ಲಂಡನ್ : ಯಾರ ಭವಿಷ್ಯವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಬದಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹ ಒಂದು ಪ್ರಕರಣ ಲಂಡನ್ನಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ವ್ಯಕ್ತಿಯು ಹಳೆಯ ಮುರಿದ ಚಮಚವನ್ನು ರಸ್ತೆ ಬದಿಯ ಮಾರುಕಟ್ಟೆಯಿಂದ ಖರೀದಿಸಿ ಅದನ್ನು 12 ಸಾವಿರ ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದಾನೆ.
ಚಮಚವನ್ನು 90 ಪೈಸೆಗೆ ಖರೀದಿಸಲಾಗಿದೆ:
ದಿ ಸನ್ ನ ವರದಿಯ ಪ್ರಕಾರ, ಓರ್ವ ವ್ಯಕ್ತಿಯು ಬಜಾರ್ನಲ್ಲಿ (Bazar) ಹಾದುಹೋಗುವಾಗ ರಸ್ತೆ ಬದಿಯಲ್ಲಿ ಮಾರಾಟಮಾಡಲಾಗುತ್ತಿದ್ದ ವಸ್ತುಗಳನ್ನು ನೋಡಿದರು. ಆಗ ಮೊದಲ ನೋಟದಲ್ಲಿಯೇ ಸ್ಪೂನ್ ವಿಶೇಷವಾಗಿದೆ ಎಂದು ಅರಿತುಕೊಂಡ ವ್ಯಕ್ತಿಯು ಈ ಹಳೆಯ ಚಮಚವನ್ನು 90 ಪೈಸೆಗೆ ಖರೀದಿಸಿದರು. ಇದರ ನಂತರ ವ್ಯಕ್ತಿಯು ಈ 5-ಇಂಚಿನ ಚಮಚವನ್ನು ಪರೀಕ್ಷಿಸಿದನು. ನಂತರ ಅದು ಬೆಳ್ಳಿಯ ಚಮಚ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ ಇದು 13 ನೇ ಶತಮಾನದ ರೋಮನ್ ಯುರೋಪಿಯನ್ ಶೈಲಿಯ ವಿನ್ಯಾಸದ್ದಾಗಿದೆ ಎಂದು ತಿಳಿದ ಬಳಿಕ ಆ ವ್ಯಕ್ತಿಗೆ ಜಾಕ್ ಪಾಟ್ ಸಿಕ್ಕಿದೆ ಎಂದು ಮನವರಿಕೆಯಾಯಿತು.
ಇದನ್ನೂ ಓದಿ- Home Insurance Scheme: ಪ್ರವಾಹ, ಭೂಕಂಪದಿಂದ ಮನೆ ಹಾನಿಗೊಳಗಾದರೆ ಸಿಗಲಿದೆ 3 ಲಕ್ಷ ರೂಪಾಯಿ!
90 ಪೈಸೆಗೆ ಖರೀದಿಸಿದ ಚಮಚ 2 ಲಕ್ಷಕ್ಕೆ ಹರಾಜಿನಲ್ಲಿ ಮಾರಾಟ :
ಇದರ ನಂತರ, ವ್ಯಕ್ತಿಯು ಚಮಚದ (Spoon) ಪ್ರಸ್ತುತ ಬೆಲೆಯನ್ನು ಅಂದಾಜು ಮಾಡಿದ್ದು, ಅದು ಸುಮಾರು 52 ಸಾವಿರ ರೂ. ಮೌಲ್ಯದ್ದಾಗಿದೆ ಎಂದು ಕಂಡು ಕೊಂಡಿದ್ದಾನೆ. ಬಳಿಕ ಅದನ್ನು ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಹರಾಜಿಗೆ ಇಟ್ಟನು. ಆದರೆ ಕ್ರಮೇಣ ಹರಾಜಿನಲ್ಲಿ ಅದರ ಬಿಡ್ ಹೆಚ್ಚಾಗುತ್ತಲೇ ಹೋಯಿತು. ಆದರೆ ಕೊನೆಯಲ್ಲಿ ಈ ಚಮಚದ ಬಿಡ್ ಅನ್ನು 1 ಲಕ್ಷ 97 ಸಾವಿರ ರೂಪಾಯಿಗೆ ಅಂತಿಮಗೊಳಿಸಲಾಯಿತು. ತೆರಿಗೆಗಳು ಮತ್ತು ಹೆಚ್ಚುವರಿ ಶುಲ್ಕಗಳನ್ನು ಸೇರಿಸಿ, ಅದರ ಬೆಲೆ 2 ಲಕ್ಷಗಳನ್ನು ದಾಟಿದೆ, ಅದು ಖರೀದಿಸಿದ ಮೊತ್ತಕ್ಕಿಂತ 12 ಸಾವಿರ ಪಟ್ಟು ಹೆಚ್ಚು.
ಇದನ್ನೂ ಓದಿ- ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಆಗಸ್ಟ್ 31ರವರೆಗೆ ವಿಸ್ತರಣೆ
ಚಮಚವನ್ನು ಕಾರ್ ಬೂಟ್ ಮಾರುಕಟ್ಟೆಯಿಂದ ಖರೀದಿಸಲಾಗಿದೆ:
ಮನುಷ್ಯ ತನ್ನ ಗುರುತನ್ನು ಮರೆಮಾಡಿದ್ದಾನೆ. ಆದರೆ ಅವನ ಕಥೆಯನ್ನು ಚಮಚವನ್ನು ಹರಾಜು ಮಾಡಿದ ಕಂಪನಿಯು ಹಂಚಿಕೊಂಡಿದೆ. ವ್ಯಕ್ತಿಯು ಕಾರ್ ಬೂಟ್ ಮಾರುಕಟ್ಟೆಗೆ ಹೋಗುತ್ತಿದ್ದನು ಎಂದು ಹೇಳಲಾಗುತ್ತಿದೆ. ಅಲ್ಲಿ ಅವರು ಈ ಚಮಚವನ್ನು ನೆಲಮಾಳಿಗೆಯ ಬಳಿ ನೋಡಿದರು. ಅವರು ಚಮಚವನ್ನು ಕೇವಲ 90 ಪೈಸೆಗೆ ಖರೀದಿಸಿದರು. ಚಮಚ ತೆಗೆದುಕೊಂಡ ನಂತರ, ಆ ವ್ಯಕ್ತಿ ಸೋಮರ್ಸೆಟ್ನ ಬೆಳ್ಳಿ ತಜ್ಞ ಲಾರೆನ್ಸ್ ಹರಾಜುದಾರರನ್ನು (Lawrences Auctioneers) ಸಂಪರ್ಕಿಸಿದ. ಈ ಚಮಚವು ಬಹಳ ಮೌಲ್ಯಯುತವಾಗಿದೆ ಎಂದು ಅವರು ವ್ಯಕ್ತಿಗೆ ಹೇಳಿದರು ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ