ನವದೆಹಲಿ : Viral Video : ಮದುವೆ ಎಂದರೆ ವರನ ಸ್ನೇಹಿತರಿಗೆ ಹಬ್ಬ. ಅಲ್ಲಿ ತಮಾಷೆ, ಆಟ ತುಂಟಾಟಗಳಿಗೆ ಕೊರತೆ ಇರುವುದೇ ಇಲ್ಲ. ಸ್ನೇಹಿತರ ತಮಾಷೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಈ ತಮಾಷೆಯನ್ನು ವರನೇ ಗಂಭೀರವಾಗಿ ತೆಗೆದುಕೊಂಡರೆ ಅಲ್ಲಿ ಆಗುವ ಪರಿಣಾಮವೇ ಬೇರೆ. ಇಂಥದ್ದೇ ಒಂದು ವಿಡಿಯೋ ಈಗ ವೈರಲ್ (video viral) ಆಗುತ್ತಿದೆ. ಇಲ್ಲಿ ಸ್ನೇಹಿತರು ಮಾಡಿದ ತಮಾಷೆಯನ್ನು ಸಹಿಸುವುದು ವರನಿಗೆ ಸಾಧ್ಯವಾಗಲಿಲ್ಲ.
ಮದುವೆಯ (marriage) ದಿನ ವೇದಿಕೆಯಲ್ಲಿ ವಧು, ವರ ಕುಳಿತುಕೊಂಡಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತದೆ. ವಧು , ವರರಿಗೆ ಎಲ್ಲರೂರು ಬಂದು ಶುಭ ಹಾರೈಸುತ್ತಿದ್ದಾರೆ. ಇದರಲ್ಲಿ ಏನು ತಮಾಷೆ ಅನ್ನುತ್ತೀರಾ? ತಮಾಷೆ ಇರುವುದೇ ಮುಂದೆ. ಎಲ್ಲವು ಸಾಮಾನ್ಯವಾಗಿರುವಾಗ ವರನ ಸ್ನೇಹಿತ ಹಿಂದಿನಿಂದ ಬಂದು, ವರನ ಕೆನ್ನೆ ಹಿಂಡಲು ಶುರು ಮಾಡುತ್ತಾನೆ. ಈ ವೇಳೆ ವರನಿಗೆ ಬರುವ ಕೋಪ ಅಷ್ಟಿಷ್ಟಲ್ಲ. ಇದ್ದಕ್ಕಿಂದ್ದಂತೆ ಎದ್ದು ಸ್ನೇಹಿತನಿಗೆ ಸರಿಯಾಗಿಯೇ ಹೊಡೆಯಲು ಆರಂಭಿಸುತ್ತಾನೆ. ವರನ ಈ ರೂಪವನ್ನು ನೋಡಿ ವಧು ಕಕ್ಕಾಬಿಕ್ಕಿ.
ಇದನ್ನೂ ಓದಿ : Viral News: ಮಾಜಿ ಪ್ರೇಯಸಿಯ ಮನೆಗೆ ನುಗ್ಗಲು ಯತ್ನಿಸಿ ಕಿಟಕಿಯಲ್ಲಿ ಸಿಲುಕಿದ ಭೂಪ!; ಮುಂದೇನಾಯ್ತು ಗೊತ್ತಾ?
ಸ್ನೇಹಿತ ವರನ ಹಿಂದೆ ನಿಂತು ಫೋಟೋ ಗೆ (photo) ಪೋಸ್ ನೀಡುತ್ತಿರುತ್ತಾನೆ. ಇದ್ದಕ್ಕಿದಂತೆ ಸ್ನೇಹಿತ ಕೂಡಾ ವರನ ಕೆನ್ನೆಯನ್ನು ಹಿಂಡಲು ಆರಂಭಿಸುತ್ತಾನೆ. ಕೋಪಗೊಂಡ ವರ ಸ್ನೇಹಿತನ ಕೂದಲನ್ನು ಹಿಡಿದು ಎಳೆದು ಬೇಕಾಬಿಟ್ಟಿ ಥಳಿಸಿ ಬಿಡುತ್ತಾನೆ. ಸ್ನೇಹಿತರ ಮಧ್ಯೆಯ ಹೊಡೆದಾಟ ನಿಲ್ಲಿಸಲು ವಧು ಕೂಡಾ ಮಧ್ಯಪ್ರವೇಶ ಮಾಡುತ್ತಾಳೆ. ಆದರೆ ವರನ ಕೋಪ ನೋಡಿ ವಧು ಕೂಡ ದಂಗಾಗಿ ಬಿಡುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ : Viral Video : ನೆಟ್ಟಿಗರನ್ನು ಮೆಚ್ಚಿಸಿದೆ ನವ ವಧುವರರ ಡ್ಯಾನ್ಸ್ ಬ್ಯಾಟಲ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ