ನವದೆಹಲಿ : ತೈಲ ಚಿಲ್ಲರೆ ವ್ಯಾಪಾರಿಗಳ ದೈನಂದಿನ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಶನಿವಾರ (ಜುಲೈ 17) 30 ಪೈಸೆ ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ, ಈ ತಿಂಗಳ ಮೊದಲ 17 ದಿನಗಳಲ್ಲಿ ಇದು ಪೆಟ್ರೋಲ್ ಬೆಲೆಯಲ್ಲಿ 10 ನೇ ಭಾರೀ ಏರಿಕೆ ಆಗಿದೆ.
ಮತ್ತೊಂದೆಡೆ, ಜುಲೈ 17 ರಂದು ದೆಹಲಿಯಲ್ಲಿ ಡೀಸೆಲ್ ಬೆಲೆ(Diesel Prices) ಸ್ಥಿರವಾಗಿ ಉಳಿದಿದೆ. ಇತ್ತೀಚಿನ ಬೆಲೆಗಳ ಪರಿಷ್ಕರಣೆಯೊಂದಿಗೆ ಪೆಟ್ರೋಲ್ ಈಗ ಪ್ರತಿ ಲೀಟರ್‌ಗೆ 101.84 ರೂ.ಗೆ ಚಿಲ್ಲರೆ ಮಾರಾಟವಾಗುತ್ತಿದ್ದರೆ, ಡೀಸೆಲ್ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 89.87 ರೂ. ಇದೆ.
ಇದನ್ನೂ ಓದಿ : ಉಚಿತ ವೃತ್ತಿ ತರಬೇತಿ ಪಡೆಯುವುದಕ್ಕಾಗಿ ಸರ್ಕಾರದ ಈ ಯೋಜನೆಯಡಿ ನೋಂದಾಯಿಸಿಕೊಳ್ಳಿ, ಯುವಕರ ಮುಂದಿದೆ ಸುವರ್ಣಾವಕಾಶ
ದೆಹಲಿಗೆ ಹೋಲಿಸಿದರೆ ಮುಂಬಯಿಯಲ್ಲಿ ಪೆಟ್ರೋಲ್(Petrol Prices) ಮತ್ತು ಡೀಸೆಲ್ ಸ್ವಲ್ಪ ದುಬಾರಿಯಾಗಿದೆ. ಮುಂಬೈ ಅಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ಪ್ರತಿ ಲೀಟರ್‌ಗೆ 107.83 ರೂ. ಮತ್ತು ಲೀಟರ್‌ಗೆ 97.45 ರೂ. ಇದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಲವಾರು ನಗರಗಳಲ್ಲಿ ಪೆಟ್ರೋಲ್ ಬೆಲೆ 110 ರೂ. ಇದೆ.
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆ(Fuel Prices)ಯಲ್ಲಿನ ಬದಲಾವಣೆಗಳನ್ನು ಅನುಸರಿಸಿ ತೈಲ ಚಿಲ್ಲರೆ ವ್ಯಾಪಾರಿಗಳು ಪ್ರತಿದಿನವೂ ಇಂಧನ ದರವನ್ನು ಪರಿಷ್ಕರಿಸಲು ನಿರ್ಧರಿಸಿದ ನಂತರ ಮೇ 18 ರಿಂದ ಪೆಟ್ರೋಲ್ ಬೆಲೆ ಹೆಚ್ಚುತ್ತದೆ.
ಇದನ್ನೂ ಓದಿ : Saral Pension Yojana : LIC ಈ ಯೋಜನೆಯಲ್ಲಿ 40ನೇ ವಯಸ್ಸಿನಲ್ಲಿಯೇ ಪಿಂಚಣಿ ಪಡಿಯಬಹುದು!
ಕಳೆದ ಕೆಲವು ವಾರಗಳಲ್ಲಿ, ದೆಹಲಿ, ಮುಂಬೈ(Mumbai), ಕೋಲ್ಕತಾ ಮತ್ತು ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ. ಜೂನ್ ಕೊನೆಯ ವಾರದಲ್ಲಿ ಪಾಟ್ನಾ ಮತ್ತು ತಿರುವನಂತಪುರಂನಲ್ಲಿ ಪೆಟ್ರೋಲ್ ಬೆಲೆ 100 ರೂ.ಗಿಂತ ಹೆಚ್ಚಾಗಿದೆ.
ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ :
ಕೋಲ್ಕತಾ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 102.08 ರೂ., ಡೀಸೆಲ್ ಬೆಲೆ 93.02 ರೂ.
ಚೆನ್ನೈ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 102.49 ರೂ., ಡೀಸೆಲ್ ಬೆಲೆ 94.39 ರೂ.
ಬೆಂಗಳೂರು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 105.25 ರೂ., ಡೀಸೆಲ್ ಬೆಲೆ 95.26 ರೂ.
ಹೈದರಾಬಾದ್ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 105.83 ರೂ., ಡೀಸೆಲ್ ಬೆಲೆ 97.76 ರೂ.
ಇದನ್ನೂ ಓದಿ : LIC ಈ ಯೋಜನೆಯಲ್ಲಿ 1 ರೂ. ಪ್ರೀಮಿಯಂ ತುಂಬಿ ಪಡೆಯಿರಿ 36 ಸಾವಿರವರೆಗೆ ಪಿಂಚಣಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ