ನವದೆಹಲಿ : ನಾಗ ಪಂಚಮಿಗೆ (Nagara Panchami) ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ದಿನ ನಾಗದೇವರನ್ನು ಪೂಜಿಸಲಾಗುತ್ತದೆ. ಈ ಬಾರಿ ಆಗಸ್ಟ್ 13 ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ನಾಗನ ಪೂಜೆಗೆ ಶ್ರಾವಣ ಮಾಸದ ಪಂಚಮಿ ತಿಥಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನಾಗ ಪಂಚಮಿ ಒಂದು ಪ್ರಮುಖ ದಿನವಾಗಿದೆ. ಈ ಹಬ್ಬವನ್ನು ಶ್ರಾವಣ ಮಾಸದ (Shrawana maasa) ಶುಕ್ಲ ಪಕ್ಷ ಪಂಚಮಿಯಂದು ಆಚರಿಸಲಾಗುತ್ತದೆ. ನಾಗರಾಜನಿಗೆ ಈ ದಿನ ಪೂಜೆ ಸಲ್ಲಿಸಿದರೆ ವಿಶೇಷ ಫಲ ಸಿಗುತ್ತದೆಯಂತೆ. ಈ ದಿನ ನಾಗ ದೇವನಿಗೆ ಸಲ್ಲಿಸುವ ಪೂಜೆ, ಅರ್ಪಿಸುವ ನೈವೆದ್ಯಗಳು ನಾಗಪ್ಪನಿಗೆ ತಲುಪುತ್ತದೆ ಎನ್ನುವುದು ನಂಬಿಕೆ. ಈ ದಿನ ನಾಗರ ದೇವರ ಪ್ರತಿನಿಧಿಗಳಂತೆ ಜೀವಂತ ಹಾವುಗಳನ್ನು ಪೂಜಿಸಲಾಗುತ್ತದೆ.
ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಈ ಬಾರಿ ನಾಗ ಪಂಚಮಿ ಹಲವು ರೀತಿಯಲ್ಲಿ ವಿಶೇಷವಾಗಿರುತ್ತದೆ. ಈ ವರ್ಷ ನಾಗ ಪಂಚಮಿ ದಿನ 108 ವರ್ಷಗಳ ನಂತರ ಅಪರೂಪದ ಸಂಯೋಗ ಸಂಭವಿಸಲಿದೆ. ಕಾಳಸರ್ಪ ದೋಷವನ್ನು (Kala sarpa dosha) ತೊಡೆದು ಹಾಕಲು ಈ ಅಪರೂಪದ ಸಂಯೋಗ ಸಹಾಯಕ್ಕೆ ಬರಲಿದೆ. ಕಾಳ ಸರ್ಪ ದೋಷ ಇದ್ದವರು ಈ ದಿನ ವಿಶೇಷ ಪೂಜೆ ಸಲ್ಲಿಸಬೇಕು.
ಇದನ್ನೂ ಓದಿ : Arranged Marriage: ಈ 4 ರಾಶಿಯ ಜನರಿಗೆ ಅರೇಂಜ್ಡ್ ಮ್ಯಾರೇಜ್ ಮೇಲೆ ನಂಬಿಕೆ ಹೆಚ್ಚು, ಕಾರಣ ಏನ್ ಗೊತ್ತಾ!
ಈ ಬಾರಿ ನಾಗರ ಪಂಚಮಿಯಂದು (Nagarapanchami) ಉತ್ತರ ಯೋಗ ಮತ್ತು ಹಸ್ತ ನಕ್ಷತ್ರದ ವಿಶೇಷ ಸಂಯೋಗ ರೂಪುಗೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ, ಕಾಳ ಸರ್ಪ ದೋಷವನ್ನು ಹೋಗಲಾಡಿಸಲು ಮಾಡಿಸುವ ಪೂಜೆ ಅತ್ಯಂತ ಪರಿಣಾಮಕಾರಿಯಾಗಿರಲಿದೆ.
ಇದನ್ನೂ ಓದಿ : Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ