐ ಜನರಿಗೆ ವಂಚನೆಯನ್ನು ತಪ್ಪಿಸಲು ಸಲಹೆ ನೀಡಿದೆ. ಯುಐಡಿಎಐ ಟ್ವೀಟ್ನಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

Written by - Yashaswini V | Last Updated : Jul 13, 2021, 10:35 AM IST
  • ಯುಐಡಿಎಐ (UIDAI) ಜನರಿಗೆ ವಂಚನೆಯನ್ನು ತಪ್ಪಿಸಲು ಸಲಹೆ ನೀಡಿದೆ
  • ಯುಐಡಿಎಐ ಟ್ವೀಟ್ನಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ
  • ಇದರೊಂದಿಗೆ ಜನರು ಈ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಲು ಸಹ ಕೇಳಲಾಗಿದೆ
UIDAI Aadhaar Alert: ಆಧಾರ್‌ಗೆ ಸಂಬಂಧಿಸಿದಂತೆ ಮರೆತೂ ಕೂಡ ಈ ತಪ್ಪುಗಳನ್ನು ಮಾಡಲೇಬೇಡಿ title=
ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ, ಯುಐಡಿಎಐನ ಈ ಸೂಚನೆಗಳ ಬಗ್ಗೆ ತಪ್ಪದೇ ತಿಳಿಯಿರಿ

ನವದೆಹಲಿ: UIDAI Aadhaar Alert latest news- ಪ್ರಸ್ತುತ ಅವಧಿಯಲ್ಲಿ ಆಧಾರ್ ಕಾರ್ಡ್‌ (Aadhaar Card) ಬಹುಮುಖ್ಯ ದಾಖಲೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆಯೂ ವರದಿಗಳು ಬರುತ್ತಿವೆ. ಆಧಾರ್ ಕಾರ್ಡ್‌ನಲ್ಲಿ  ಎಲ್ಲಾ ಪ್ರಮುಖ ಮಾಹಿತಿಯು ಲಭ್ಯವಿರುವ ಕಾರಣ ವಂಚಕರು ಅದರ ಮೂಲಕ ಜನರನ್ನು ಸುಲಭವಾಗಿ ಮೋಸಗೊಳಿಸಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಇಂತಹ ವಂಚನೆಗಳನ್ನು ತಪ್ಪಿಸಲು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಜನರಿಗೆ ಕೆಲವು ಸಲಹೆಗಳನ್ನು ನೀಡಿದೆ. 

ಸಾರ್ವಜನಿಕ ಕಂಪ್ಯೂಟರ್ ಅಥವಾ ಕೆಫೆಯಿಂದ 'ಆಧಾರ್' ಡೌನ್‌ಲೋಡ್ ಮಾಡುವಾಗ ಜಾಗರೂಕರಾಗಿರಿ:
ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಹಂಚಿಕೊಳ್ಳುವ ಮೂಲಕ ಯುಐಡಿಎಐ (UIDAI) ಜನರಿಗೆ ವಂಚನೆಯನ್ನು ತಪ್ಪಿಸಲು ಸಲಹೆ ನೀಡಿದೆ. ಯುಐಡಿಎಐ ಟ್ವೀಟ್ನಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಇದರೊಂದಿಗೆ ಜನರು ಈ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಲು ಸಹ ಕೇಳಲಾಗಿದೆ. ಯುಐಡಿಎಐ ಪ್ರಕಾರ, ನೀವು ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಸಾರ್ವಜನಿಕ ಕಂಪ್ಯೂಟರ್ ಅಥವಾ ಕೆಫೆಯಿಂದ ಡೌನ್‌ಲೋಡ್ ಮಾಡುತ್ತಿದ್ದರೆ, ಕೆಲಸ ಮುಗಿದ ತಕ್ಷಣ ಅದನ್ನು ಅಲ್ಲಿಂದ ಅಳಿಸಿ. ಆಧಾರ್ ಕಾರ್ಡ್‌ನ ಇ-ನಕಲನ್ನು ಸಾರ್ವಜನಿಕ ಕಂಪ್ಯೂಟರ್‌ನಲ್ಲಿ ಬಿಡುವುದರಿಂದ ನಿಮಗೆ ದೊಡ್ಡ ನಷ್ಟವಾಗಬಹುದು ಎಂದು ಎಚ್ಚರಿಸಿದೆ.

ಇದನ್ನೂ ಓದಿ- Aadhaar ಕಾರ್ಡ್‌ಗೆ ಸಂಬಂಧಿಸಿದ ಈ ಎರಡು ಸೇವೆಗಳನ್ನು ಸ್ಥಗಿತಗೊಳಿಸಿದ UIDAI, ನಿಮ್ಮ ಮೇಲೆ ನೇರ ಪರಿಣಾಮ

ಆಧಾರ್‌ಗೆ ಸಂಬಂಧಿಸಿದಂತೆ ಮರೆತೂ ಕೂಡ ಈ ತಪ್ಪುಗಳನ್ನು ಮಾಡಲೇಬೇಡಿ:
>> ನಿಮ್ಮ ಒಟಿಪಿಯನ್ನು ಬೇರೆ ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ. 
>> ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ (Aadhaar Card) ಅನ್ನು ಲಿಂಕ್ ಮಾಡಲು ಇತರರನ್ನು ಎಂದಿಗೂ ಅನುಮತಿಸಬೇಡಿ. 
>> ಇದು ಮಾತ್ರವಲ್ಲ, ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೊಬ್ಬರ ಸಂಖ್ಯೆಯಲ್ಲಿ ನೋಂದಾಯಿಸುವುದನ್ನು ತಪ್ಪಿಸಲು ಪ್ರಯತ್ನಿಸಿ. 
>> ಆಧಾರ್ ಕಾರ್ಡ್‌ನ ವರ್ಚುವಲ್ ಐಡಿಯನ್ನು ಬಳಸಲು ಪ್ರಯತ್ನಿಸಿ. 
>> ನಿಮ್ಮ ಬಯೋಮೆಟ್ರಿಕ್ ಅನ್ನು ಎಲ್ಲಾ ಸಮಯದಲ್ಲೂ ಲಾಕ್ ಮಾಡಲು ಪ್ರಯತ್ನಿಸಿ.

ಇದನ್ನೂ ಓದಿ- Fake Aadhaar Card: ನಿಮ್ಮ ಆಧಾರ್ ಕಾರ್ಡ್ ಅಸಲಿಯೇ/ನಕಲಿಯೇ? ಈ ರೀತಿ ಪರಿಶೀಲಿಸಿ

ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸಲು, ಅದನ್ನು ಈ ರೀತಿ ಲಾಕ್ ಮಾಡಿ:
ಆಧಾರ್ ಕಾರ್ಡ್ ಲಾಕ್ ಮಾಡಲು, ನಿಮ್ಮ ಫೋನ್‌ನಿಂದ ನೀವು 1947 ಗೆ ಸಂದೇಶ ಕಳುಹಿಸಬಹುದು. ಸಂದೇಶ ಕಳುಹಿಸಿದ ನಂತರ ನೀವು ಒಟಿಪಿ ಪಡೆಯುತ್ತೀರಿ. ಒಟಿಪಿ ಸ್ವೀಕರಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆ ಮತ್ತು ಒಟಿಪಿಯನ್ನು ಮತ್ತೊಮ್ಮೆ ಅದೇ ಸಂಖ್ಯೆಗೆ ಕಳುಹಿಸಬೇಕಾಗುತ್ತದೆ. ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಸುಲಭವಾಗಿ ಲಾಕ್ ಆಗುತ್ತದೆ. ಈ ಹಿಂದೆ ಯುಐಡಿಎಐ ಆಧಾರ್ ಕಾರ್ಡ್ ಪರಿಶೀಲಿಸುವ ವಿಧಾನವನ್ನು ಟ್ವೀಟ್ ಮೂಲಕ ವಿವರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News