ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಊಹಾಪೋಹಗಳು ಮಧ್ಯೆ, ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಂದು ಸಂಜೆಯ ವೇಳೆಗೆ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ಕುರಿತು ಸೂಚನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಇಂದು ರಾಜೀನಾಮೆ ನೀಡಬಹುದು? ಎಂದು ಹೇಳಾಗುತ್ತಿದೆ.
ರಾಜೀನಾಮೆ ಕುರಿತು ಸಿಎಂ ಯಡಿಯೂರಪ್ಪ ಏನು ಹೇಳಿದ್ದಾರೆ?
ಸಿಎಂ ಬದಲಾವಣೆ ಕುರಿತು ಇಂದಿ ಸಂಜೆ ಹೈಕಮಾಂಡ್ ಸೂಚನೆ ನೀಡಲಿದ್ದಾರೆ. ಅದು ಶೀಘ್ರದಲ್ಲೇ ತಿಳಿಯಲಿದೆ ಎಂದು ಸಿಎಂ ಯಡಿಯೂರಪ್ಪ(BS Yediyurappa) ಹೇಳುತ್ತಾರೆ. ಈ ಸೂಚನೆಗಳಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಕುರಿತು ಕೇಂದ್ರ ನಾಯಕರು ನಿರ್ಧರಿಸುವ ಅಲ್ಲ ಹಕ್ಕುಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Siddaramaiah : ರಾಜ್ಯದಲ್ಲಿ ಭಾರೀ ಮಳೆ : KCET 2021 ಮುಂದೂಡಿ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ
ಆದರೆ, ಜುಲೈ 17 ರಂದು ಸಿಎಂ ಯಡಿಯೂರಪ್ಪ ಅವರು ದೆಹಲಿ ಭೇಟಿಯ ಸಂದರ್ಭದಲ್ಲಿ ರಾಜೀನಾಮೆ(Resignation) ನೀಡುವ ಸುದ್ದಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಮತ್ತೆ ಮುಂದಿನ ತಿಂಗಳು ದೆಹಲಿ ಭೇಟಿ ನೀಡಲಿದ್ದಾರೆ.
ಬಿಜೆಪಿಯ ಕೇಂದ್ರ ನಾಯಕರೊಂದಿಗೆ ಚರ್ಚೆ :
ಸಿಎಂ ಯಡಿಯೂರಪ್ಪ ಅವರ ದೆಹಲಿ ಭೇಟಿ ರಾಜಕೀಯ ವಲಯಗಳಲ್ಲಿ ಚರ್ಚೆಯನ್ನು ಸೃಷ್ಟಿಸಿತ್ತು, ಕರ್ನಾಟಕ(Karnataka)ದ ಸಂಪುಟದಲ್ಲಿ ಪುನರ್ರಚನೆ ನಡೆಯಲಿದೆ. ಮೂಲಗಳ ಪ್ರಕಾರ, ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಬಿಜೆಪಿಯ ಕೇಂದ್ರ ನಾಯಕರ ಭೇಟಿ ನೀಡಿ ರಾಜೀನಾಮೆ ನೀಡಲು ಅನುಮತಿ ಪಡೆಯಲು ಬಂದಿದ್ದರು ಎಂದು ಹಳಲಾಗುತ್ತಿದೆ.
ಸಿಎಂ ಯಡಿಯೂರಪ್ಪ ಅವರ ವಿರೋಧಿಗಳು ಹೇಳಿಕೆಗಳು :
ಪಕ್ಷದಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಬಗ್ಗೆ ಚರ್ಚಿಸಲು ಯಡಿಯೂರಪ್ಪ(BS Yediyurappa) ಅವರನ್ನು ದೆಹಲಿಗೆ ಕರೆಸಲಾಯಿತು ಎಂದು ಯಡಿಯೂರಪ್ಪ ಅವರ ವಿರೋಧಿಗಳು ಹೇಳಿದ್ದಾರೆ. ಅವರು ರಾಜೀನಾಮೆ ನೀಡಬಹುದು ಎಂದು ಕೂಡ ಹೇಳಿದ್ದಾರೆ.
ಇದನ್ನೂ ಓದಿ : Karnataka Unlock 5.O : ರಾಜ್ಯದಲ್ಲಿ ಮತ್ತೆ ಅನ್ಲಾಕ್ 5.O : ನಾಳೆಯಿಂದ ಯಾವುದುಕ್ಕೆಲ್ಲ ಸಡಿಲಿಕೆ?
ಸಿಎಂ ಯಡಿಯೂರಪ್ಪ ಅವರು ಲಿಂಗಾಯತ ಸಮಾಜದಿಂದ ಬಂದವರು. ಮುಖ್ಯಮಂತ್ರಿಗೆ ಅವರ ಸಮಾಜದಿಂದ ಹೆಚ್ಚಿನ ಬೆಂಬಲವಿದೆ. ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದರೆ, ಬಿಜೆಪಿಯಿಂದ ಕರ್ನಾಟಕದ ಹೊಸ ಸಿಎಂ ಆಗುವವರು ಯಾರು? ಎಂಬುದನ್ನು ಈಗ ಕಾದು ನೋಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ