Retail Direct Gilt Account - ಇನ್ಮುಂದೆ ಜನಸಾಮಾನ್ಯರು ಕೂಡ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು, RBI ನೀಡುತ್ತಿದೆ ನಿಮಗೀ ಅವಕಾಶ

Retail Direct Gilt Account - ಸರ್ಕಾರಿ ಸೆಕ್ಯೂರಿಟಿಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದವರಿಗೆ RBI ಚಿಲ್ಲರೆ ನೇರ ಹೂಡಿಕೆ ಖಾತೆ (RBI Retail Direct Gilt Account) ಒನ್ ಸ್ಟಾಪ್ ಸೊಲ್ಯೂಶನ್ ಆಗಿದೆ. ಸರ್ಕಾರಿ ಭದ್ರತೆಗಳಲ್ಲಿ ಜನಸಾಮಾನ್ಯರ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ವರ್ಷದ ಫೆಬ್ರುವರಿಯಲ್ಲಿ ಈ ಖಾತೆಯನ್ನು ರೂಪಿಸಲಾಗಿದೆ.

Written by - Nitin Tabib | Last Updated : Jul 13, 2021, 05:27 PM IST
  • ಚಿಲ್ಲರೆ ಹೂಡಿಕೆದಾರರು ಈಗ ನೇರವಾಗಿ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು.
  • ಚಿಲ್ಲರೆ ಹೂಡಿಕೆದಾರರು ಇದೀನ ಆರ್‌ಬಿಐನವಿಶೇಷ ಯೋಜನೆಯಡಿ ನೋಂದಾಯಿಸಿಕೊಳ್ಳುವ ಮೂಲಕ ನೇರ ಗಿಲ್ಟ್ ಖಾತೆಯನ್ನು ಹೊಂದಬಹುದಾಗಿದೆ.
  • ತನ್ಮೂಲಕ ಅವರು ನೇರವಾಗಿ ಗಿಲ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
Retail Direct Gilt Account - ಇನ್ಮುಂದೆ ಜನಸಾಮಾನ್ಯರು ಕೂಡ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು, RBI ನೀಡುತ್ತಿದೆ ನಿಮಗೀ ಅವಕಾಶ title=
Retail Direct Gilt Account (File Photo)

Retail Direct Gilt Account - ಚಿಲ್ಲರೆ ಹೂಡಿಕೆದಾರರು ಈಗ ನೇರವಾಗಿ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು. ಚಿಲ್ಲರೆ ಹೂಡಿಕೆದಾರರು ಇದೀನ ಆರ್‌ಬಿಐನ (RBI)ವಿಶೇಷ ಯೋಜನೆಯಡಿ ನೋಂದಾಯಿಸಿಕೊಳ್ಳುವ ಮೂಲಕ ನೇರ ಗಿಲ್ಟ್ ಖಾತೆಯನ್ನು (Retail Direct Gilt Account) ಹೊಂದಬಹುದಾಗಿದೆ. ತನ್ಮೂಲಕ  ಅವರು ನೇರವಾಗಿ ಗಿಲ್ಟ್ ಫಂಡ್‌ಗಳಲ್ಲಿ (Gilt Fund) ಹೂಡಿಕೆ ಮಾಡಬಹುದು. ಹೂಡಿಕೆದಾರರಿಗೆ ಬಳಿ ಭಾರತದಲ್ಲಿ ಉಳಿತಾಯ ಖಾತೆ (ರೂ. ಗಳಲ್ಲಿ), ಪ್ಯಾನ್, ಮಾನ್ಯ ಇ-ಮೇಲ್, ಕೆವೈಸಿ ದಾಖಲೆಗಳು, ನೋಂದಾಯಿತ ಮೊಬೈಲ್ ಸಂಖ್ಯೆ ಇದ್ದರೆ, ಅವರು ಈ ಖಾತೆಯನ್ನು ತೆರೆಯಬಹುದು.

RBI ನ RDG ಖಾತೆ ತೆರೆಯಬಹುದು
ಸರ್ಕಾರಿ ಸೆಕ್ಯೂರಿಟಿಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದವರಿಗೆ RBI ಚಿಲ್ಲರೆ ನೇರ ಹೂಡಿಕೆ ಖಾತೆ ಒನ್ ಸ್ಟಾಪ್ ಸೊಲ್ಯೂಶನ್ ಆಗಿದೆ. ಸರ್ಕಾರಿ ಭದ್ರತೆಗಳಲ್ಲಿ ಜನಸಾಮಾನ್ಯರ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ವರ್ಷದ ಫೆಬ್ರುವರಿಯಲ್ಲಿ ಈ ಖಾತೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಚಿಲ್ಲರೆ ಹೂಡಿಕೆದಾರರು ಈಗ ಆರ್‌ಬಿಐನ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಚಿಲ್ಲರೆ ನೇರ ಗಿಲ್ಟ್ ಅಕೌಂಟ್ (Retail Direct Gilt Account) ತೆರೆಯಬಹುದು ಮತ್ತು ನಿರ್ವಹಿಸಬಹುದು. ಇದಕ್ಕಾಗಿ ಡೆಡಿಕೇಟೆಡ್  ಆನ್‌ಲೈನ್ ಪೋರ್ಟಲ್ ಮೂಲಕ ಈ ಸೌಲಭ್ಯವು ಉಚಿತವಾಗಿ ಲಭ್ಯವಿರುತ್ತದೆ. ಆದಾಗ್ಯೂ, ಹೂಡಿಕೆದಾರರು ಪೇಮೆಂಟ್ ಗೇಟ್ ವೆ ಶುಲ್ಕ ಪಾವತಿಸಬೇಕಾಗಲಿದೆ.

ಇದನ್ನೂ ಓದಿ- SBI Alert! ನಿಮ್ಮ ಫೋನ್ ಗೂ ಈ ಸಂದೇಶ ಬಂದಿದೇಯಾ? ಹುಷಾರ್ ಕ್ಲಿಕ್ಕಿಸಬೇಡಿ

ಜಂಟಿಯಾಗಿ ಕೂಡ ಈ ಖಾತೆಯನ್ನು ತೆರೆಯಬಹುದು
ಈ ಕುರಿತು RBI ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ನೊಂದಾಯಿತ ಹೂಡಿಕೆದಾರರು ಪ್ರಾಥಮಿಕವಾಗಿ ಜಾರಿಯಾಗಿರುವ ಸರ್ಕಾರಿ ಸಿಕ್ಯೂರಿಟಿಗಳಿಗಾಗಿ ಆನ್ಲೈನ್ ಪೋರ್ಟಲ್ ಬಳಕೆ ಮಾಡಬಹುದು. ಇದಲ್ಲದೆ ಅವರು NDS-OM  ಬಳಕೆ ಕೂಡ ಮಾಡಬಹುದು. NDS-OM, RBI ಸ್ಕ್ರೀನ್ ಬೇಸ್ಡ್ ಹಾಗೂ ಗೌಪ್ಯ ಇಲೆಕ್ಟ್ರಾನಿಕ್ ಮ್ಯಾಚಿಂಗ್ ಸಿಸ್ಟಂ ಆಗಿದೆ ಮತ್ತು ಇದು ಸೆಕೆಂಡರಿ ಮಾರ್ಕೆಟ್ ನಲ್ಲಿ ಸರ್ಕಾರಿ ಸಿಕ್ಯೋರೀಟಿಗಳ (Government Securities) ಟ್ರೇಡಿಂಗ್ ನಿರ್ವಹಿಸುತ್ತದೆ. RBI ಒದಗಿಸಿರುವ ಈ ಸೌಲಭ್ಯದಿಂದ ಚಿಲ್ಲರೆ ಹೂಡಿಕೆದಾರರ ಸರ್ಕಾರಿ ಭದ್ರತೆಗಳಲ್ಲಿ ಪಾಲುದಾರಿಕೆ ಹೆಚ್ಚಾಗಲಿದೆ.

ಇದನ್ನೂ ಓದಿ- Just For First Time MF Investors: ನೂತನ ಮ್ಯೂಚವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿವೆ ಕೆಲ ಸಲಹೆಗಳು

ಈ ಯೋಜನೆಯ ಘೋಷಣೆ ನಂತರ ಮಾಡಲಾಗುವುದು ಎಂದು RBI ಹೇಳಿದೆ. RDG ಖಾತೆಯನ್ನು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ತೆರೆಯಬಹುದಾಗಿದೆ. ಇತರೆ ಹೂಡಿಕೆದಾರರ ಜೊತೆಗೂ ಕೂಡ ಈ ಖಾತೆಯನ್ನು ತೆರೆಯಬಹುದು. 'ಆನ್ಲೈನ್ ಪೋರ್ಟಲ್ ನೊಂದಾಯಿತ ಬಳಕೆದಾರರ ಸರ್ಕಾರಿ ಭದ್ರತೆಗಳ ಪ್ರೈಮರಿ ಇಶ್ಯೂಯೆನ್ಸ್ ವರೆಗಿನ ತಲುಪು ಹಾಗೂ NDS-OM ತಲುಪನ್ನು ಕೂಡ ಸುನಿಶ್ಚಿತಗೊಳಿಸಲಿದೆ. 

ಇದನ್ನೂ ಓದಿ-Big Relief: ಜೂನ್ ತಿಂಗಳಿನಲ್ಲಿ ಇಳಿಕೆಯಾದ ಹಣದುಬ್ಬರ, ಆರ್ಥಿಕತೆಯ ಕುರಿತೂ ಕೂಡ ಬಂತು ಗುಡ್ ನ್ಯೂಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News