Vi New Postpaid Plans : ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ Vi : ಕಡಿಮೆ ಬೆಲೆಯಲ್ಲಿ ಅನಿಯಮಿತ ಇಂಟರ್ನೆಟ್ ಹಾಗೂ ಇತರ ಪ್ರಯೋಜನಗಳು

ದೀರ್ಘಕಾಲದವರೆಗೆ ವೊಡಾಫೋನ್-ಐಡಿಯಾ ನೆಟ್‌ವರ್ಕ್‌ನಲ್ಲಿ ಕೆಲವು ಸಮಸ್ಯೆಗಳು ಇದ್ದವು. ಹೀಗಾಗಿಕಂಪನಿಯು ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಪರಿಚಯಿಸಿದೆ, ಈ ಪ್ಲಾನ್ ಗಳು ತುಂಬಾ ಅದ್ಭುತವಾಗಿದೆ. ರೆಡ್‌ಎಕ್ಸ್ ಫ್ಯಾಮಿಲಿ ಪ್ಲಾನ್(Red X Postpaid Family Plan) ಹೆಸರಿನಲ್ಲಿ, ವಿ ಬಳಕೆದಾರರಿಗಾಗಿ ಬಹು ಸಂಪರ್ಕದ ಆಫರ್‌ನೊಂದಿಗೆ ಬಿಡುಗಡೆ ಮಾಡಿದೆ.

Written by - Channabasava A Kashinakunti | Last Updated : Sep 16, 2021, 10:50 AM IST
  • ವೊಡಾಫೋನ್-ಐಡಿಯಾ ಹೊಸ ಪೋಸ್ಟ್‌ಪೇಯ್ಡ್ ಪ್ಲಾನ್ ಬಿಡುಗಡೆ
  • Vi ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು 1,699 ರೂ. ಮತ್ತು 2,299 ರೂ. ಗಳ ಪ್ಲಾನ್ ಪರಿಚಯಿಸಿದೆ.
  • 1699 ರೂ. ಪ್ಲಾನ್ ನಲ್ಲಿ ಮೂರು ಸಂಪರ್ಕಗಳನ್ನು ನೀಡಲಾಗುತ್ತಿದೆ
Vi New Postpaid Plans : ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ Vi : ಕಡಿಮೆ ಬೆಲೆಯಲ್ಲಿ ಅನಿಯಮಿತ ಇಂಟರ್ನೆಟ್ ಹಾಗೂ ಇತರ ಪ್ರಯೋಜನಗಳು title=

ನವದೆಹಲಿ : ವೊಡಾಫೋನ್-ಐಡಿಯಾ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ದೀರ್ಘಕಾಲದವರೆಗೆ ವೊಡಾಫೋನ್-ಐಡಿಯಾ ನೆಟ್‌ವರ್ಕ್‌ನಲ್ಲಿ ಕೆಲವು ಸಮಸ್ಯೆಗಳು ಇದ್ದವು. ಹೀಗಾಗಿಕಂಪನಿಯು ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಪರಿಚಯಿಸಿದೆ, ಈ ಪ್ಲಾನ್ ಗಳು ತುಂಬಾ ಅದ್ಭುತವಾಗಿದೆ. ರೆಡ್‌ಎಕ್ಸ್ ಫ್ಯಾಮಿಲಿ ಪ್ಲಾನ್(Red X Postpaid Family Plan) ಹೆಸರಿನಲ್ಲಿ, ವಿ ಬಳಕೆದಾರರಿಗಾಗಿ ಬಹು ಸಂಪರ್ಕದ ಆಫರ್‌ನೊಂದಿಗೆ ಬಿಡುಗಡೆ ಮಾಡಿದೆ. ಕಂಪನಿಯು 1699 ರೂ. ಮತ್ತು 2299 ರೂ.ಗಳ ಪೋಸ್ಟ್‌ಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಅನಿಯಮಿತ ಕರೆ ಮತ್ತು ಅನಿಯಮಿತ ಡೇಟಾ ಲಭ್ಯವಿದೆ. ಈ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಾಗಿ..

Vi ನ 1,699 ರೂ. ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಪ್ಲಾನ್

ವೊಡಾಫೋನ್-ಐಡಿಯಾ(Vodafone-Idea)ದ 1,699 ರೂ. ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಯೋಜನೆಯು ಮೂರು-ಸಂಪರ್ಕದ ಯೋಜನೆಯಾಗಿದೆ. ಅಂದರೆ, ಕುಟುಂಬದ ಮೂವರು ಸದಸ್ಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ, ಬಳಕೆದಾರರು ಅನಿಯಮಿತ ಕರೆ ಮತ್ತು ಅನಿಯಮಿತ ಡೇಟಾದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 3 ಸಾವಿರ ಎಸ್ಎಂಎಸ್ ಕೂಡ ನೀಡಲಾಗುತ್ತಿದೆ. ಇದರೊಂದಿಗೆ, Amazon Prime, Netflix ಮತ್ತು Disney + Hotstar VIP ನಂತಹ ಒಂದು ವರ್ಷದ ಉಚಿತ ಚಂದಾದಾರಿಕೆ ಕೂಡ ಲಭ್ಯವಿದೆ. ಈ ಯೋಜನೆಯಲ್ಲಿ 7 ದಿನಗಳ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ ಅನ್ನು ಕೂಡ ವಿಐ ನೀಡುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ  ಒಂದು ತಿಂಗಳು ಇರುತ್ತದೆ.

ಇದನ್ನೂ ಓದಿ : YouTube's new feature: ಯೂಟ್ಯೂಬ್ ಬಳಕೆದಾರರೇ ನೀವೂ ಕೂಡ ಈ ಅದ್ಭುತ ವೈಶಿಷ್ಟ್ಯವನ್ನು ಬಳಸಿದ್ದೀರಾ!

Vi's RedX ಪೋಸ್ಟ್‌ಪೇಯ್ಡ್ ಪ್ಲಾನ್ 2,299 ರೂ.

ವೊಡಾಫೋನ್-ಐಡಿಯಾದ 2,299 ರೂ. ರೆಡ್‌ಎಕ್ಸ್ ಪೋಸ್ಟ್‌ಪೇಯ್ಡ್ ಪ್ಲಾನ್(Red X Postpaid Family Plan) ಮೂರು ಸಂಪರ್ಕದ ಪ್ಲಾನ್ ಆಗಿದೆ. ಅಂದರೆ, ಕುಟುಂಬದ ಐದು ಸದಸ್ಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ, ಬಳಕೆದಾರರು ಅನಿಯಮಿತ ಕರೆ ಮತ್ತು ಅನಿಯಮಿತ ಡೇಟಾದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 3 ಸಾವಿರ ಎಸ್ಎಂಎಸ್ ಕೂಡ ನೀಡಲಾಗುತ್ತಿದೆ. ಇದರೊಂದಿಗೆ, Amazon Prime, Netflix ಮತ್ತು Disney + Hotstar VIP ನಂತಹ ಒಂದು ವರ್ಷದ ಉಚಿತ ಚಂದಾದಾರಿಕೆ ಕೂಡ ಲಭ್ಯವಿದೆ. ಈ ಯೋಜನೆಯಲ್ಲಿ 7 ದಿನಗಳ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ ಅನ್ನು ಕೂಡ ವಿಐ ನೀಡುತ್ತಿದೆ. ಈ ಯೋಜನೆಯ ಮಾನ್ಯತೆಯು ಒಂದು ತಿಂಗಳು ಇರುತ್ತದೆ.

ಲಾಕ್-ಇನ್ ಅವಧಿ ಅಗತ್ಯವಿದೆ

ನೀವು ಈ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ನೀವು 6 ತಿಂಗಳವರೆಗೆ ಚಂದಾದಾರರಾಗಿರಬೇಕು. ಅಂದರೆ, ನೀವು ಈ ಯೋಜನೆಯನ್ನು 6 ತಿಂಗಳವರೆಗೆ ನಡೆಸಬೇಕು. ಲಾಕ್-ಇನ್ ಅವಧಿಗೆ ಮುನ್ನ ನೀವು ಯೋಜನೆಯನ್ನು ತೊರೆದರೆ, ನಿರ್ಗಮನದ ಮೊತ್ತವು 3,000 ರೂ. ಆಗಿದೆ.

ಇದನ್ನೂ ಓದಿ : WhatsApp Latest News: ದೀರ್ಘಕಾಲದ ನಿರೀಕ್ಷೆಗೆ ತೆರೆ ಎಳೆದ ವಾಟ್ಸ್ ಆಪ್, ಮಾಸ್ ಲೆವಲ್ ನಲ್ಲಿ ಈ ಅದ್ಬುತ ವೈಶಿಷ್ಟ್ಯದ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News